ಜಿಲೇಬಿ ಯಾವ ದೇಶದ ರಾಷ್ಟ್ರೀಯ ಸಿಹಿತಿನಿಸು ಎಂದು ನಿಮಗೆ ಗೊತ್ತೇ? ಉತ್ತರ ಕೇಳಿದ್ರೆ ನಿಜಕ್ಕೂ ಹುಬ್ಬೇರಿಸ್ತೀರಾ!

Published : May 21, 2026, 06:10 PM IST

Amazing Facts: ಸಾಮಾಜಿಕ ಜಾಲತಾಣಗಳಲ್ಲಿ ನೀವು ವಿವಿಧ ದೇಶಗಳ ಸಂಪ್ರದಾಯಗಳು ಮತ್ತು ವೈವಿಧ್ಯತೆಗಳಿಗೆ ಸಂಬಂಧಿಸಿದ ಹಲವಾರು ಸಂಗತಿಗಳನ್ನು ಓದಿರಬಹುದು. ಆದರೆ ಯಾವುದಾದರೂ ದೇಶದ ರಾಷ್ಟ್ರೀಯ ಸಿಹಿ ತಿನಿಸಿನ ಬಗ್ಗೆ ಕೇಳಿದ್ದೀರಾ? ಇಂದು ನಾವು ನಿಮಗೆ ಅದರ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ. 

PREV
14
ಉತ್ತರ ಕೇಳಿ ನಿಮಗೆ ಆಶ್ಚರ್ಯವಾಯ್ತಾ?

ಸಮಾರಂಭಗಳು, ಹಬ್ಬ ಹರಿದಿನಗಳು ಬಂತೆಂದರೆ ಅಲ್ಲಿ ಬಿಸಿಬಿಸಿಯಾದ ಸಿಹಿ ಜಿಲೇಬಿ ಇರಲೇಬೇಕು. ಆದರೆ ಜಿಲೇಬಿ ಯಾವ ದೇಶದ ರಾಷ್ಟ್ರೀಯ ಸಿಹಿತಿನಿಸು ಎಂದು ಪರಿಗಣಿಸಲಾಗಿದೆ ಎಂಬುದು ನಿಮಗೆ ತಿಳಿದಿದೆಯೇ? ಅನೇಕ ಮೂಲಗಳು ಮತ್ತು ಸಾಮಾನ್ಯ ಜ್ಞಾನದ ಪ್ರಕಾರ, ಇದನ್ನು ಭಾರತದ ರಾಷ್ಟ್ರೀಯ ಸಿಹಿತಿನಿಸು (National Sweet) ಎಂದು ಕರೆಯಲಾಗುತ್ತದೆ. ಉತ್ತರ ಕೇಳಿ ನಿಮಗೆ ಆಶ್ಚರ್ಯವಾಗಬಹುದು, ಏಕೆಂದರೆ ಈ ಸಿಹಿ ತಿನಿಸು ಮೂಲತಃ ಇರಾನ್‌ನಿಂದ (ಪರ್ಶಿಯಾ) ಬಂದಿದ್ದರೂ ಸಹ, ಭಾರತವು ಇದನ್ನು ತನ್ನದಾಗಿಸಿಕೊಂಡಿದೆ.

24
ಜಿಲೇಬಿಯ ಇತಿಹಾಸ

ಮೊದಲನೆಯದಾಗಿ ಜಿಲೇಬಿಯನ್ನು ವಿವಿಧ ದೇಶ ಮತ್ತು ಭಾಷೆಗಳಲ್ಲಿ ಜಲೇಬಿ, ಜಿಲಾಪಿ, ಜುಲ್ಬಿಯಾ ಅಥವಾ ಜಲಾಬಿಯಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ವರದಿಗಳ ಪ್ರಕಾರ, ಇದರ ಇತಿಹಾಸವು 10ನೇ ಶತಮಾನದ ಅರೇಬಿಕ್ ಮತ್ತು ಪರ್ಶಿಯನ್ ಗ್ರಂಥಗಳವರೆಗೆ ಹೋಗುತ್ತದೆ. ಇದರ ಮೂಲ ಹೆಸರು 'ಜಲಾಬಿಯಾ' ಅಥವಾ 'ಜುಲ್ಬಿಯಾ' ಆಗಿತ್ತು. ಪರ್ಶಿಯಾ (ಆಧುನಿಕ ಇರಾನ್) ಮತ್ತು ಮಧ್ಯಪ್ರಾಚ್ಯದಲ್ಲಿ ಈ ಸಿಹಿಯನ್ನು ರಂಜಾನ್ ಮತ್ತು ಇತರ ಉತ್ಸವಗಳಲ್ಲಿ ಉಣಬಡಿಸಲಾಗುತ್ತಿತ್ತು. 12ರಿಂದ 15ನೇ ಶತಮಾನದ ಅವಧಿಯಲ್ಲಿ ವ್ಯಾಪಾರಿಗಳು, ಮೊಘಲರು ಮತ್ತು ಪರ್ಶಿಯನ್ ಪ್ರಯಾಣಿಕರೊಂದಿಗೆ ಇದು ಭಾರತೀಯ ಉಪಖಂಡಕ್ಕೆ ಬಂದಿತು. ಇಲ್ಲಿಗೆ ಬಂದ ನಂತರ ಇದರ ರುಚಿ, ಆಕಾರ ಮತ್ತು ವಿನ್ಯಾಸ ಸಂಪೂರ್ಣವಾಗಿ ಭಾರತೀಯಮಯವಾಯಿತು.

34
ಭಾರತದ ಅನಧಿಕೃತ ರಾಷ್ಟ್ರೀಯ ಸಿಹಿ ತಿನಿಸು

ಇಂದು ಜಿಲೇಬಿ ಯಾವುದೇ ಅಧಿಕೃತ ಘೋಷಣೆಯಿಲ್ಲದೆಯೇ ಭಾರತದ 'ಅನಧಿಕೃತ ರಾಷ್ಟ್ರೀಯ ಸಿಹಿ'ಯಾಗಿ ಮಾರ್ಪಟ್ಟಿದೆ. ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಶಾಲಾ-ಕಾಲೇಜು ಕಾರ್ಯಕ್ರಮಗಳಲ್ಲಿ ಇದನ್ನು ಹಂಚಲಾಗುತ್ತದೆ. ಭಾರತದ ವಿವಿಧ ಭಾಗಗಳಲ್ಲಿ ಜಿಲೇಬಿಯನ್ನು ಬೇರೆ ಬೇರೆ ಆಹಾರಗಳ ಜೊತೆ ಸವಿಯಲಾಗುತ್ತದೆ. ಉತ್ತರ ಭಾರತದಲ್ಲಿ ಇದನ್ನು ಬೆಳಗಿನ ಚಹಾ ಅಥವಾ ಹಾಲು-ಮೊಸರಿನೊಂದಿಗೆ ಸೇವಿಸಿದರೆ, ಮಧ್ಯಪ್ರದೇಶದಲ್ಲಿ ಮಂಡಕ್ಕಿ ಒಗ್ಗರಣೆಯ (ಪೋಹಾ) ಜೊತೆ ಸವಿಯುತ್ತಾರೆ. ಇನ್ನು ದಕ್ಷಿಣ ಭಾರತದಲ್ಲಿ ಜಿಲೇಬಿ ಎಂದೇ ಪ್ರಸಿದ್ಧವಾಗಿರುವ ಇದನ್ನು ಬಂಗಾಳದಲ್ಲಿ 'ಜಿಲಾಪಿ' ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಭಾರತೀಯರು ಸಮೋಸಾ ಮತ್ತು ಬಿರಿಯಾನಿಯಂತೆಯೇ ಈ ವಿದೇಶಿ ಸಿಹಿಯನ್ನು ಕೂಡ ತಮ್ಮ ಸಂಸ್ಕೃತಿಯಲ್ಲಿ ಬೆರೆಸಿಕೊಂಡಿದ್ದಾರೆ. ಇಂದು ಜಿಲೇಬಿ ಬೀದಿ ಬದಿಯ ಆಹಾರದಿಂದ ಹಿಡಿದು ಪಂಚತಾರಾ ಹೋಟೆಲ್‌ಗಳವರೆಗೆ ತಲುಪಿದೆ.

44
ಯಾವ ದೇಶಗಳಲ್ಲಿ ಜಿಲೇಬಿ ಪ್ರಸಿದ್ಧ?

ಭಾರತದ ಹೊರತಾಗಿ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ (ಜೇರಿ), ಅಫ್ಘಾನಿಸ್ತಾನ, ಈಜಿಪ್ಟ್, ಟುನೀಶಿಯಾ ಮುಂತಾದ ದೇಶಗಳಲ್ಲಿ ಜಿಲೇಬಿ ಸಾಕಷ್ಟು ಜನಪ್ರಿಯವಾಗಿದೆ. ಆದರೆ ಭಾರತದಲ್ಲಿ ಇದರ ಸಾಂಸ್ಕೃತಿಕ ಪ್ರಾಮುಖ್ಯತೆ ಅತ್ಯಂತ ಆಳವಾಗಿದೆ. ಕೆಲವು ಮೂಲಗಳು ಇದನ್ನು ಪಾಕಿಸ್ತಾನದ ಜನಪ್ರಿಯ ಸಿಹಿ ಎಂದೂ ಹೇಳುತ್ತವೆ, ಆದರೆ 'ರಾಷ್ಟ್ರೀಯ ಸಿಹಿ' ಎಂಬ ಬಿರುದು ಮುಖ್ಯವಾಗಿ ಮತ್ತು ಅನಧಿಕೃತವಾಗಿ ಭಾರತದೊಂದಿಗೆ ಗುರುತಿಸಲ್ಪಟ್ಟಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories