ಚಳಿಗಾಲದಲ್ಲಿ ಮಟನ್ ಸಾರು ಹೆಚ್ಚು ರುಚಿಯಾಗಿರುವುದರ ಜೊತೆಗೆ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಇದು ರೋಗನಿರೋಧಕ ಶಕ್ತಿ ಹೆಚ್ಚಿಸಿ, ರಕ್ತಹೀನತೆ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ನಾನ್‌ವೆಜ್ ಪ್ರಿಯರಿಗೆ ಮಟನ್ ಅಂದರೆ ಪಂಚಪ್ರಾಣ. ಬೇರೆಲ್ಲಾ ಕಾಲಕ್ಕಿಂತ ಚಳಿಗಾಲದಲ್ಲಿ ಮಟನ್ ಸಾರು ತುಂಬಾನೇ ರುಚಿಯಾಗಿರುತ್ತೆ. ನಾವು ಯಾವಾಗಲೂ ಮಾಡುವ ಹಾಗೆ ಅಡುಗೆ ಮಾಡಿದರೂ, ಚಳಿಗಾಲದಲ್ಲಿ ಮಾತ್ರ ಇದರ ರುಚಿ ಹೆಚ್ಚಾಗುವುದು ಹೇಗೆ? ರುಚಿ ಮಾತ್ರವಲ್ಲ, ಈ ಚಳಿಯಲ್ಲಿ ಮಟನ್ ತಿಂದರೆ ನಮ್ಮ ದೇಹಕ್ಕೆ ಏನೆಲ್ಲಾ ಲಾಭಗಳಿವೆ ಅನ್ನೋದನ್ನು ಈಗ ನೋಡೋಣ.
26
ಪ್ರೋಟೀನ್ ಮತ್ತು ಕೊಬ್ಬಿನಂಶ
ಚಳಿಗಾಲದಲ್ಲಿ ನಮ್ಮ ದೇಹ ಸಹಜವಾಗಿಯೇ ಬೆಚ್ಚಗಿರಲು ಬಯಸುತ್ತದೆ. ಮಟನ್‌ನಲ್ಲಿರುವ ಪ್ರೋಟೀನ್ ಮತ್ತು ಕೊಬ್ಬಿನಂಶ ದೇಹವನ್ನು ಒಳಗಿನಿಂದ ಬೆಚ್ಚಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಬಿಸಿ ಬಿಸಿ ಮಟನ್ ಸಾರು ತಿಂದಾಗ ನಮಗೆ ತೃಪ್ತಿ ಸಿಗುತ್ತದೆ.
36
ಮಸಾಲೆಗಳ ಮ್ಯಾಜಿಕ್
ಮಟನ್ ಅಡುಗೆಯಲ್ಲಿ ನಾವು ಮೆಣಸು, ಲವಂಗ, ಚಕ್ಕೆ ಮುಂತಾದ ಮಸಾಲೆಗಳನ್ನು ಬಳಸುತ್ತೇವೆ. ಇವು ರಕ್ತಸಂಚಾರವನ್ನು ಹೆಚ್ಚಿಸಿ ದೇಹದ ಉಷ್ಣತೆಯನ್ನು ಕಾಪಾಡುತ್ತವೆ. ಚಳಿಗಾಲದಲ್ಲಿ ಈ ಮಸಾಲೆಗಳ ಘಮ ಮಟನ್ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜೊತೆಗೆ, ಮಟನ್ ಅನ್ನು ಯಾವಾಗಲೂ ನಿಧಾನವಾಗಿ ಬೇಯಿಸಬೇಕು. ಇದರಿಂದ ರುಚಿ ಹೆಚ್ಚಾಗುತ್ತದೆ.
ಮಟನ್ ಮೃದುವಾಗಿ ಬೆಂದು, ಮಸಾಲೆಗಳು ಚೆನ್ನಾಗಿ ಹಿಡಿಯಲು ಹೆಚ್ಚು ಸಮಯ ಬೇಕಾಗುತ್ತದೆ. ಚಳಿಗಾಲದಲ್ಲಿ ಅಡುಗೆಮನೆಯ ಉಷ್ಣಾಂಶ ಕಡಿಮೆಯಿರುವುದರಿಂದ ಮಟನ್ ನಿಧಾನವಾಗಿ ಬೇಯುತ್ತದೆ. ಇದರಿಂದ ಗ್ರೇವಿ ರೇಷ್ಮೆಯಂತೆ ಮೃದುವಾಗಿ, ಬಾಯಲ್ಲಿಟ್ಟರೆ ಕರಗುವಷ್ಟು ರುಚಿಯಾಗಿರುತ್ತದೆ.
56
ಮಟನ್ ಸೇವನೆಯ ಆರೋಗ್ಯಕರ ಲಾಭಗಳು
ದೇಹಕ್ಕೆ ಶಕ್ತಿ ಮತ್ತು ಉಷ್ಣತೆ: ಚಳಿಗಾಲದಲ್ಲಿ ನಮ್ಮ ದೇಹ ಸಹಜವಾಗಿಯೇ ಬೆಚ್ಚಗಿರಲು ಬಯಸುತ್ತದೆ. ಮಟನ್‌ನಲ್ಲಿರುವ ಪ್ರೋಟೀನ್ ಮತ್ತು ಕೊಬ್ಬು ದೇಹಕ್ಕೆ ಶಕ್ತಿ ಹಾಗೂ ಉಷ್ಣತೆಯನ್ನು ನೀಡುತ್ತವೆ.
ರೋಗನಿರೋಧಕ ಶಕ್ತಿ: ಮಟನ್‌ನಲ್ಲಿ ವಿಟಮಿನ್ ಬಿ12, ಜಿಂಕ್ ಮತ್ತು ಐರನ್ ಹೇರಳವಾಗಿದೆ. ಇವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಚಳಿಗಾಲದ ಕಾಯಿಲೆಗಳಿಂದ ನಮ್ಮನ್ನು ಕಾಪಾಡುತ್ತವೆ.
66
ಮಟನ್ ಸೇವನೆಯ ಆರೋಗ್ಯಕರ ಲಾಭಗಳು
ಸ್ನಾಯುಗಳ ಬಲ: ಮಟನ್‌ನಲ್ಲಿರುವ ಉತ್ತಮ ಗುಣಮಟ್ಟದ ಪ್ರೋಟೀನ್ ಸ್ನಾಯುಗಳ ಬೆಳವಣಿಗೆಗೆ ಮತ್ತು ದೇಹದ ದೃಢತೆಗೆ ಸಹಾಯ ಮಾಡುತ್ತದೆ.
ನರಮಂಡಲದ ಕಾರ್ಯ: ಮಟನ್‌ನಲ್ಲಿರುವ ವಿಟಮಿನ್ ಬಿ ಕಾಂಪ್ಲೆಕ್ಸ್ ನರಮಂಡಲವನ್ನು ಆರೋಗ್ಯವಾಗಿಟ್ಟು, ಮೆದುಳು ಚುರುಕಾಗಿ ಕೆಲಸ ಮಾಡಲು ನೆರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.