ವಿಶ್ವದಲ್ಲಿ ಅತಿ ಹೆಚ್ಚು ಜೀವಿತಾವಧಿ ಹೊಂದಿರುವವರು ಜಪಾನಿಗರು. ಜಪಾನಿನ ಜನರ ಆರೋಗ್ಯಕ್ಕೆ ಕೊಡುಗೆ ನೀಡುವ ಹಲವಾರು ಅಂಶಗಳಿವೆ. ಇವುಗಳಲ್ಲಿ ಮೀನು, ತರಕಾರಿಗಳು, ಹುದುಗಿಸಿದ ಆಹಾರಗಳು ಮತ್ತು ಅವರ ಸಾಂಪ್ರದಾಯಿಕ ಆಹಾರ ಸೇರಿ ತಿನ್ನುವ ವಿಧಾನ ಕೂಡಾ ಮುಖ್ಯವಾಗಿದೆ. ಭಾಗ ನಿಯಂತ್ರಣಕ್ಕೆ ಅವರ ವಿಧಾನ, ಗಮನವಿಟ್ಟು ತಿನ್ನುವುದು, ಸಮತೋಲನ ಮತ್ತು ಮಿತಾಹಾರ ಅವರ ಒಟ್ಟಾರೆ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.