ಪ್ರಸಿದ್ಧ ಪಬ್, ರೆಸ್ಟೋರೆಂಟ್‌ ಹೊಂದಿರುವ ನಟಿಯರಿವರು, ಬೆಂಗಳೂರಿನಲ್ಲಿ ಯಾರೆಲ್ಲ ಹೊಂದಿದ್ದಾರೆ ಗೊತ್ತೇ?

First Published | Jun 7, 2024, 3:21 PM IST

ಆಹಾರ ಮತ್ತು ಆತಿಥ್ಯ ಉದ್ಯಮವು ನಟರು, ನಿರ್ಮಾಪಕರು ಮತ್ತು ಚಲನಚಿತ್ರ ನಿರ್ಮಾಪಕರಿಗೆ ಉನ್ನತ ಹೂಡಿಕೆಯ ಆಯ್ಕೆಯಾಗಿದೆ. ಮುಂಬೈನಲ್ಲಿ ಹಲವಾರು ಪ್ರಸಿದ್ಧ ರೆಸ್ಟೋರೆಂಟ್‌ಗಳಿವೆ ಬೆಂಗಳೂರಿನಲ್ಲಿ ಕೂಡ ಅನೇಕ ಸೆಲೆಬ್ರಿಟಿಗಳು ಪ್ರಸಿದ್ಧ ರೆಸ್ಟೋರೆಂಟ್‌, ಪಬ್‌ ಗಳನ್ನು ಹೊಂದಿದ್ದಾರೆ. ಇಲ್ಲಿ ನಟಿಯರು ಮಾತ್ರ ಹೊಂದಿರುವ ರೆಸ್ಟೋರೆಂಟ್‌ ಬಗ್ಗೆ ವಿವರಣೆ ನೀಡಿಲಾಗಿದೆ. 

ಮುಂಬೈನ ಉನ್ನತ ಪ್ರಸಿದ್ಧ ರೆಸ್ಟೋರೆಂಟ್‌ ರೂ ಡು ಲಿಬಾನ್. ನಟಿ ಜೂಹಿ ಚಾವ್ಲಾ ಮತ್ತು ಅವರ ಉದ್ಯಮಿ ಪತಿ ಜೇ ಮೆಹ್ತಾ ಅವರ ಸಹ-ಮಾಲೀಕತ್ವದ ಶ್ರೀಮಂತ ರೆಸ್ಟೋರೆಂಟ್ ಆಗಿದೆ. 3,200 ಚದರ ಅಡಿಯಲ್ಲಿ ಇದನ್ನು ಸ್ಥಾಪನೆ ಮಾಡಲಾಗಿದ್ದು, ಲೆಬನೀಸ್, ಪಾನೀಯಗಳು,  ಸಲಾಡ್, ಸಿಹಿತಿಂಡಿಗಳು, ಗ್ರಿಲ್ಡ್‌ ಆಹಾರಗಳು ಇಲ್ಲಿ  ಸಿಗುತ್ತವೆ.

 ಆಶಾ ಭೋಸ್ಲೆ  ಭಾರತದ ಪ್ರಸಿದ್ಧ ಹಿನ್ನೆಲೆ ಗಾಯಕಿ ಅವರು ಉದ್ಯಮಿ ಕೂಡ ಹೌದು, ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿರುವ  ಗಾಯಕಿ ಆಶಾ ಅವರು ಯುಎಇಯ ದುಬೈನಲ್ಲಿ ತಮ್ಮದೇ ಆದ ಆಶಾ ರೆಸ್ಟೋರೆಂಟ್ ಅನ್ನು 2002ರಲ್ಲಿ ಪ್ರಾರಂಭಿಸಿದ್ದಾರೆ. ಭಾರತೀಯ ಮಸಾಲೆಗಳು ಮತ್ತು ಸುವಾಸನೆಗಳ ಭರಿತ ಆಹಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಸಲುವಾಗಿ ಇದನ್ನು ತೆರೆಯಲಾಗಿದೆ. ರೆಸ್ಟೋರೆಂಟ್ ಈಗ UK ಮತ್ತು ಮಸ್ಕತ್‌ನಲ್ಲಿ ಹಲವಾರು ಶಾಖೆಗಳನ್ನು ತೆರೆದಿದೆ ಮತ್ತು ಕಾಕ್‌ಟೇಲ್‌ಗಳ ಜೊತೆಗೆ ರುಚಿಕರವಾದ ಭಾರತೀಯ ಆಹಾರವನ್ನು ಒದಗಿಸುತ್ತದೆ.

Tap to resize

 ಭಾರತೀಯ ನಟಿ, ಟಿವಿ ನಿರೂಪಕಿ, ವಿಡಿಯೋ ಜಾಕಿ, ರೂಪದರ್ಶಿಯಾಗಿರುವ ಸಾರಾ-ಜೇನ್ ಡಯಾಸ್ ಸ್ನೇಹಿತನೊಂದಿಗೆ ಸೇರಿ ಸುಂದರವಾದ ರೆಸ್ಟೋರೆಂಟ್  ಬಟರ್‌ಫ್ಲೈ ಎಂಬುದನ್ನು ತೆರೆದಿದ್ದಾರೆ. ಇದು ಮುಂಬೈನ ಮೊದಲ ಕಪ್‌ ಕೇಕ್‌ ಸ್ಟೋರ್ ಎನಿಸಿಕೊಂಡಿದೆ. ಮುಂವೈನ ಕಾರ್ ವೆಸ್ಟ್ ನಲ್ಲಿದೆ. ಇಲ್ಲಿ ವಿವಿಧ ಬಗೆಯ ಕಪ್ ಕೇಕ್ ಗಳು ಸಿಗುತ್ತವೆ. 

ಬಾಲಿವುಡ್‌ ತಾರೆ, ಫಿಟ್‌ನೆಸ್ ಫ್ರೀಕ್ ಶಿಲ್ಪಾ ಶೆಟ್ಟಿ ಅವರು ಬಾಸ್ಟಿಯನ್ ಎಂಬ ರೆಸ್ಟೋರೆಂಟ್‌ ಹೊಂದಿದ್ದಾರೆ.  ಬಾಸ್ಟಿಯನ್ ಮುಂಬೈನ  ಬಾಂದ್ರಾದಲ್ಲಿದ್ದು,  ಪ್ರೀಮಿಯಂ ತಿನಿಸುಗಳನ್ನು ನೀಡುತ್ತದೆ. ಮಾತ್ರವಲ್ಲ ಇಂಟೀರಿಯರ್ ಡಿಸೈನ್‌ನಿಂದಲೇ ಹೆಚ್ಚು ಆಕರ್ಷಕವಾಗಿದೆ. ಇದು ಇಂದು ಮುಂಬೈ ನಗರದ ಅತ್ಯಂತ ಪ್ರಸಿದ್ಧ ರೆಸ್ಟೊರೆಂಟ್‌ಗಳಲ್ಲಿ  ಒಂದು ಎನಿಸಿಕೊಂಡಿದೆ. 2016 ರಲ್ಲಿ ಇದನ್ನು ಪ್ರಾರಂಭಿಸಿದರು. ಬಾಸ್ಟಿಯನ್ ಅಮೇರಿಕನ್ ಪಾಕ ಪದ್ಧತಿಯನ್ನು ಹೊಂದಿದೆ. ಶಿಲ್ಪಾ ಶೆಟ್ಟಿ  ಬೆಂಗಳೂರಿನಲ್ಲಿ ಕೂಡ ಬಾಸ್ಟಿಯನ್ ಅನ್ನು ತೆರೆದಿದ್ದಾರೆ. ಮುಂಬೈನ ಜನಪ್ರಿಯ ಪಬ್‌ಗಳಲ್ಲಿ ಒಂದಾಗಿರುವ ಕ್ಲಬ್ ರಾಯಲ್ಟಿ  ಕೂಡ ಈ ಹಿಂದೆ ಶಿಲ್ಪಾ ಶೆಟ್ಟಿ ಒಡೆತನದಲ್ಲಿತ್ತು. ಈಗ ಅದನ್ನು ಸೊಹೈಲ್ ಖಾನ್  ಖರೀದಿಸಿದ್ದಾರೆ.

ಪೆರಿಜಾದ್ ಜೋರಾಬಿಯನ್ ಒಬ್ಬ ಭಾರತೀಯ ನಟಿ.  ಪೆರಿಜಾದ್ ಜೋರಾಬಿಯನ್  ಅವರು ಗೊಂಡೊಲಾ ಎಂಬ ರೆಸ್ಟೋರೆಸ್ಟ್ ಹೊಂದಿದ್ದಾರೆ. ಮುಂಬೈನ ಪಾಲಿ ಹಿಲ್ ನಲ್ಲಿರುವ ಗೊಂಡೊಲಾ ಬಹು ತಿನಿಸುಗಳ ಫೇಮಸ್ ರೆಸ್ಟೋರೆಂಟ್ ಆಗಿದ್ದು, ಇದು ಅತ್ಯುತ್ತಮ ಭಾರತೀಯ ಮತ್ತು ಚೈನೀಸ್ ಪಾಕಪದ್ಧತಿಗಳ ವಿವಿಧ ತಿನಿಸುಗಳನ್ನು ಒದಗಿಸುತ್ತದೆ.

ಬಾಲಿವುಡ್ ನಟ ಶಾರುಖ್ ಪತ್ನಿ  ಗೌರಿ ಖಾನ್  ಮುಂಬೈನ ಬಾಂದ್ರಾದಲ್ಲಿ ಏಷ್ಯನ್ ರೆಸ್ಟೋರೆಂಟ್ ಟೋರಿ ಎಂಬದನ್ನು ತೆರೆದಿದ್ದಾರೆ.  ವಿನ್ಯಾಸಲ್ಲಿ ಅತ್ಯಂತ ವಿಭಿನ್ನವಾಗಿ ಆಕರ್ಷಣೀಯವಾಗಿದೆ. ಏಷ್ಯಾ ಖಂಡದ ಎಲ್ಲಾ ದೇಶಗಳ ಆಹಾರ ಇಲ್ಲಿ ಲಭ್ಯವಿದೆ.

ಬಾಲಿವುಡ್ ನಟಿ ಆಯೇಶಾ ಟಾಕಿಯಾ ಸ್ಥಾಪಿಸಿರುವ ಮದ್ರಾಸ್ ಟಾಕೀಸ್ ರೆಸ್ಟೋರೆಂಟ್‌ ದಕ್ಷಿಣ ಭಾರತೀಯ ಮತ್ತು ಸಿಚುವಾನ್ ಭಕ್ಷ್ಯಗಳ ರುಚಿಗೆ ಹೆಸರುವಾಸಿಯಾಗಿದೆ. ಈ ರೆಸ್ಟೋರೆಂಟ್ ಮುಂಬೈನಲ್ಲಿ ಪುಡಿ ದೋಸೆಗಳು , ಮಲಬಾರ್ ಶೈಲಿಯ ಪರೋಟಾಗಳು ದಕ್ಷಿಣ ಭಾರತದ ಆಹಾರವನ್ನು ಒದಗಿಸುತ್ತದೆ.

Latest Videos

click me!