ಸಮೋಸಾ, ಪಕೋಡಾ ಎಲ್ಲದಕ್ಕೂ ಹಸಿರು ಚಟ್ನಿ ಇದ್ರೆ ರುಚಿ. ಮನೆಯಲ್ಲಿ ತಯಾರಿಸಿದ ಚಟ್ನಿ, ಹೊಟೇಲ್ ನಷ್ಟು ಹಸಿರಾಗಿ ಬರೋದಿಲ್ಲ. ಮನೆಯಲ್ಲಿ ಮಾಡಿದ ಚಟ್ನಿ ಬೇಗ ಕಪ್ಪಾಗುತ್ತೆ. ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿದ್ರೆ ನೀವೂ ಮನೆಯಲ್ಲಿ ರುಚಿಯಾದ ಹಾಗೂ ರೆಸ್ಟೋರೆಂಟ್ ಸ್ಟೈಲ್ ನಲ್ಲಿ ಹಸಿರಾದ ಚಟ್ನಿ ತಯಾರಿಸಬಹುದು.
1 ಕಪ್ ತಾಜಾ ಕೊತ್ತಂಬರಿ ಸೊಪ್ಪು, 1/2 ಕಪ್ ಪುದೀನ ಎಲೆಗಳು, 2 ಹಸಿರು ಮೆಣಸಿನಕಾಯಿ, 4-5 ಬೆಳ್ಳುಳ್ಳಿ ಎಸಳು, 1 ಸಣ್ಣ ಶುಂಠಿ, 1 ಚಮಚ ನಿಂಬೆ ರಸ, 1/2 ಟೀಚಮಚ ಹುರಿದ ಜೀರಿಗೆ, ರುಚಿಗೆ ತಕ್ಕಷ್ಟು ಉಪ್ಪು, 2-3 ಐಸ್ ಕ್ಯೂಬ್ಗಳು, 1-2 ಟೇಬಲ್ಸ್ಪೂನ್ ನೀರು.
26
ಇದರ ಬಗ್ಗೆ ಗಮನ ಇರಲಿ
ನೀವು ಚಟ್ನಿಗೆ ಬಳಸುವ ಕೊತ್ತಂಬರಿ ಸೊಪ್ಪು ಹಾಗೂ ಪುದೀನಾ ಸೊಪ್ಪು ತಾಜಾ ಆಗಿರಬೇಕು. ಹಳದಿ ಬಣ್ಣಕ್ಕೆ ತಿರುಗಿದ ಇಲ್ಲವೆ ಒಣಗಿದ ಸೊಪ್ಪನ್ನು ಬಳಸಬೇಡಿ. ಇದ್ರಿಂದ ಚಟ್ನಿ ಕಪ್ಪಾಗುತ್ತದೆ. ಎಲೆಗಳನ್ನು ಚೆನ್ನಾಗಿ ತೊಳೆದು ಹೆಚ್ಚುವರಿ ನೀರನ್ನು ತೆಗೆಯಲು ಮರೆಯಬೇಡಿ.
36
ಹೀಗೆ ಬಣ್ಣ ಕಾಪಾಡಿಕೊಳ್ಳಿ
ರೆಸ್ಟೋರೆಂಟ್ ಶೈಲಿಯ ಹಸಿರು ಚಟ್ನಿಯ ದೊಡ್ಡ ರಹಸ್ಯವೆಂದರೆ ಐಸ್ ಕ್ಯೂಬ್ಗಳು. ಚಟ್ನಿಯನ್ನು ರುಬ್ಬುವಾಗ ಮಿಕ್ಸರ್ಗೆ 2-3 ಐಸ್ ಕ್ಯೂಬ್ಗಳನ್ನು ಸೇರಿಸಿ. ಇದು ಮಿಕ್ಸರ್ನ ಶಾಖವನ್ನು ಕಡಿಮೆ ಮಾಡುತ್ತದೆ ಮತ್ತು ಎಲೆಗಳ ನೈಸರ್ಗಿಕ ಹಸಿರು ಬಣ್ಣವನ್ನು ಸಂರಕ್ಷಿಸುತ್ತದೆ.
ಕೊತ್ತಂಬರಿ, ಪುದೀನ, ಹಸಿರು ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ, ಹುರಿದ ಜೀರಿಗೆ ಮತ್ತು ಉಪ್ಪನ್ನು ಮಿಕ್ಸರ್ ಜಾರ್ನಲ್ಲಿ ಹಾಕಿ. ಈಗ ನಿಂಬೆ ರಸ ಮತ್ತು ಐಸ್ ಕ್ಯೂಬ್ಗಳನ್ನು ಸೇರಿಸಿ. ಅಗತ್ಯವಿರುವಂತೆ ಸ್ವಲ್ಪ ತಣ್ಣೀರು ಸೇರಿಸಿ ಮತ್ತು ನುಣ್ಣಗೆ ರುಬ್ಬಿಕೊಳ್ಳಿ. ಒಂದೇ ಬಾರಿ ಹೆಚ್ಚು ನೀರು ಹಾಕದೆ ನಿಧಾನವಾಗಿ ಅಗತ್ಯವಿರುಷ್ಟೇ ನೀರನ್ನು ಹಾಕಿ
56
ನಿಂಬೆ ರಸ ಏಕೆ ಬೇಕು?
ನಿಂಬೆ ರಸವು ರುಚಿಯನ್ನು ಹೆಚ್ಚಿಸುವುದಲ್ಲದೆ, ಚಟ್ನಿಯ ಹಸಿರು ಬಣ್ಣವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಚಟ್ನಿಗೆ ಸ್ವಲ್ಪ ಖಾರದ ರುಚಿ ನೀಡುತ್ತದೆ.
66
ಈ ತಪ್ಪು ಮಾಡ್ಬೇಡಿ
ಚಟ್ನಿಯನ್ನು ರುಬ್ಬುವಾಗ ಯಾವುದೇ ಕಾರಣಕ್ಕೂ ಬಿಸಿನೀರನ್ನು ಬಳಸಬೇಡಿ. ದೀರ್ಘಕಾಲದವರೆಗೆ ಮಿಕ್ಸರ್ ಅನ್ನು ನಿರಂತರವಾಗಿ ಚಲಾಯಿಸಬೇಡಿ. ಹೆಚ್ಚು ನೀರು ಸೇರಿಸುವುದನ್ನು ತಪ್ಪಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.