ಭಾರತದ ತಿಂಡಿಗಳ ರಾಜ ಸಮೋಸಾಕ್ಕೆ ಇಂಗ್ಲಿಷ್‌ನಲ್ಲಿ ಏನಂತಾರೆ? 99% ಜನಕ್ಕೆ ಈ ಹೆಸರು ಗೊತ್ತಿಲ್ಲ

Published : Nov 25, 2025, 07:49 AM IST

ಸಂಜೆಯ ತಿಂಡಿಗಳ ರಾಜ ಎನಿಸಿರುವ ಸಮೋಸ ಭಾರತೀಯ ಖಾದ್ಯವಲ್ಲ, ಇದು ಮೊಘಲರ ಮೂಲಕ ಇರಾನ್‌ನಿಂದ ಬಂದಿದೆ. ಭಾರತದಾದ್ಯಂತ ಜನಪ್ರಿಯವಾಗಿರುವ ಈ ತಿಂಡಿಗೆ ಇಂಗ್ಲಿಷ್‌ನಲ್ಲಿ ವಿಶಿಷ್ಟ ಹೆಸರಿದೆ ಎಂದು ಈ ಲೇಖನ ವಿವರಿಸುತ್ತದೆ.

PREV
16
ಬಿಸಿ ಬಿಸಿ ಸಮೋಸ

ಇಂದು ಸಂಜೆಯಾಗುತ್ತಿದ್ದಂತೆ ಜನರಿಗೆ ಏನಾದ್ರು ತಿಂಡಿ ತಿನ್ನಬೇಕು ಅನ್ನಿಸಿದಾಗ ಕಣ್ಮುಂದೆ ಸಮೋಸ ಬರುತ್ತದೆ. ಒಂದು ಕಪ್ ಚಹ ಜೊತೆಯಲ್ಲಿ ಸಮೋಸ ತಿಂದ್ರೆ ಅದರ ಆನಂದವೇ ಬೇರೆಯಾಗಿರುತ್ತದೆ. ಅದರಲ್ಲಿಯೂ ಚಳಿಗಾಲದ ಸಂಜೆ ಕಣ್ಮುಂದೆ ಬಿಸಿ ಬಿಸಿ ಸಮೋಸ ತಿನ್ನಲು ಯಾರೂ ಸಹ ಹಿಂದೇಟು ಹಾಕಲ್ಲ. ಭಾರತೀಯರು ಅತ್ಯಧಿಕವಾಗಿ ತಿಂಡಿಯಾಗಿ ತಿನ್ನುವ ಆಹಾರದಲ್ಲಿ ಸಮೋಸ ಸಹ ಒಂದಾಗಿದೆ.

26
ತಿಂಡಿಗಳ ರಾಜ

ಆಹಾರ ಪ್ರಿಯರಿಗೆ ಸಮೋಸಾ ಅಂದ್ರೆ ತುಂಬಾ ಇಷ್ಟ. ಊಟ ಮಾಡದಿದ್ದರೂ ಸಮೋಸಾದಿಂದಲೇ ಹೊಟ್ಟೆ ತುಂಬಿಸಿಕೊಳ್ಳುವವರು ಅನೇಕರಿದ್ದಾರೆ. ಅದಕ್ಕಾಗಿಯೇ ಸಮೋಸಾವನ್ನು ತಿಂಡಿಗಳ ರಾಜ ಎಂದು ಕರೆಯುವುದರಲ್ಲಿ ಯಾವುದೇ ಉತ್ಪ್ರೇಕ್ಷೆಯಿಲ್ಲ. ಮುಂಬೈ ಅಂತಹ ಮಹಾನಗರಗಳಲ್ಲಿ ಎಷ್ಟೋ ಜನರು ಒಂದು ಸಮೋಸದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ.

36
ಇಂಗ್ಲಿಷ್‌ನಲ್ಲಿ ಇದಕ್ಕೆ ಮತ್ತೊಂದು ಹೆಸರು

ಭಾರತದ ಯಾವುದೇ ಭಾಗಕ್ಕೂ ತೆರಳಿದ್ರೂ ನಿಮಗೆ ಸಮೋಸ ಸಿಗುತ್ತದೆ. ಈ ಸಮೋಸ ತಯಾರಿಸುವ ವಿಧಾನ ಮತ್ತು ರುಚಿ ಸ್ಥಳದಿಂದ ಸ್ಥಳಕ್ಕೆ ಭಿನ್ನವಾಗಿರಬಹುದು. ಆದರೆ ಎಲ್ಲೆಡೆ ಇದರ ಹೆಸರು ಸಮೋಸಾ ಆಗಿದೆ. 

ಕನ್ನಡ, ತಮಿಳು, ತೆಲಗು ಹಿಂದಿ, ಉರ್ದು ಸೇರಿದಂತೆ ಭಾರತದ ಎಲ್ಲಾ ಭಾಷೆಗಳಲ್ಲಿಯೂ ಇದನ್ನು ಸಮೋಸ ಎಂದು ಕರೆಯಲಾಗುತ್ತದೆ. ಭಾರತದಲ್ಲಿ ಇಂಗ್ಲಿಷ್‌ನಲ್ಲಿಯೂ ಈ ತಿಂಡಿಯನ್ನು ಸಮೋಸ ಅಂತಾನೇ ಕರೆಯುತ್ತಾರೆ. ಆದರೆ ಇಂಗ್ಲಿಷ್‌ನಲ್ಲಿ ಇದಕ್ಕೆ ಮತ್ತೊಂದು ಹೆಸರಿದೆ.

46
ಮೊಘಲರಿಂದ ಭಾರತಕ್ಕೆ ಬಂದ ಸಮೋಸ

ಸಮೋಸಾಗಳು ನಮ್ಮ ದೇಶದಲ್ಲಿ ಮಾತ್ರವಲ್ಲದೆ ಇತರ ಹಲವು ದೇಶಗಳಲ್ಲಿಯೂ ಲಭ್ಯವಿದೆ. ಆ ದೇಶಗಳಲ್ಲಿಯೂ ಅವು ರುಚಿಕರವಾದ ಆಹಾರವೆಂದು ಗುರುತಿಸಲ್ಪಟ್ಟಿವೆ. ಇದರಿಂದಾಗಿ ವಿದೇಶದಲ್ಲಿರುವ ಭಾರತೀಯರು ಸಮೋಸಾದ ರುಚಿಯನ್ನು ಮರೆತಿಲ್ಲ. ಅಂದರೆ ಸಮೋಸಾ ಪ್ಯಾನ್ ಇಂಡಿಯಾ ಅಲ್ಲ, ಬದಲಾಗಿ ಪ್ಯಾನ್ ವರ್ಲ್ಡ್ ತಿಂಡಿಯಾಗಿದೆ. 

ಆಶ್ಚರ್ಯವೆಂದರೆ, ಅನೇಕ ಜನರು ಸಮೋಸಾವನ್ನು ಭಾರತೀಯ ಖಾದ್ಯ ಎಂದು ಭಾವಿಸುತ್ತಾರೆ. ಆದರೆ ಸಮೋಸಾ ಇರಾನಿನ ಖಾದ್ಯ. ಅಲ್ಲಿ ಸಮೋಸಾವನ್ನು 'ಸಂಬೋಸಾ' ಎಂದು ಕರೆಯಲಾಗುತ್ತದೆ. ಈ ಆಹಾರವು ಮೊಘಲರ ಮೂಲಕ ಭಾರತಕ್ಕೆ ಬಂದಿತು ಎಂದು ತಜ್ಞರು ಹೇಳುತ್ತಾರೆ.

56
ಈರುಳ್ಳಿ, ಆಲೂಗಡ್ಡೆ ಸಮೋಸ

ಇತ್ತೀಚಿನ ದಿನಗಳಲ್ಲಿ ಸಮೋಸಾವನ್ನು ದಾಲ್ ಜೊತೆಗೆ ಆಲೂಗಡ್ಡೆಯಿಂದ ತುಂಬಿಸಲಾಗುತ್ತದೆ. ಹಿಂದೆ ಸಮೋಸಾವನ್ನು ಕೊಚ್ಚಿದ ಮಾಂಸದಿಂದ ತುಂಬಿಸಲಾಗುತ್ತಿತ್ತು. ಕಾಲಾನಂತರದಲ್ಲಿ, ತಯಾರಿಕೆಯ ವಿಧಾನದಲ್ಲಿ ಬದಲಾವಣೆಗಳಾಗಿವೆ. ಇಂದು ಸಮೋಸ ಫಿಲ್ಲಿಂಗ್ ಮಾಡಲು ವಿವಿಧ ತರಕಾರಿ, ಚಿಕನ್, ಮಟನ್ ಮಿಶ್ರಿತ ಮಸಾಲೆಯನ್ನು ಬಳಕೆ ಮಾಡಲಾಗುತ್ತದೆ. ಆಲೂಗಡ್ಡೆ, ಈರುಳ್ಳಿ ಫಿಲ್ಲಿಂಗ್ ಸಮೋಸ ಜನಪ್ರಿಯವಾಗಿವೆ.

ಇದನ್ನೂ ಓದಿ: ಹಾಲಿನ ಟೀಗೆ ಬೆಲ್ಲ ಹಾಕಿದಾಗ ತಕ್ಷಣ ಮೊಸರಾಗುತ್ತಾ?, 99% ಜನ್ರು ಮಾಡೋ ಈ ತಪ್ಪಿಗೆ ಪರಿಹಾರ ಇಲ್ಲಿದೆ

66
ಸಮೋಸಕ್ಕಿದೆ ಇಂಗ್ಲಿಷ್‌ನಲ್ಲಿ ಹೆಸರು

ಎಲ್ಲಾ ಭಾರತೀಯ ಭಾಷೆಗಳಲ್ಲಿ ಸಮೋಸಾ ಎಂದು ಕರೆಯಲ್ಪಡುವ ಜನಪ್ರಿಯ ಆಹಾರವನ್ನು ಇಂಗ್ಲಿಷ್‌ನಲ್ಲಿ ಏನೆಂದು ಕರೆಯುತ್ತೀರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ನಮ್ಮ ದೇಶದಲ್ಲಿ ಬಹಳ ಜನಪ್ರಿಯವಾದ ರುಚಿಕರವಾದ ಆಹಾರವಾದ ಸಮೋಸಾವನ್ನು ಇಂಗ್ಲಿಷ್‌ನಲ್ಲಿ Rissole ಎಂದು ಕರೆಯಲಾಗುತ್ತದೆ. ಹಾಗೆಯೇ ಇದನ್ನು stuffed savoury pastry or savoury turnover ಎಂದು ಸಹ ಹೇಳಲಾಗುತ್ತದೆ.

ಇದನ್ನೂ ಓದಿ: ಬಟಾಣಿಯನ್ನು ವರ್ಷವಿಡೀ ಫ್ರೆಶ್ ಆಗಿಡುವುದು ಹೇಗೆ?, ಇಲ್ಲಿದೆ ಸುಲಭ ವಿಧಾನ

Read more Photos on
click me!

Recommended Stories