ಜಿರಳೆಗಳಿಂದ ತಯಾರಿಸಿದ ಕಾಫಿಯನ್ನು ಯಾರಾದರೂ ನಿಮಗೆ ನೀಡಿ, ನೀವು ಅದರ ರುಚಿ ಸವಿಯೋದನ್ನ ಎಂದಾದರೂ ಊಹಿಸಿದ್ದೀರ? ಅದನ್ನ ಕೇಳಿದ್ರೆ ನಿಮಗೆ ಅಸಹ್ಯ ಅನಿಸುತ್ತೆ ಅಲ್ವಾ? ಆದರೆ ಒಂದು ಸ್ಥಳದಲ್ಲಿ, ಜಿರಳೆ ಕಾಫಿ ಸಿಗುತ್ತೆ, ಅದನ್ನ ಕುಡಿಯೋಕೆ ಜನ ಸಾಲು ನಿಲ್ತಾರೆ.
ನಮ್ಮ ಮನೆಯಲ್ಲಿ ಜಿರಳೆಯನ್ನು ಕಂಡ ಕೂಡಲೇ ನಾವು ಕಿರುಚುತ್ತೇವೆ. ಇಲ್ಲ ಆ ಜಾಗವನ್ನೆ ಖಾಲಿ ಮಾಡುತ್ತೇವೆ. ಜನರು ಅವುಗಳನ್ನು ಓಡಿಸಲು ವಿವಿಧ ವಿಧಾನಗಳನ್ನು ಪ್ರಯತ್ನಿಸುತ್ತಾರೆ, ಆದರೆ ಒಂದು ಸ್ಥಳದಲ್ಲಿ, ಜನರು ಅದೇ ಜಿರಳೆಗಳನ್ನು ತಮ್ಮ ಕಾಫಿಯಲ್ಲಿ ಬೆರೆಸುತ್ತಿದ್ದಾರೆ. ಇದಲ್ಲದೆ, ಅವರು ಜಿರಳೆಗಳ ಜೊತೆಗೆ ಈ ಕಾಫಿಗೆ ಕೀಟಗಳನ್ನು ಸೇರಿಸುತ್ತಾರೆ.
28
ಚೀನಿಯರ ವಿಚಿತ್ರ ಆಹಾರ ಮತ್ತು ಪಾನೀಯ
ಚೀನಾ ತನ್ನ ವಿಶಿಷ್ಟ ಮತ್ತು ಅಸಾಮಾನ್ಯ ಆಹಾರಗಳಿಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಚೀನಿಯರು ಹಾವುಗಳು, ನಾಯಿಗಳು, ಹಲ್ಲಿಗಳು ಮತ್ತು ಮೊಸಳೆಗಳನ್ನು ಮತ್ತು ಇತರ ಜೀವಿಗಳನ್ನು ಬಹಳ ರುಚಿಯಿಂದ ತಿನ್ನುತ್ತಾರಂತೆ ಹಾಗಂತ ಸುದ್ದಿ ಎಲ್ಲೆಡೆ ಕೇಳಿ ಬರುತ್ತೆ.
38
ಜನರು ಜಿರಳೆ ಕಾಫಿ ಕುಡಿಯುತ್ತಾರೆ ಗೊತ್ತಾ?
ಇತ್ತೀಚೆಗೆ ಚೀನಾದಿಂದ ಇದೇ ರೀತಿಯ ಸುದ್ದಿ ಹೊರಬಿದ್ದಿದ್ದು, ಆ ಮೂಲಕ ಆಹಾರದ ವಿಷಯದಲ್ಲಿ ಚೀನಾ ಮತ್ತೆ ಚರ್ಚೆಗೆ ಕಾರಣವಾಗಿದೆ. ಇಲ್ಲಿನ ಜನರು ಈಗ ಜಿರಳೆ ಕಾಫಿ ಕುಡಿಯುತ್ತಿದ್ದಾರೆ ಎನ್ನುವ ವಿಷಯ ವರದಿಯಾಗುತ್ತಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ಪ್ರಕಾರ, ಚೀನಾದ ಬೀಜಿಂಗ್‌ನಲ್ಲಿರುವ ಕೀಟ ವಸ್ತು ಸಂಗ್ರಹಾಲಯವು "ಜಿರಳೆ ಕಾಫಿ"ಯನ್ನು ಮಾರಾಟ ಮಾಡುತ್ತಿದೆ, ಇದನ್ನು "ಕ್ರಾಲಿ-ಕ್ರಾಲಿ ಕಾಫಿ" ಎಂದೂ ಕರೆಯುತ್ತಾರೆ.
58
ಕೀಟದ ಪುಡಿಯನ್ನೂ ಸೇರಿಸುತ್ತಾರೆ
ಈ ವಿಶೇಷ ಕಾಫಿಯ ಮೇಲೆ ಜಿರಳೆ ಪುಡಿ ಮತ್ತು ಒಣಗಿದ ಹಳದಿ ಹುಳುಗಳನ್ನು ಹಾಕಲಾಗುತ್ತೆ ಎಂದು SCMP ವೆಬ್‌ಸೈಟ್ ಹೇಳುತ್ತದೆ. ಈ ಕಾಫಿಯ ಒಂದು ಕಪ್ ಬೆಲೆ ಸುಮಾರು 560 ರೂಪಾಯಿಗಳು.
68
ಇದರ ರುಚಿ ಹೇಗಿರುತ್ತದೆ?
ಚೀನಾದ ಜನರು ಇದನ್ನು ತುಂಬಾ ಇಷ್ಟಪಟ್ಟು ಕುಡಿಯಲು ಇಷ್ಟಪಡುತ್ತಾರೆ. ಅಷ್ಟೊಂದು ರುಚಿಯಾಗಿರುತ್ತಂತೆ. ಈ ಕಾಫಿಯನ್ನು ರುಚಿ ನೋಡಿದವರು ಇದರ ರುಚಿ "ಸುಟ್ಟಿರುವಂತೆ ಮತ್ತು ಸ್ವಲ್ಪ ಹುಳಿ" ಯಾಗಿರುತ್ತೆ ಎಂದು ಹೇಳಿದ್ದಾರೆ.
78
ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ
ಈ ವರ್ಷದ ಜೂನ್ ಅಂತ್ಯದಲ್ಲಿ ವಸ್ತು ಸಂಗ್ರಹಾಲಯವು ಈ ಕಾಫಿಯನ್ನು ಬಿಡುಗಡೆ ಮಾಡಿತು. ಪ್ರಸ್ತುತ, ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಈ ಕಾಫಿಯಲ್ಲಿರುವ ಎಲ್ಲಾ ಪದಾರ್ಥಗಳನ್ನು ಸಾಂಪ್ರದಾಯಿಕ ಚೀನೀ ಔಷಧ (TCM) ಅಂಗಡಿಗಳಿಂದ ಪಡೆಯಲಾಗಿದೆ ಎಂದು ವಸ್ತು ಸಂಗ್ರಹಾಲಯ ಹೇಳುತ್ತದೆ.
88
ಆರೋಗ್ಯಕ್ಕೆ ಪ್ರಯೋಜನಕಾರಿ
ಕಾಫಿಯೊಂದಿಗೆ ಜಿರಳೆ ಪುಡಿಯನ್ನು ಬೆರೆಸುವುದು ರಕ್ತ ಪರಿಚಲನೆಗೆ ಪ್ರಯೋಜನಕಾರಿ ಮತ್ತು ಒಣಗಿದ ಹಳದಿ ಹುಳುವಿನ ಪುಡಿ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳುತ್ತಾರೆ. ಯುವ ಚೀನೀಯರು ಈ ಕಾಫಿಯನ್ನು ಬಹಳ ಇಷ್ಟಪಟ್ಟು ಕುಡಿಯುತ್ತಿದ್ದಾರೆ.