ಕೋಳಿ ಮೊಟ್ಟೆ ಆರೋಗ್ಯಕ್ಕೆ ಎಷ್ಟು ಒಳ್ಳೆಯದು ಅಂತ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ದೇಹದ ಸಮಗ್ರ ಬೆಳವಣಿಗೆಗೆ ಅಗತ್ಯ ಪೋಷಕಾಂಶಗಳು ಮೊಟ್ಟೆಯಲ್ಲಿವೆ. ಉತ್ತಮ ಪ್ರೋಟೀನ್ಸ್ ಕೂಡ ಇವೆ. ಇಷ್ಟು ಒಳ್ಳೆಯ ಕೋಳಿ ಮೊಟ್ಟೆಯನ್ನು ನಾವು ಪ್ರತಿದಿನ ತಿಂಗಳು ತಿಂದರೆ ಏನಾಗುತ್ತದೆ? ನಮ್ಮ ದೇಹದಲ್ಲಿ ಯಾವ ಬದಲಾವಣೆಗಳಾಗುತ್ತವೆ? ಇದರ ಬಗ್ಗೆ ಇಲ್ಲಿದೆ ಮಾಹಿತಿ.
ಆದರೆ ತಜ್ಞರು ಹೇಳುವ ಪ್ರಕಾರ ಪ್ರತಿದಿನ ತಪ್ಪದೇ ಮೊಟ್ಟೆ ತಿಂದ್ರೆ ಎಷ್ಟು ಲಾಭಗಳಿವೆಯೋ.. ಅಷ್ಟೇ ಸೈಡ್ ಎಫೆಕ್ಟ್ ಸಹ ಇದೆ.
ಮೊಟ್ಟೆಯಲ್ಲಿ ಪ್ರೋಟೀನ್ ಹೇರಳವಾಗಿವೆ. ಇದು ಸ್ನಾಯು ಬೆಳವಣಿಗೆಗೆ, ನಿರ್ವಹಣೆಗೆ ತುಂಬಾ ಅವಶ್ಯಕ. ಅಷ್ಟೇ ಅಲ್ಲ, ಮೊಟ್ಟೆಯಲ್ಲಿ ಲ್ಯೂಟಿನ್, ಜಿಯಾಕ್ಸಾಂಥಿನ್ ಮಾದರಿ ಆ್ಯಂಟಿ ಆಕ್ಸಿಡೆಂಟ್‌ಗಳು ತುಂಬಾ ಇವೆ. ಇವು ಕಣ್ಣಿನ ಪೊರೆ, ವಯಸ್ಸಿಗೆ ಸಂಬಂಧಿಸಿದ ಸಮಸ್ಯೆಗಳು ಬಾರದಂತೆ ತಡೆಯಬಲ್ಲವು. ದೀರ್ಘಕಾಲ ಕಣ್ಣಿನ ದೃಷ್ಟಿ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲ, ಮೊಟ್ಟೆಯಲ್ಲಿ ಸಲ್ಫರ್ ಅಧಿಕವಾಗಿರುತ್ತದೆ. ಈ ಮೊಟ್ಟೆ ತಿಂದ್ರೆ.. ಕೂದಲು, ಉಗುರು ಆರೋಗ್ಯಕರವಾಗಿ ಬೆಳೆಯುತ್ತದೆ. ಸಲ್ಫರ್ ಕೆರಾಟಿನ್ ಅನ್ನೋ ಪ್ರೋಟೀನ್ ರೂಪುಗೊಳ್ಳಲು ಸಹಾಯ ಮಾಡುವ ಪ್ರಮುಖ ಖನಿಜ.
ಆದರೆ ಪ್ರತಿದಿನ ಮೊಟ್ಟೆ ತಿಂದ್ರೆ ಆಗೋ ನಷ್ಟಗಳು...
ಪ್ರತಿದಿನ ಮೊಟ್ಟೆ ತಿಂದ್ರೆ ಕೊಲೆಸ್ಟ್ರಾಲ್ ಮಟ್ಟ ಹೆಚ್ಚುತ್ತದೆ, ಇದು ಹೃದ್ರೋಗ , ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ.
ತುಂಬಾ ಮೊಟ್ಟೆ ತಿಂದ್ರೆ ದೇಹದಲ್ಲಿ ವಿಟಮಿನ್ ಎ , ಐರನ್ ಮಾದರಿಯ ಕೆಲವು ವಿಟಮಿನ್‌ಗಳು , ಖನಿಜಗಳ ಸಮತೋಲನ ತಪ್ಪಬಹುದು. ಮೊಟ್ಟೆಯಲ್ಲಿ ಕ್ಯಾಲೋರಿ ಜಾಸ್ತಿ ಇರುವುದರಿಂದ ಅವುಗಳನ್ನ ತುಂಬಾ ತಿಂದ್ರೆ ತೂಕ ಹೆಚ್ಚಬಹುದು.
ಬೇಯಿಸದ ಅಥವಾ ಸ್ವಲ್ಪ ಬೇಯಿಸಿದ ಮೊಟ್ಟೆಗಳಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಇರಬಹುದು, ಇದು ಆಹಾರವನ್ನು ವಿಷವಾಗಿಸಬಹುದು.
ನೀವು 1 ತಿಂಗಳು ಮೊಟ್ಟೆ ತಿಂದ್ರೆ, ಅದನ್ನ ದೇಹದ ಪ್ರೋಟಿನ್‌ಗಳನ್ನು ಬ್ಯಾಲೆನ್ಸ್ ಆಗುವಂತೆ ತಿನ್ನಬೇಕು, ಮೊಟ್ಟೆ ದೇಹದ ಉಷ್ಣಾಂಶವನ್ನು ಹೆಚ್ಚು ಮಾಡುತ್ತದೆ. ಹೀಗಾಗಿ ದಿನಕ್ಕೆ 2 ಮೊಟ್ಟೆಗಳಿಗಿಂತ ಹೆಚ್ಚು ತಿನ್ನಲೇಬಾರದು ನಿಮಗೆ ಕೊಲೆಸ್ಟ್ರಾಲ್ ಸಮಸ್ಯೆ ಇದ್ರೆ, ವೈದ್ಯರ ಸಲಹೆ ಪಡೆದು ಮಾತ್ರ ತಿನ್ನಿ. ಇದರ ಜೊತೆಗೆ ಆರೋಗ್ಯಕರ ಆಹಾರ ಪದ್ಧತಿ ಪಾಲಿಸಿ.