ಉಪ್ಪನ್ನು ಹೆಚ್ಚಾಗಿ ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೂ, ಮಿತಿಯಲ್ಲಿ ಸೇವಿಸಿದರೆ ನಿಮಗೆ ಹಲವು ಲಾಭಗಳಿವೆ.
ಟೀಯಲ್ಲಿ ಚಿಟಿಕೆ ಉಪ್ಪು ಸೇರಿಸುವುದರಿಂದಾಗುವ ಪ್ರಯೋಜನಗಳು
ಕೆಲವು ಟೀ ಎಲೆಗಳನ್ನು ತೆಗೆದುಕೊಂಡು ನೀವು ಸಾಮಾನ್ಯವಾಗಿ ಮಾಡುವಂತೆ ಹಾಲು ಸೇರಿಸಿ ಟೀ ತಯಾರಿಸಿ. ಈ ಟೀ ಕುಡಿಯುವ ಮೊದಲು ಅದರಲ್ಲಿ ಒಂದು ಚಿಟಿಕೆ ಉಪ್ಪು ಹಾಕಿ ಕಲಸಿ. ಇದರಿಂದ ಏನಾಗುತ್ತದೆ ಎಂದರೆ?
ರುಚಿ ಹೆಚ್ಚಿಸುತ್ತದೆ: ಉಪ್ಪು ಟೀಯ ರುಚಿಯನ್ನು ಹೆಚ್ಚಿಸುತ್ತದೆ. ಟೀ ಎಲೆಗಳು ಕಹಿಯಾಗಿರಬಹುದು. ಆದರೆ ಒಂದು ಚಿಕ್ಕ ಚಮಚ ಉಪ್ಪು ಅದನ್ನು ಸಮತೋಲನಗೊಳಿಸಲು, ಟೀಗೆ ಹೆಚ್ಚು ಶಕ್ತಿಯುತ, ಸಿಹಿ ರುಚಿ ನೀಡಲು ಸಹಾಯ ಮಾಡುತ್ತದೆ. ಅಂದರೆ ಹಾಲು ಟೀ ಅಥವಾ ಗ್ರೀನ್ ಟೀಯಲ್ಲಿ ಹೆಚ್ಚುವರಿ ಸಕ್ಕರೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ.