ಬೆಲ್ಲ, ಸಕ್ಕರೆಯನ್ನು ಇರುವೆಗಳಿಂದ ರಕ್ಷಿಸಲು ಈ ಟ್ರಿಕ್ಸ್ ಟ್ರೈ ಮಾಡಿ

First Published | Sep 14, 2022, 5:31 PM IST

ಮನೆಯಲ್ಲಿ ಇರುವೆಗಳ ಕಾಟದಿಂದಲೇ ಜನ ಬೇಸತ್ತು ಹೋಗಿದ್ದಾರೆ. ಏನೇ ತಿಂಡಿ, ಆಹಾರ, ದಿನಸಿ ಸಾಮಾಗ್ರಿಗಳು ಇಡಲಿ, ಇರುವೆ ಕ್ಷಣಾರ್ಧದಲ್ಲಿ ಬಂದು ಬಿಡುತ್ತೆ. ಕೆಲವೊಮ್ಮೆ ಇದಕ್ಕೆ ಕೊನೆಯೇ ಇಲ್ಲವೇ ಅನಿಸಿಬಿಡುತ್ತೆ. ಅದರಲ್ಲೂ ಮನೆಯಲ್ಲಿ ಸಕ್ಕರೆ, ಬೆಲ್ಲ ಇಟ್ಟಾಗಲೆಲ್ಲಾ ಬೇಗ ಇರುವೆಗಳು ಬಂದು ಸೇರಿ ಬಿಡುತ್ತವೆ. ನೀವು ಬೆಲ್ಲದ ಪುಡಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ, ಇರುವೆಗಳು ಬಾರದಂತೆ ಅವುಗಳನ್ನು ರಕ್ಷಿಸೋದು ಹೇಗೆ ಅನ್ನೋ ಟಿಪ್ಸ್ ಇಲ್ಲಿದೆ. ಈ ಸಲಹೆಗಳನ್ನು ಪಾಲಿಸುವ ಮೂಲಕ ನೀವು ಬೆಲ್ಲಕ್ಕೆ ಇರುವೆ ಬಾರದಂತೆ ನೋಡಿಕೊಳ್ಳಬಹುದು.

ಮಹಿಳೆಯರು ತಮ್ಮ ಅಡುಗೆ ಮನೆಯಲ್ಲಿ ಎಲ್ಲಾ ರೀತಿಯ ಧಾನ್ಯಗಳನ್ನು ಸಂಗ್ರಹಿಸುತ್ತಾರೆ, ಇದರಿಂದ ಪ್ರತಿದಿನ ಖರೀದಿಸುವ ಅಗತ್ಯವಿರೋದಿಲ್ಲ. ನೀವು ಎಲ್ಲಾ ಧಾನ್ಯಗಳನ್ನು ಸುಲಭವಾಗಿ ಸಂಗ್ರಹಿಸಬಹುದಾದರೂ, ಸಿಹಿ ವಸ್ತುಗಳನ್ನು ದೀರ್ಘಕಾಲದವರೆಗೆ ಇಟ್ಟುಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತದೆ ಏಕೆಂದರೆ ಇರುವೆಗಳು ಆಗಾಗ್ಗೆ ಸಕ್ಕರೆ ಡಬ್ಬಿಗಳಲ್ಲಿ (sugar container), ಬೆಲ್ಲದ ಡಬ್ಬಿಗಳಲ್ಲಿ ಸಿಕ್ಕಿಹಾಕಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಹಾಗಿದ್ರೆ ಬೆಲ್ಲ, ಸಕ್ಕರೆ ಡಬ್ಬಿಗಳಿಗೆ ಇರುವೆ ಬಾರದಂತೆ ತಡೆಯೋದು ಹೇಗೆ?

ಇರುವೆಗಳಿಂದಾಗಿ ಬೆಲ್ಲದ ಪುಡಿ ಬೇಗ ಹಾಳಾಗುತ್ತದೆ. ಬೆಲ್ಲದ ಪುಡಿಯಲ್ಲಿರುವ ಇರುವೆಗಳಿಂದ ನಿಮಗೂ ತೊಂದರೆಯಾದರೆ, ಈ ಲೇಖನ ನಿಮಗೆ ಸಹಾಯಕ್ಕೆ ಬರಬಹುದು. ಈ ಟಿಪ್ಸ್ ಪಾಲಿಸುವ ಮೂಲಕ ನೀವು ಸುಲಭವಾಗಿ ಇರುವೆಗಳು ಸಿಹಿ ತಿಂಡಿಗೆ (sweets)ಬಾರದಂತೆ ಕಾಪಾಡಬಹುದು. ಅದಕ್ಕಾಗಿ ನೀವು ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿದ್ರೆ ಸಾಕು.

Latest Videos


ಬೆಳ್ಳುಳ್ಳಿ ಬಳಸಿ

ಬೆಲ್ಲದ ಪುಡಿ ಅಥವಾ ಸಕ್ಕರೆಯಲ್ಲಿ ಇರುವೆ ಬರೋದನ್ನು ತಡೆಯಲು, ಉಗ್ರಾಣ ಅಥವಾ ಕ್ಯಾನ್ ಗಳ ಸುತ್ತಲೂ ಬೆಳ್ಳುಳ್ಳಿಯನ್ನು ನೇತುಹಾಕಿ. ಇದನ್ನು ಮಾಡುವುದರಿಂದ, ಇರುವೆಗಳು ಬೆಲ್ಲ ಅಥವಾ ಸಕ್ಕರೆ ಕ್ಯಾನ್ ಬಳಿ ಬರುವುದಿಲ್ಲ. ಏಕೆಂದರೆ ಬೆಳ್ಳುಳ್ಳಿಯು (garlic) ಬಲವಾದ ವಾಸನೆಯನ್ನು ಹೊಂದಿರುತ್ತದೆ, ಅದು ಇರುವೆಗಳಿಗೆ ಇಷ್ಟವಾಗೋದಿಲ್ಲ ಮತ್ತು ವಾಸನೆಯಿಂದ ಓಡಿಹೋಗುತ್ತವೆ. 

ಬೇವಿನ ಎಲೆಗಳನ್ನು ಬಳಸಿ

ನೀವು ಬೇವಿನ ಎಲೆಗಳನ್ನು ಬೆಲ್ಲದ ಡಬ್ಬಿಯಲ್ಲಿ ಹಾಕಬಹುದು ಏಕೆಂದರೆ ಬೇವಿನ ಪರಿಮಳಕ್ಕೆ ಇರುವೆಗಳು ಓಡಿ ಹೋಗುತ್ತದೆ ಎಂದು ಹೇಳಲಾಗುತ್ತದೆ. ಇದಕ್ಕಾಗಿ, ನೀವು ತಾಜಾ ಮತ್ತು ಹಸಿರು ಬೇವಿನ ಎಲೆಗಳನ್ನು (neem leaves) ಬಳಸಬೇಕು. ಅದನ್ನು ಬೆಲ್ಲದ ಡಬ್ಬಿಯಲ್ಲಿ ಹಾಕುವ ಮೂಲಕ ಇರುವೆಗಳನ್ನು ಓಡಿಸಬಹುದು.

ಕಾಫಿ ಪುಡಿ (Coffee powder)

ಇರುವೆಗಳು ಕಾಫಿಯ ವಾಸನೆಯನ್ನು ದ್ವೇಷಿಸುತ್ತವೆ ಎಂದು ತಿಳಿದರೆ ನಿಮಗೆ ಶಾಕ್ ಆಗಬಹುದು ಅಲ್ವಾ?. ನೀವು ಇರುವೆಗಳನ್ನು ಓಡಿಸಲು ಬಯಸುವ ಸ್ಥಳದ ಮೇಲೆ ಕಾಫಿ ಪುಡಿಯನ್ನು ಹರಡಿ. ಇರುವೆಗಳು ಪ್ರವೇಶಿಸದಂತೆ ತಡೆಯಲು ನೀವು ನಿಮ್ಮ ಅಡುಗೆ ಮನೆಯ ಬಳಿ ಮತ್ತು ಬೆಲ್ಲದ ಡಬ್ಬಿ ಬಳಿ ಕಾಫಿ ಪುಡಿ ಸಿಂಪಡಿಸಬಹುದು.
 

ಬೆಲ್ಲದ ಪುಡಿಯನ್ನು ದೀರ್ಘಕಾಲ ಸುರಕ್ಷಿತವಾಗಿಡೋದು ಹೇಗೆ?

ನೀವು ಬೆಲ್ಲದ ಪುಡಿಯನ್ನು ಸರಿಯಾಗಿ ಸಂಗ್ರಹಿಸದಿದ್ದರೆ, ಅದು ಹಾಳಾಗಲು ಪ್ರಾರಂಭಿಸುತ್ತದೆ. ಆದ್ದರಿಂದ, ನೀವು ಕೆಲವು ವಸ್ತುಗಳನ್ನು ಸಂಗ್ರಹಿಸುವಾಗ ಅದರ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಬೆಲ್ಲ ದೀರ್ಘಕಾಲ ಸುರಕ್ಷಿತವಾಗಿರಲು ಅವುಗಳನ್ನು ಯಾವ ರೀತಿ ಕಾಪಾಡಬೇಕು ಅನ್ನೋದನ್ನು ತಿಳಿಯೋಣ.
 

ಬೆಲ್ಲ ಅಥವಾ ಸಕ್ಕರೆಯನ್ನು ಯಾವಾಗಲೂ ಗಾಳಿಯಾಡದ ಪಾತ್ರೆಯಲ್ಲಿ ಇರಿಸಿ ಮತ್ತು ಪಾತ್ರೆಯನ್ನು ಕತ್ತಲೆ ಮತ್ತು ತಂಪಾದ ಸ್ಥಳದಲ್ಲಿ ಇರಿಸಿ. ಹೀಗೆ ಮಾಡಿದರೆ ಯಾವುದೇ ಕೀಟಗಳು ಡಬ್ಬಿಗಳಲ್ಲಿ ಸುಲಭವಾಗಿ ಸಂಗ್ರವಾಗೋದಿಲ್ಲ. ಡಬ್ಬಿಯಿಂದ ಬೆಲ್ಲ ಅಥವಾ ಸಕ್ಕರೆಯನ್ನು ತೆಗೆಯುವಾಗ ಒದ್ದೆಯಾದ ಕೈಗಳು (wet hands) ಮತ್ತು ಚಮಚಗಳನ್ನು ಎಂದಿಗೂ ಬಳಸಬೇಡಿ.

ಬೆಲ್ಲ ಅಥವಾ ಸಕ್ಕರೆ ಡಬ್ಬಿಯನ್ನು ಹೆಚ್ಚು ಸಮಯದವರೆಗೆ ಗಾಳಿಯಲ್ಲಿ ತೆರೆದಿಡಬೇಡಿ. ಏಕೆಂದರೆ ಹಾಗೆ ಮಾಡುವುದರಿಂದ, ಅದರ ತಾಜಾತನ ಮತ್ತು ಪರಿಮಳವು ಹಾರಿಹೋಗುತ್ತದೆ, ನಂತರ ಬೆಲ್ಲವು ಒದ್ದೆ ಮತ್ತು ರುಚಿ ರಹಿತವಾಗಿ ಕಾಣಲು ಪ್ರಾರಂಭಿಸುತ್ತದೆ.
ಕೀಟಗಳಿಂದ ಬೆಲ್ಲ, ಸಕ್ಕರೆಯನ್ನು ರಕ್ಷಿಸಲು ನೀವು ಬೇವಿನ ಎಲೆಗಳನ್ನು ಪಾತ್ರೆಯಲ್ಲಿ ಹಾಕಿ.

ಈ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ, ನೀವು ಬೆಲ್ಲದ ಪುಡಿಯಲ್ಲಿರುವ ಇರುವೆಗಳು ಬಾರದಂತೆ ತಡೆಯಬಹುದು. ಇವೆಲ್ಲಾ ಸುಲಭವಾಗಿ ಮನೆಯಲ್ಲೇ ಸಿಗೋದ್ರಿಂದ ನೀವು ಈ ಟ್ರಿಕ್ಸ್ ಟ್ರೈ ಮಾಡಲು ಕಷ್ಟಪಡಬೇಕಾಗಿಲ್ಲ. ಸುಲಭವಾಗಿ ಟ್ರೈ ಮಾಡಬಹುದು. ಆದುದರಿಂದ ಇಂದೇ ಇವುಗಳನ್ನು ಅನುಸರಿಸಿ, ಇರುವೆಗಳನ್ನು ದೂರ ಓಡಿಸಿ. 
 

click me!