ಹೆಚ್ಚಿನ ಭಾರತೀಯರು ತಮ್ಮ ಮುಂಜಾವನ್ನು ಒಂದು ಕಪ್ ಚಹಾದೊಂದಿಗೆ ಪ್ರಾರಂಭಿಸುತ್ತಾರೆ. ಕೆಲವರು ಬ್ಲ್ಯಾಕ್ ಟೀ (Black Tea) ಕುಡಿಯುತ್ತಾರೆ, ಕೆಲವರು ಹಾಲಿನ ಚಹಾ ಕುಡಿಯುತ್ತಾರೆ. ಆದರೆ ಬರೀ ಚಹಾ ಕುಡಿಯದೇ ಜನರು ಇದರೊಂದಿಗೆ, ಬಿಸ್ಕತ್ತುಗಳು, ನಮ್ಕೀನ್ (Numkeen) ಮತ್ತು ಚಿಪ್ಸ್ (Chips) ತಿನ್ನಲು ಇಷ್ಟಪಡುತ್ತಾರೆ. ಹೀಗಿರೋವಾಗ, ಅನೇಕ ಜನರು ಚಹಾದೊಂದಿಗೆ ಬ್ರೆಡ್ (bread with tea) ಸಹ ತಿನ್ನುತ್ತಾರೆ.
ಪೌಷ್ಟಿಕ ತಜ್ಞರ ಪ್ರಕಾರ, ಚಹಾದೊಂದಿಗೆ ಬ್ರೆಡ್ ಸೇವಿಸೋದು ಆರೋಗ್ಯಕ್ಕೆ ಹಾನಿಕಾರಕ. ಇದನ್ನು ತಿನ್ನುವುದರಿಂದ ಗಂಭೀರ ಕಾಯಿಲೆಗಳು ಉಂಟಾಗುವ ಸಾಧ್ಯತೆಯಿದೆ. ನಿಯಮಿತ ಚಹಾದೊಂದಿಗೆ ಬ್ರೆಡ್ ತಿನ್ನುವುದು ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ ಚಹಾದೊಂದಿಗೆ ಬ್ರೆಡ್ ತಿನ್ನುವುದರ ಅನಾನುಕೂಲಗಳು ಯಾವುವು ಎಂದು ತಿಳಿಯೋಣ.
ಚಹಾದೊಂದಿಗೆ ಬ್ರೆಡ್ ತಿನ್ನೋದ್ರಿಂದ ಉಂಟಾಗೋ ಅಡ್ಡ ಪರಿಣಾಮಗಳಾವುವು?
ನೀವು ಚಹಾದೊಂದಿಗೆ ಬ್ರೆಡ್ ತಿಂದರೆ, ಮೊದಲನೆಯದಾಗಿ, ನಿಮ್ಮ ತೂಕ ವೇಗವಾಗಿ ಹೆಚ್ಚುತ್ತದೆ. ಇದಕ್ಕೆ ಹಾನಿಕಾರಕ ಸಂರಕ್ಷಕಗಳನ್ನು (Preservatives) ಸೇರಿಸುವುದರಿಂದ, ಅವು ಆರೋಗ್ಯಕ್ಕೆ ಹಾನಿಕಾರಕ. ಇದು ಹೊಟ್ಟೆಯ ಆರೋಗ್ಯವನ್ನು (Stomach Health) ಸಹ ಹದಗೆಡಿಸುತ್ತದೆ ಅನ್ನೋದನ್ನು ನೆನಪಿನಲ್ಲಿಡಿ.
ಇದನ್ನು ತಿನ್ನುವುದರಿಂದ ರಕ್ತದ ಸಕ್ಕರೆಯೂ ಹೆಚ್ಚಾಗುತ್ತದೆ. ಇದು ಚಹಾ ಬ್ರೆಡ್ ತಿನ್ನುವ ಜನರ ಸ್ಥಿತಿಯನ್ನು ಗಂಭೀರಗೊಳಿಸಬಹುದು. ಇದು ಇನ್ಸುಲಿನ್ (Insulin) ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಆದ್ದರಿಂದ, ಮಧುಮೇಹ ರೋಗಿಗಳು (diabetes patients) ಇದನ್ನು ತಿನ್ನಬಾರದು. ಸಾಧ್ಯವಾದಷ್ಟು ಅವಾಯ್ಡ್ ಮಾಡೋದು ಉತ್ತಮ.
ಚಹಾ ಮತ್ತು ಬ್ರೆಡ್ ಎರಡನ್ನೂ ಒಟ್ಟಿಗೆ ತಿನ್ನುವುದು ಅಧಿಕ ಬಿಪಿಯ (High Blood Pressure) ಸಮಸ್ಯೆಯನ್ನು ಹೆಚ್ಚಿಸುತ್ತದೆ. ಅವುಗಳನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಬಿಪಿ ರೋಗಿಗಳು ಅದನ್ನು ತಿನ್ನುವುದನ್ನು ತಪ್ಪಿಸಬೇಕು. ಇಲ್ಲವಾದರೆ ಹೃದಯ ಮೇಲೆ ಪರಿಣಾಮ ಬೀರಬಹುದು ಎಚ್ಚರವಾಗಿರಿ.
ಚಹಾ ಮತು ಬ್ರೆಡ್ ತಿನ್ನುವುದರಿಂದ ಹೊಟ್ಟೆಯಲ್ಲಿ ಗುಳ್ಳೆಗಳು ಉಂಟಾಗಬಹುದು. ಇದು ಹೊಟ್ಟೆಯ ಒಳಪದರದಲ್ಲಿ ಗಾಯಕ್ಕೆ ಕಾರಣವಾಗುತ್ತದೆ. ಇದರ ಅತಿಯಾದ ಸೇವನೆಯು ಆಮ್ಲೀಯತೆಯ ಸಮಸ್ಯೆಗಳನ್ನು (gastric problem) ಉಂಟುಮಾಡುತ್ತದೆ. ಚಹಾ ಬ್ರೆಡ್ ತಿನ್ನುವುದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ.
ಇದರ ಸೇವನೆಯು ಹೃದ್ರೋಗದ (Heart Disease) ಅಪಾಯವನ್ನು ಹೆಚ್ಚಿಸುತ್ತದೆ. ಅಂದರೆ ನಿರಂತರವಾಗಿ ಚಹಾ ಮತ್ತು ಬ್ರೆಡ್ ಸೇವಿಸಿದರೆ ಇದರಿಂದ ಕೊಲೆಸ್ಟ್ರಾಲ್ (Cholesterol) ಹೆಚ್ಚುತ್ತದೆ. ಅಲ್ಲದೇ ಇದು ಹೃದಯಾಘಾತದ (heart attack) ಅಪಾಯವನ್ನು ಹೆಚ್ಚಿಸುತ್ತದೆ. ಅದೇ ಸಮಯದಲ್ಲಿ, ಹೃದಯ ವೈಫಲ್ಯದ ಸಾಧ್ಯತೆಗಳು ಸಹ ಹೆಚ್ಚಾಗುತ್ತವೆ.