ತಿನ್ನಲು ಹಿತವೆನಿಸುವ ಕುಲ್ಚಾದ ಇತಿಹಾಸವಿದು!

First Published | Sep 7, 2022, 10:59 AM IST

ಕುಲ್ಚಾ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವಂತಹ ತಿಂಡಿ. ಕುಲ್ಚಾದ ರುಚಿಯು ಆಹಾರದಲ್ಲಿ ಎಷ್ಟು ಅದ್ಭುತವಾಗಿದೆಯೋ, ಅದರ ಇತಿಹಾಸವು ಅಷ್ಟೇ ಆಸಕ್ತಿದಾಯಕವಾಗಿದೆ. ಪರ್ಷಿಯಾದಿಂದ ಭಾರತಕ್ಕೆ ಬಂದ ಈ ಖಾದ್ಯವು ಇಲ್ಲಿನ ಜನರ ಹೃದಯದಲ್ಲಿ ಸ್ಥಾನ ಪಡೆದಿದೆ. ಕುಲ್ಚಾದ ಬಗ್ಗೆ ನಿಮಗೂ ತಿಳಿಯುವ ಆಸಕ್ತಿ ಇದೆಯೇ? ಹಾಗಿದ್ರೆ ಬನ್ನಿ ಇಲ್ಲಿದೆ ನೋಡಿ ಕುಲ್ಚಾದ ಕುರಿತಾದ ತುಂಬಾನೆ ಇಂಟರೆಸ್ಟಿಂಗ್ ಮಾಹಿತಿ.

ಕುಲ್ಚಾ… ಹೆಸರೇ ತುಂಬಾ ಟೇಸ್ಟಿಯಾಗಿದೆ ಅಲ್ವಾ?  ಹೆಸರನ್ನು ಕೇಳಿದ ತಕ್ಷಣ, ಅದನ್ನು ಎಲ್ಲೋ ತಯಾರಿಸಿದನ್ನು ನೋಡಿದ ತಕ್ಷಣ ಬಾಯಿಯಲ್ಲಿ ನೀರು ಬರುತ್ತೆ. ಪ್ರತಿಯೊಂದು ನಗರದಲ್ಲೂ ವಿಭಿನ್ನ ಭಕ್ಷ್ಯಗಳಿಗೆ ಆದ್ಯತೆ ನೀಡುವ ಭಾರತದಂತಹ ದೇಶ. ಬನಾರಸ್‌ನಲ್ಲಿ ಪೂರಿ ಬಾಜಿ ಮತ್ತು ಜಿಲೇಬಿಗೆ ಆದ್ಯತೆ ನೀಡಿದರೆ, ಪಾಟ್ನಾದಲ್ಲಿ ಲಿಟ್ಟಿ-ಚೋಖಾಗೆ ಆದ್ಯತೆ ನೀಡಲಾಗುತ್ತದೆ. ರಾಜಸ್ಥಾನದ  ಜನರು ದಾಲ್-ಬಾಟಿ ಚುರ್ಮಾವನ್ನು ಇಷ್ಟಪಟ್ಟು ತಿನ್ನುತ್ತಾರೆ, ಆದರೆ ಪಂಜಾಬಿನ ಚೋಲೆ ಕುಲ್ಚಾವನ್ನು ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ. 

ಕುಲ್ಚಾವನ್ನು ದೆಹಲಿಯಿಂದ ಯುಪಿವರೆಗೆ, ಪಂಜಾಬ್ ನಿಂದ ರಾಜಸ್ಥಾನದವರೆಗೆ ಎಲ್ಲೆಡೆಯೂ ಜನ ತಿಂತಾರೆ. ಆದರೆ ಚೋಲೆ, ಚೀಸ್ ಅಥವಾ ಇನ್ನಾವುದೇ ಆಹಾರದೊಂದಿಗೆ ನೀವು ತಿನ್ನುವ ಕುಲ್ಚಾ, ಎಲ್ಲಿಂದ ಬಂತು, ಅದರ ಇತಿಹಾಸವೇನು, ಅನ್ನೋದನ್ನು ನೀವು ಯೋಚಿಸಿದ್ದೀರಾ? ಇಂದು ನಾವು ನಿಮ್ಮ ನೆಚ್ಚಿನ ಕುಲ್ಚಾ ಕುರಿತಾದ ಆಸಕ್ತಿದಾಯಕ ವಿಷಯಗಳನ್ನು (interesting facts) ನಿಮಗೆ ಹೇಳಲಿದ್ದೇವೆ..

Tap to resize

ಕುಲ್ಚಾದ ಇತಿಹಾಸ

ಕುಲ್ಚಾವನ್ನು ಪರ್ಷಿಯಾದಲ್ಲಿ ಜನರು ತುಂಬಾ ಇಷ್ಟಪಡುತ್ತಾರೆ. ಸುಮಾರು 2500 ವರ್ಷಗಳ ಹಿಂದೆ, ಅವರು ಭಾರತಕ್ಕೆ ಪ್ರಯಾಣಿಸಿದಾಗ, ಇಲ್ಲಿಯೂ ಸಹ ಕುಲ್ಚಾ ತಯಾರು ಮಾಡಲು ಆರಂಭಿಸಲಾಯಿತು. ಸಿಂಧೂ ಕಣಿವೆ ನಾಗರಿಕತೆಯ ಯುಗದಲ್ಲಿ, ಪ್ರತಿದಿನ ಅಡುಗೆ ಮಾಡಲು ಬೇಸರಗೊಂಡ ಒಬ್ಬ ಅಡುಗೆಯವನ ಮನಸ್ಸಿನಲ್ಲಿ ಒಂದು ವಿಚಾರ ಬಂತಂತೆ. ಪ್ರತಿದಿನ ಒಂದೇ ಆಹಾರವನ್ನು ತಿಂದು ತಿಂದು ಬೇಸರಗೊಂಡ ಆತ, ಬೇರೆ ಏನಾದರೂ ಮಾಡಬೇಕೆಂದು ಯೋಚನೆ ಮಾಡಿದನು. 

ನಂತರ ಅವರು ನಾನ್ ಗೆ ಕೆಲವು ಪದಾರ್ಥಗಳನ್ನು ಸೇರಿಸಿ ಕುಲ್ಚಾವನ್ನು ತಯಾರಿಸಿದರು. ಅದು ಜನರ ತಟ್ಟೆಯನ್ನು ತಲುಪಿದಾಗ, ಜನರು ಅದನ್ನು ತಿಂದು ತುಂಬಾ ಸಂತೋಷಪಟ್ಟರು. ಇದು ನಾನ್ ಗಿಂತ ಹೆಚ್ಚು ಕುರುಕಲು, ಸ್ಟಫಿಂಗ್ ಹೊಂದಿದ್ದು, ತುಂಬಾ ರುಚಿಕರವಾಗಿತ್ತು. ನಂತರ ಅದನ್ನು ಪ್ರತಿದಿನ ತಯಾರಿಸಿ, ಜನರಿಗೆ ನೀಡಲಾಗುತ್ತಿತ್ತು ಎನ್ನಲಾಗಿದೆ.

ಭಾರತದಲ್ಲಿ, ಕುಲ್ಚಾ ಬಗ್ಗೆ ಮತ್ತೊಂದು ಕಥೆಯನ್ನು ಹೇಳಲಾಗುತ್ತದೆ. ಹೈದರಾಬಾದಿನ ನಿಜಾಮನು ಕುಲ್ಚಾ ರುಚಿಯನ್ನು ತುಂಬಾ ಇಷ್ಟಪಟ್ಟನಂತೆ. ಅವನು ಅದನ್ನು ತುಂಬಾನೆ ಇಷ್ಟಪಟ್ಟು ಸೇವಿಸುತ್ತಿದ್ದನು. ಅದರ ಟೇಸ್ಟ್ ನಿಜಾಮನಿಗೆ ಎಷ್ಟು ಇಷ್ಟವಾಗಿತ್ತು ಎಂದರೆ, ಆತ  ಅದನ್ನು ಒಂದು ದಿನ ರಾಜ್ಯ ಧ್ವಜದ ಸಂಕೇತವನ್ನಾಗಿ ಮಾಡಿದರು.  ಇದರೊಂದಿಗೆ ಕುಲ್ಚಾಗೆ ರಾಯಲ್ ಪಾಕಪದ್ಧತಿಯ (royal food) ಸ್ಥಾನಮಾನವನ್ನು ಸಹ ನೀಡಲಾಯಿತು.  

ಕುಲ್ಚಾ ತಯಾರಿಸೋದು ಹೇಗೆ ನೋಡೋಣ

ಹಿಟ್ಟಿಗಾಗಿ 
ಗೋಧಿ ಹಿಟ್ಟು - 1 ಕಪ್
ಮೈದಾ - 1 ಕಪ್
ಅಡುಗೆ ಸೋಡಾ - ಟೀ ಸ್ಪೂನ್ 
ಸಕ್ಕರೆ - 1 ಟೀಚಮಚ 
ಮೊಸರು - 1/2 ಕಪ್
ಉಪ್ಪು - ರುಚಿಗೆ ತಕ್ಕಷ್ಟು
 

ಸ್ಟಫಿಂಗ್ ಗಾಗಿ

ಆಲೂಗಡ್ಡೆ - 4-5 ಬೇಯಿಸಿದ್ದು
ಹಸಿಮೆಣಸಿನ ಕಾಯಿ - 1 ಟೀಚಮಚ 
ಕೆಂಪು ಮೆಣಸಿನ ಪುಡಿ - 1/2 ಟೀ ಸ್ಪೂನ್
ಅಮ್ಚೂರ್ ಪುಡಿ - 1/2 ಟೀ ಸ್ಪೂನ್
ಗರಂ ಮಸಾಲ ಪುಡಿ - 1/2 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು - 2 ಟೇಬಲ್ ಸ್ಪೂನ್ (ನುಣ್ಣಗೆ ಕತ್ತರಿಸಿದ್ದು) 

ರುಚಿಕರವಾದ ಕುಲ್ಚಾ ತಯಾರಿಸುವುದು ಹೇಗೆ?

ಮೊದಲಿಗೆ, ಗೋಧಿ ಹಿಟ್ಟು ಮತ್ತು ಮೈದಾ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಸೇರಿಸಿ ಅದಕ್ಕೆ ಮೊಸರು, ಬೇಕಿಂಗ್ ಸೋಡಾ, ಬೇಕಿಂಗ್ ಪೌಡರ್, ಉಪ್ಪು, ಸಕ್ಕರೆ, ಎಣ್ಣೆಯನ್ನು ಸೇರಿಸಿ ಮಿಕ್ಸ್ ಮಾಡಿ.
ಉಗುರುಬೆಚ್ಚಗಿನ ನೀರನ್ನು ಬಳಸಿ ಹಿಟ್ಟನ್ನು ಮೃದುವಾಗಿ ನಾದಿಕೊಳ್ಳಿ ಮತ್ತು ನಂತರ ಅದನ್ನು ಸ್ವಚ್ಛವಾದ ಟವೆಲ್ ನಿಂದ ಮುಚ್ಚಿ ಮತ್ತು ಬೆಚ್ಚಗಿನ ಸ್ಥಳದಲ್ಲಿ 3-4 ಗಂಟೆಗಳ ಕಾಲ ಹಾಗೇ ಇಡಿ. ಇದರಿಂದ ಹಿಟ್ಟು ಸಾಫ್ಟ್ ಆಗುತ್ತೆ.

ಈಗ ಬೇಯಿಸಿದ ಆಲೂಗಡ್ಡೆಯನ್ನು ಸಿಪ್ಪೆ ಸುಲಿದು ಮ್ಯಾಶ್ ಮಾಡಿ ಆಲೂಗಡ್ಡೆ ಸ್ಟಫಿಂಗ್ (stuffing) ಮಾಡಿ.
ಆಲೂಗಡ್ಡೆಗೆ ಉಪ್ಪು, ಹಸಿಮೆಣಸಿನಕಾಯಿ, ಶುಂಠಿ, ಕೊತ್ತಂಬರಿ ಪುಡಿ, ಅಮ್ಚೂರ್ ಪುಡಿ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ ಮತ್ತು ಹಸಿರು ಕೊತ್ತಂಬರಿ ಸೊಪ್ಪನ್ನು ಸೇರಿಸಿ.
ಮ್ಯಾಶ್ ಮಾಡಿದ ಆಲೂಗಡ್ಡೆಯಲ್ಲಿ ಎಲ್ಲಾ ಮಸಾಲೆಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಕುಲ್ಚಾವನ್ನು ತುಂಬಲು ಅವುಗಳನ್ನು ಸಿದ್ಧಪಡಿಸಿ.
ಈಗ 8-10 ದುಂಡಗಿನ ಹಿಟ್ಟಿನ ಉಂಡೆಗಳನ್ನು ಮಾಡಿ ಮತ್ತು ಆಲೂಗೆಡ್ಡೆ ಮಿಶ್ರಣದೊಂದಿಗೆ ಸಮಪ್ರಮಾಣದಲ್ಲಿ ಸಣ್ಣ ಉಂಡೆಗಳನ್ನು ಮಾಡಿ.

ಒಂದೊಂದಾಗಿ ಅದನ್ನು ತುಂಬಿಸಿ ಮತ್ತು ಅದನ್ನು ರೋಲ್ ಮಾಡಿ ಮತ್ತು ಅದರ ಮೇಲೆ ಕೊತ್ತಂಬರಿ ಸೊಪ್ಪನ್ನು ಹಾಕಿ, ತಂದೂರ್ ಅನ್ನು ಮೊದಲೇ ಬಿಸಿ ಮಾಡಿ.
ಈಗ ಅದನ್ನು ಒಂದು ಟ್ರೇಯಲ್ಲಿ ತೆಗೆದುಕೊಂಡು ಒಲೆಯಲ್ಲಿ 2 ನಿಮಿಷಗಳ ಕಾಲ ಬೇಕ್ ಮಾಡಿ.
2 ನಿಮಿಷಗಳ ನಂತರ, ಕುಲ್ಚಾವನ್ನು ತಿರುಗಿಸಿ ಮತ್ತು ಎರಡೂ ಮೇಲ್ಮೈಗಳು ಕಂದು ಬಣ್ಣಕ್ಕೆ ತಿರುಗುವವರೆಗೆ ಬೇಕ್ ಮಾಡಿ. ಈಗ ಕುಲ್ಚಾ ರೆಡಿ.
ಈಗ ಅದನ್ನು ಒಂದು ಟ್ರೇಯಲ್ಲಿ ತೆಗೆದುಕೊಂಡು ಆಲೂಗಡ್ಡೆ ಬಟಾಣಿ, ಕಡಲೆ ಅಥವಾ ಮೊಸರಿನ ಜೊತೆ ಸೇರಿಸಿ ಕುಟುಂಬ ಸಮೇತ ಎಂಜಾಯ್ ಮಾಡಿ.

Latest Videos

click me!