ಬ್ಯಾಡಗಿ ಮೆಣಸಿನಕಾಯಿ
ಬ್ಯಾಡಗಿ ಮೆಣಸಿನಕಾಯಿಗಳು ಕರ್ನಾಟಕದ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಿಂದ ಬರುತ್ತವೆ. ಮೆಣಸಿನಕಾಯಿ ಉದ್ದ ಮತ್ತು ಸುಕ್ಕುಗಟ್ಟಿದ ಮತ್ತು ಗಾಢವಾದ ಕೆಂಪು ಬಣ್ಣವನ್ನು ಹೊಂದಿದೆ. ಇದು ತುಂಬಾ ಖಾರವಾಇ ಇರುವುದಿಲ್ಲ. ಆದರೆ ಗಾಢ ಬಣ್ಣ ಮತ್ತು ಪರಿಮಳವನ್ನು ನೀಡುತ್ತದೆ. ಇದು ದೇಶದ ಜನರ ಹೆಚ್ಚಿನ ಆಯ್ಕೆಯ ಮೆಣಸಿನಕಾಯಿ ಆಗಿದೆ. ಉಡಿಪಿ ಮತ್ತು ಮಂಗಳೂರು ಪಾಕಪದ್ಧತಿಯಲ್ಲಿ ಹೆಚ್ಚಾಗಿ ಬಳಕೆ ಮಾಡಲಾಗುತ್ತದೆ. ಇದು ಹೆಚ್ಚು ಖಾರವಿಲ್ಲದ ಕಾರಣ ಆರೋಗ್ಯಕ್ಕೆ ಹೆಚ್ಚು ಉತ್ತಮವಾಗಿದೆ.
ಗುಂಟೂರು ಮೆಣಸಿನಕಾಯಿ
ಗುಂಟೂರು ಮೆಣಸಿನಕಾಯಿ ದಕ್ಷಿಣ ಭಾರತದಲ್ಲಿ ಅತ್ಯಂತ ಜನಪ್ರಿಯ ಮೆಣಸಿನಕಾಯಿ ಆಗಿದೆ. ಇದು ಮಸಾಲೆಯುಕ್ತ ಮತ್ತು ಖಾರವಾದ ಮೆಣಸಿನಕಾಯಿ. ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇನ್ನು ಗುಂಟೂರು ಸನ್ನಂ ಒಂದು ಉಪ-ವಿಧವಾಗಿದ್ದು ಅದು ಬಹಳ ಜನಪ್ರಿಯವಾಗಿದೆ. ಅತಿಯಾದ ಗುಂಟೂರು ಮೆಣಸಿನಕಾಯಿ ಸೇವನೆಯಿಂದ ಅಸಿಡಿಟಿ ಬರಬಹುದು.
ಕಾಶ್ಮೀರಿ ಕೆಂಪು ಮೆಣಸಿನಕಾಯಿ
ಇದರ ಹೆಸರೇ ಹೇಳುವಂತೆ ಅತಿಯಾದ ಘಾಡ ಕೆಂಪು ಬಣ್ಣವನ್ನು ಹೊಂದಿದ ಮತ್ತು ದಪ್ಪ ತಿರುಳಿನ ಮೆಣಸಿನಕಾಯಿ ಆಗಿದೆ. ಹೆಚ್ಚು ಖಾರವಿರದ ಹಾಗೂ ಬಣ್ಣಕ್ಕಾಗಿ ಹೆಚ್ಚು ಬೇಡಿಕೆಯಿರುವ ಮೆಣಸಿನಕಾಯಿಯಾಗಿದೆ. ಇದನ್ನು ರುಬ್ಬಿದಾಗ, ಬೀಜಗಳನ್ನು ತೆಗೆಯಲಾಗುತ್ತದೆ. ಇನ್ನು ಇದರ ಹಸಿ ಮೆಣಸಿನಕಾಯಿಯನ್ನು ಹೆಚ್ಚಾಗಿ ಬಳಸಲಾಗುವುದಿಲ್ಲ. ಅದರಿಂದ ತಯಾರಿಸಿದ ಖಾರದ ಪುಡಿ ಪ್ರಸಿದ್ಧೊ ಆಗಿದೆ. ಹೆಚ್ಚು ಖಾರವಿರ ಖಾರಣ ಆರೋಗ್ಯಕ್ಕೂ ಉತ್ತಮ ಆಗಿದೆ.
ಸೇಲಂ ಗುಂಡು ಮೆಣಸಿನಕಾಯಿ
ಇದು ತಮಿಳುನಾಡಿನಲ್ಲಿ ಬಳಸುವ ಅತ್ಯಂತ ಜನಪ್ರಿಯ ಮೆಣಸಿನಕಾಯಿ. ಇದರ ಖಾರ ಮಧ್ಯಮವಾಗಿದೆ. ತಮಿಳಿನಲ್ಲಿ ಗುಂಡು ಎಂದರೆ ಕೊಬ್ಬು. ಇದು ಸಣ್ಣ ದುಂಡಗಿನ ಉಬ್ಬಿಕೊಂದ ಮೆಣಸಿನಕಾಯಿ ಆಗಿದ್ದು ಹೆಚ್ಚಿನ ಬೀಜಗಳು ಇರುತ್ತವೆ. ಚಟ್ನಿ ಮತ್ತು ಸಾಂಬಾರ್ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇದು ಒಗ್ಗರಣೆ ಕೊಡಲು ಹೆಚ್ಚಾಗಿ ಬಳಸುತ್ತಾರೆ. ಬೀಜವನ್ನು ತೆಗೆದು ಸೇವಿಸುವುದು ಆರೋಗ್ಯಕ್ಕೆ ಉತ್ತಮ.
ಟಾರ್ಪಿಯೊ ಮಣಸಿನಕಾಯಿ
ಬೆಂಗಳೂರು ಹಾಗೂ ಸುತ್ತಲಿನ ಪ್ರದೇಶಗಳಾದ ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಸೇರಿದಂತೆ ವಿವಿಧೆಡೆ ಬೆಂಗಳೂರಿನ ಟಾರ್ಪಿಡೋ ಜಾತಿಯ ಮೆಣಸಿನಕಾಯಿ ಬೆಳೆಯಲಾಗುತ್ತದೆ. ಮಧ್ಯಮ ಗಾತ್ರದ ಖಾರವನ್ನು ಹೊಂದಿದ್ದು, ಹೆಚ್ಚಾಗಿ ಹಸಿ ಮೆಣಸಿನಕಾಯಿಯನ್ನೇ ತರಕಾರಿ ಮಾದರಿಯಲ್ಲಿ ಮಾರಾಟ ಮಾಡಲಾಗುತ್ತದೆ. ಇದು ಆರೋಗ್ಯಕ್ಕೆ ಉತ್ತಮವಾಗಿದ್ದು, ಮಿಶ್ರ ತಳಿ ಆಗಿದೆ.
ನಾಗಾಘೋಸ್ಟ್ ಮೆಣಸಿನಕಾಯಿ
ಈಶಾನ್ಯ ರಾಜ್ಯಗಳಲ್ಲಿ ಬೆಳೆಯುವ ಈ ಮೆಣಸಿನಕಾಯಿಯನ್ನು ನಾಗಾ ಚಿಲ್ಲಿ ಅಥವಾ ಘೋಸ್ಟ್ ಮೆಣಸಿನಕಾಯಿ ಎಂದು ಕರೆಯುತ್ತಾರೆ. ಇದು ವಿಶ್ವದ ಅತ್ಯಂತ ಖಾರದ ಮೆಣಸಿನಕಾಯಿ ಆಗಿದ್ದು, ನಿತ್ಯ ಸೇವನೆಯಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ.
ಕಾಂತರಿ ಮಣಸಿನಕಾಯಿ
ಕೇರಳದಲ್ಲಿ ಕಾಂತರಿ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ಇದು ಕೂಡ ಜೀರಿಗೆ ಮೆಣಸಿನಕಾಯಿ ವಿಧದಲ್ಲೇ ಬೆಳೆಯಲಾಗುತ್ತಿದ್ದು, ಕಡಿಮೆ ಖಾರ ಹೊಂದಿದೆ. ಆದರೆ, ಇದನ್ನು ಖಾರದಪುಡಿ ಮಾಡಲು ಹೆಚ್ಚು ಬಳಸುವುದಿಲ್ಲ.
ಜ್ವಾಲಾ ಚಿಲ್ಲಿ
ದೇಶದ ಮೆಣಸಿನಕಾಯಿ ವಿಧಗಳಲ್ಲಿ ಗುಜರಾತಿನ ಜ್ವಾಲಾ ಮೆಣಸಿನಕಾಯಿ ಕೂಡ ಒಂದಾಗಿದೆ. ಇದು ಕೂಡ ಮಧ್ಯಮ ಖಾರವನ್ನು ಹೊಂದಿದ್ದು, ತರಕಾರಿಯಾಗಿ ಹೆಚ್ಚು ಮಾರಾಟ ಆಗುತ್ತದೆ. ಇದು ಕೂಡ ಆರೋಗ್ಯಕ್ಕೆ ಉತ್ತಮ ಆಗಿದೆ.