ಮಾಂಸಕ್ಕಾಗಿ ಭಾರತದಲ್ಲಿ ಹೆಚ್ಚಾಗಿ ಕೊಲ್ಲಲ್ಪಡುವ ಪ್ರಾಣಿಗಳಿವು..! ಇದರಲ್ಲಿ ನೀವು ತಿನ್ನೋದು ಯಾವ್ದು?

First Published | Aug 31, 2023, 10:29 PM IST

ಭಾರತದಲ್ಲಿ ಮಾಂಸಕ್ಕಾಗಿ ಯಾವ ಪ್ರಾಣಿಯನ್ನು ಹೆಚ್ಚಾಗಿ ಕೊಲ್ಲುತ್ತಾರೆ ಎನ್ನುವ ಕುತೂಹಲ ನಿಮಗೆ ಎಂದಾದರೂ ಕಾಡಿದ್ದು ಇದೆಯೇ? ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ 2021ರಲ್ಲಿ ನೀಡಿದ ವರದಿಯ ಆಧಾರದ ಮೇಲೆ ಭಾರತದಲ್ಲಿ ಮಾಂಸಕ್ಕಾಗಿ ಹೆಚ್ಚಾಗಿ ಕೊಲ್ಲಲ್ಪಡುವ 6 ಪ್ರಾಣಿಗಳು ಇವು.

6. ಹಂದಿ (Pigs): ಭಾರತದಲ್ಲಿ ಹಂದಿ ತಿನ್ನುವವರ ಪ್ರಮಾಣ ಕೂಡ ಹೆಚ್ಚಿದೆ. ವಿಶ್ವಸಂಸ್ಥೆಯ ವರದಿಯ ಪ್ರಕಾರ 91.5 ಲಕ್ಷ ಹಂದಿಗಳನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತದೆ.

5. ಶೀಪ್‌ (Sheep): ಕುರಿಗಳ ಜಾತಿಯ ಪ್ರಾಣಿ, ಉಣ್ಣೆಗೆ ಹೆಚ್ಚಾಗಿ ಬಳಸಾಗುವ ಶೀಪ್‌ಅನ್ನು ಭಾರತೀಯರು ಮಾಂಸಕ್ಕಾಗಿ ಬಳಸುತ್ತಾರೆ. ಅಂದಾಜು 2.30 ಕೋಟಿ ಶೀಪ್‌ಗಳನ್ನು ಮಾಂಸಕ್ಕಾಗಿ ಬಳಸುತ್ತಾರೆ.

Tap to resize

4.ಬಾತುಕೋಳಿ: ಹೌದು ದೇಶದ ಜನರು ಬಾತುಕೋಳಿಯ ಮಾಂಸವನ್ನೂ ಇಷ್ಟಪಡುತ್ತಾರಂತೆ.  ವರದಿಯ ಪ್ರಕಾರ 3.38 ಕೋಟಿ ಬಾತುಕೋಳಿಯನ್ನು ಮಾಂಸಕ್ಕಾಗಿ ಉಪಯೋಗಿಸುತ್ತಾರೆ.

3. ಗೋವುಗಳು: ಎಷ್ಟೇ ಗೋಮಾಂಸ ನಿಷೇಧ ಎಂದರೂ ಭಾರತದಲ್ಲಿ ಗೋಮಾಂಸ ಪ್ರಿಯರು ಅಧಿಕವಾಗಿ ಇದ್ದಾರೆ. ದೇಶದಲ್ಲಿ 4.73 ಕೋಟಿ ಗೋವನ್ನು ಮಾಂಸಕ್ಕಾಗಿ ದೇಶದ ಜನರು ಉಪಯೋಗಿಸುತ್ತಿದ್ದಾರೆ.

2. ಕುರಿಗಳು: ಕುರಿಗಳು ತಿನ್ನುವ ಪ್ರಮಾಣವೂ ದೇಶದಲ್ಲಿ ಹೆಚ್ಚಾಗಿಯೇ ಇದೆ. ಮಟನ್‌ ಸಾರು, ಮಟನ್‌ ಬಿರಿಯಾನಿ ಎಂದರೆ ಯಾರಿಗೆ ಅಚ್ಚುಮೆಚ್ಚಲ್ಲ ಹೇಳಿ. 2021ರ ಅಂದಾಜಿನ ಪ್ರಕಾರ ವರ್ಷವೊಂದರಲ್ಲಿ 5.74 ಕೋಟಿ ಕುರಿಗಳು ಮಾಂಸಗಳಾಗುತ್ತವೆ.

1. ಕೋಳಿ: ನಿರೀಕ್ಷೆಯಂತೆಯೇ ಕೋಳಿ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಹೆಚ್ಚಿನ ಮಾಂಸಾಹಾರ ಪ್ರಿಯರು ತಿನ್ನುವುದು ಚಿಕನ್‌ ಮಾತ್ರ.  273 ಕೋಟಿ ಕೋಳಿಗಳನ್ನು ಭಾರತದಲ್ಲಿ ಮಾಂಸಕ್ಕಾಗಿ ಬಳಸಿಕೊಳ್ಳಲಾಗುತ್ತದೆ.

Latest Videos

click me!