ಕ್ರಿಸ್‌ಮಸ್‌ಗೆ ಭರ್ಜರಿ ತಯಾರಿ, ರಾಡಿಸನ್ ಬ್ಲೂನಲ್ಲಿ ಕೇಕ್ ಮಿಕ್ಸಿಂಗ್ ಸಂಭ್ರಮ

First Published | Nov 5, 2022, 3:30 PM IST

ಕ್ರಿಸ್‌ಮಸ್‌ ಹಬ್ಬಕ್ಕೆ ಇನ್ನೇನು ಕೆಲವೇ ವಾರಗಳು ಬಾಕಿ. ಈಗಾಗ್ಲೇ ಎಲ್ಲೆಡೆ ಸಂಭ್ರಮ ಶುರುವಾಗಿದೆ. ಕ್ರಿಸ್‌ಮಸ್ ಅಂದ್ರೆ ತಕ್ಷಣಕ್ಕೆ ನೆನಪಾಗೋದೆ ಕೇಕ್. ಮಾರತ್‌ಹಳ್ಳಿಯ ರಾಡಿಸನ್ ಬ್ಲೂ ಹೊಟೇಲ್‌ನಲ್ಲಿ ಕ್ರಿಸ್ಮಸ್ ಪ್ರಯುಕ್ತ ಭರ್ಜರಿ ಕೇಕ್ ಮಿಕ್ಸಿಂಗ್ ನಡೀತು. ಅದರ ಝಲಕ್ ಇಲ್ಲಿದೆ.

ಕ್ರಿಸ್ ಮಸ್ ಹಬ್ಬ ಸಮೀಪಿಸುತ್ತಿರುವ ಹಾಗೆಯೇ ಎಲ್ಲೆಡೆ ಸಡಗರ, ಸಂಭ್ರಮ ಶುರುವಾಗುತ್ತೆ. ಅದರಲ್ಲೂ ಕೇಕ್‌ ಮಿಕ್ಸಿಂಗ್ ಮಾಡೋ ಚೆಂದಾನೇ ಬೇರೆ. ನೂರಾರು ಮಂದಿ ಸೇರಿ ರಾಶಿ ರಾಶಿ ಒಣಹಣ್ಣುಗಳು, ವೈನ್‌ ಸೇರಿಸಿ ಮಿಕ್ಸ್ ಮಾಡಿ ಕೇಕ್‌ಗೆ ಪಾಕವನ್ನು ಸಿದ್ಧಪಡಿಸ್ತಾರೆ. 

ಹಾಗೆಯೇ ಮಾರತಹಳ್ಳಿಯಲ್ಲಿರುವ ರಾಡಿಸನ್ ಬ್ಲೂನಲ್ಲಿ ಕ್ರಿಸ್ಮಸ್ ಕೇಕ್ ಮಿಕ್ಸಿಂಗ್ ಸಮಾರಂಭ ನಡೀತು. ಸಾಂಪ್ರದಾಯಿಕ ಪ್ಲಮ್ ಕೇಕ್ ತಯಾರಿಸಲು ಭರ್ಜರಿ ಮಿಕ್ಸಿಂಗ್ ಮಾಡಲಾಯಿತು. ಕ್ರಿಸ್‌ಮಸ್‌ಗೆ ಕೆಲವೇ ವಾರಗಳ ಬಾಕಿಯಿರುವಾಗಲೇ ನಗರದ ಹಲವು ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಬೇಕರಿಗಳಲ್ಲಿ ಕೇಕ್ ಮಿಕ್ಸಿಂಗ್ ಸಂಭ್ರಮವನ್ನು ನೋಡಬಹುದು.

Tap to resize

ಅಡುಗೆ ಸಿಬ್ಬಂದಿ ಸದಸ್ಯರು ಕೇಕ್ ಮಿಕ್ಸಿಂಗ್ ಸಮಾರಂಭದಲ್ಲಿ ಒಟ್ಟಿಗೆ ಸೇರುತ್ತಾರೆ ಮತ್ತು ಹಬ್ಬದ ವಾತಾವರಣವನ್ನು ಸೃಷ್ಟಿಸುತ್ತಾರೆ. ಕೊಯ್ಲು ಮಾಡಿದ ಹಣ್ಣುಗಳನ್ನು ವೈನ್ ಅಥವಾ ರಮ್‌ನಲ್ಲಿ ನೆನೆಸಿಡಲಾಗುತ್ತದೆ.

ಒಣದ್ರಾಕ್ಷಿ, ಗೋಡಂಬಿ, ಖರ್ಜೂರ ಹಾಗೂ ವಿವಿಧ ಬಗೆಯ ಚರಿ ಸೇರಿದಂತೆ ಸುಮಾರು 9 ವಿಧದ ಡ್ರೈಫ್ರೂಟ್ಸ್‌ಗೆ ವೈನ್, ಬ್ರಾೃಂಡಿ ಮತ್ತು ರಮ್ ಹಾಗೂ ವಿವಿಧ ಹಣ್ಣಿನ ಫ್ಲೇವರ್‌ಗಳ ರಸವನ್ನು ಸೇರಿಸಲಾಗುತ್ತದೆ.

'ಕೇಕ್ ಮಿಕ್ಸಿಂಗ್ ಎಂಬುದು ಸಂಭ್ರಮಾಚರಣೆ ಮತ್ತು ಸಂತೋಷವನ್ನು ಹರಡುವ ಸಂಕೇತವಾಗಿದೆ. ಕೇಕ್ ಮಿಕ್ಸ್‌ಗಳನ್ನು ಉಡುಗೊರೆಯಾಗಿ ನೀಡುವುದರಲ್ಲಿ ನಾವು ಹೆಮ್ಮೆ ಮತ್ತು ಸಂತೋಷವನ್ನು ತೆಗೆದುಕೊಳ್ಳುತ್ತೇವೆ. ಇದರಿಂದ ಪ್ರತಿಯೊಬ್ಬರೂ ವಿಶಿಷ್ಟವಾದ ಪಾಕವಿಧಾನಗಳನ್ನು ರುಚಿ ನೋಡಬಹುದು' ಎಂದು ಮಾರತಹಳ್ಳಿ ಔಟರ್ ರಿಂಗ್ ರೋಡ್‌ನ ರಾಡಿಸನ್ ಬ್ಲೂನ ಜನರಲ್ ಮ್ಯಾನೇಜರ್ ರೂಪಮ್ ದತ್ತಾ ತಿಳಿಸಿದ್ದಾರೆ.

ಹಲವು ಗಣ್ಯರು ಕೇಕ್ ಮಿಕ್ಸಿಂಗ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕೇಕ್ ಮಿಕ್ಸಿಂಗ್ ಮಾಡಿ, ವೈನ್ ಗ್ಲಾಸ್ ಹಿಡಿದು ಸಂಭ್ರಮಿಸಿದರು.

ಸುಮಾರು 16ನೇ ಶತಮಾನದಲ್ಲಿ ಆರಂಭವಾಗಿರುವ ಕ್ರೀಸ್‌ಮಸ್ ಪೂರ್ವಭಾವಿ ಕೇಕ್ ಮಿಕ್ಸಿಂಗ್ ಆಚರಣೆ, ಈ ಪ್ರಪಂಚದೆಲ್ಲೇಡೆ ಜನಪ್ರಿಯತೆ ಪಡೆದಿದೆ. ಜಾತಿ, ಮತ, ಧರ್ಮ ಬೇಧವಿಲ್ಲದೇ ಎಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ.

Latest Videos

click me!