Kitchen Tips: ಕರಿದ ಆಹಾರವನ್ನು ಮತ್ತೆ ಬಿಸಿಮಾಡಲು ಈ ಈಸಿ ಟಿಪ್ಸ್ ಟ್ರೈ ಮಾಡಿ

First Published | Nov 5, 2022, 5:26 PM IST

ಜನರು ಕರಿದ ಆಹಾರ ತಿನ್ನಲು ತುಂಬಾನೆ ಇಷ್ಟಪಡುತ್ತಾರೆ. ಅದು ವೀಕೆಂಡ್ ಆಗಿರಲಿ  ಅಥವಾ ಪಾರ್ಟಿಯಾಗಿರಲಿ, ಜನರು ಹೆಚ್ಚಾಗಿ ಕರಿದ ಆಹಾರ ತಯಾರಿಸಲು ಮತ್ತು ಸರ್ವ್ ಮಾಡಲು ಇಷ್ಟಪಡ್ತಾರೆ. ಕರಿದ ಆಹಾರದ ಒಂದು ವಿಶೇಷತೆಯೆಂದರೆ ಅದನ್ನು ಹುರಿದಾಗ, ಅದು ಚೆನ್ನಾಗಿ ಬಿಸಿಯಾಗಿರುತ್ತದೆ. ಆದರೆ ತಣ್ಣಗಾದ ನಂತರ, ಅದರ ರುಚಿ ಮೊದಲಿನಂತೆ ಉಳಿಯುವುದಿಲ್ಲ. ಇದರಿಂದ ಅದನ್ನು ತಿನ್ನಲು ಸಹ ಮನಸು ಬರೋದಿಲ್ಲ. ಈ ಕರಿದ ಆಹಾರಗಳನ್ನು ಮತ್ತೆ ಕರಿಯೋದು ಕಷ್ಟವಾಗುತ್ತೆ… ಹಾಗಿದ್ರೆ ಮತ್ತೇನು ಮಾಡಬೇಕು?

ಕರಿದ ಆಹಾರ (fried food) ತಿನ್ನಲು ತುಂಬಾನೆ ರುಚಿಕರವಾಗುತ್ತದೆ. ಕರಿದ ತಿಂಡಿಗಳನ್ನು ಹೆಚ್ಚಿನ ಜನರು ಮತ್ತೆ ಮತ್ತೆ ತಿನ್ನಲು ಇಷ್ಟ ಪಡ್ತಾರೆ.ಆದರೆ ಜನರು ಅದನ್ನು ಮತ್ತೆ ಬಿಸಿ ಮಾಡಿದ ನಂತರ ತಿನ್ನಲು ಇಷ್ಟಪಡುವುದಿಲ್ಲ. ನಿಮಗೂ ಕರಿದ ಆಹಾರ ತಣ್ನಗಾದ ಮೇಲೆ ತಿನ್ನಲು ಇಷ್ಟವಾಗೋದಿಲ್ಲ ಅಲ್ವಾ? 

ಕರಿದ ಆಹಾರವನ್ನು ನೀವು ಮತ್ತೆ ಬಿಸಿಮಾಡಿದರೆ, ಅದರಲ್ಲಿ ಹೆಚ್ಚಿನ ಪ್ರಮಾಣದ ಎಣ್ಣೆಯ ಪಸೆ ಉಳಿಯುವುದರಿಂದ, ಅದನ್ನು ಮತ್ತೆ ತಿನ್ನಲು ಇಷ್ಟಪಡೋದಿಲ್ಲ.ಈ ಲೇಖನದಲ್ಲಿ ಕೆಲವು ಸುಲಭ ತಂತ್ರಗಳ ಬಗ್ಗೆ ನಿಮಗೆ ತಿಳಿಸುತ್ತೇವೆ, ಅದರ ಸಹಾಯದಿಂದ ನೀವು ಕರಿದ ಆಹಾರವನ್ನು ಸುಲಭವಾಗಿ ಮತ್ತೆ ಬಿಸಿ ಮಾಡಬಹುದು.

Tap to resize

ಓವನ್ ಬಳಸಿ
ಇತ್ತೀಚಿನ ದಿನಗಳಲ್ಲಿ ಜನರು ಮನೆಗಳಲ್ಲಿ ಮೈಕ್ರೋವೇವ್ (microwave)ಬಳಸಲು ಪ್ರಾರಂಭಿಸಿದ್ದಾರೆ. ಆದರೆ ಕರಿದ ಆಹಾರವನ್ನು ಮತ್ತೆ ಬಿಸಿಮಾಡಲು ಸ್ಟೌ ಬಳಸೋ ಬದಲು ಓವನ್ ಬಳಸೋದು ಉತ್ತಮವೆಂದು ಪರಿಗಣಿಸಲಾಗುತ್ತೆ. ಇದು ನಿಮ್ಮ ಕರಿದ ಆಹಾರವನ್ನು ಸಮಾನವಾಗಿ ಗರಿಗರಿಯಾಗಿಸುತ್ತೆ ಮತ್ತು ರುಚಿಕರವಾಗಿಸುತ್ತದೆ. ನೀವು ಬಯಸಿದರೆ ಬ್ರಾಯ್ಲರ್ ಗಳನ್ನು ಸಹ ಬಳಸಬಹುದು. 

ಮೊದಲಿಗೆ ಬೇಕಿಂಗ್ ಶೀಟ್ (baking sheet) ಅನ್ನು ಓವನ್ ನಲ್ಲಿ 400 ಡಿಗ್ರಿ ಫ್ಯಾರನ್ ಹೀಟ್ ಗೆ ಪ್ರೀಹೀಟ್ ಮಾಡಿ. ಈಗ ಕರಿದ ಆಹಾರವನ್ನು ಒಂದು ಪದರದಂತೆ ಹರಡಿ. ಒಮ್ಮೆಲೇ ಹೆಚ್ಚು ಕರಿದ ಆಹಾರ ಬಿಸಿ ಮಾಡಬಾರದು ಎಂಬುದನ್ನು ನೆನಪಿನಲ್ಲಿಡಿ. ನೀವು ತಯಾರಿಸುವ ವಸ್ತುವನ್ನು ಅವಲಂಬಿಸಿ, ಅದನ್ನು ಹತ್ತರಿಂದ ಇಪ್ಪತ್ತು ನಿಮಿಷಗಳ ನಡುವೆ ಬಿಸಿಯಾಗಲು ಬಿಡಿ. ಅಲ್ಲದೆ, ಚೆಕ್ ಮಾಡುತ್ತಿರಿ ಮತ್ತು ಅದನ್ನು ಮಧ್ಯದಲ್ಲಿ ತಿರುಗಿಸಿ.

ಏರ್ ಫ್ರೈಯರ್ ಬಳಸಿ
ಮನೆಯಲ್ಲಿ ಏರ್ ಫ್ರೈಯರ್ (air fryer) ಇದ್ದರೆ, ಕರಿದ ಆಹಾರವನ್ನು ಮತ್ತೆ ಬಿಸಿ ಮಾಡಲು ಉತ್ತಮ ಆಯ್ಕೆಯಾಗಿದೆ. ಇದಕ್ಕಾಗಿ, ಮೊದಲು ಏರ್ ಫ್ರೈಯರ್ ಅನ್ನು 375 F ಗೆ ಪ್ರೀಹೀಟ್ ಮಾಡಿ. ಈ ಸಮಯದಲ್ಲಿ, ಕರಿದ ಆಹಾರವನ್ನು ಫ್ರಿಜ್ ನಿಂದ ಹೊರತೆಗೆಯಿರಿ ಮತ್ತು ಅದು ಫಾರ್ಮ್ ತಾಪಮಾನಕ್ಕೆ ಬರಲು ಬಿಡಿ. 

ಈಗ ಕರಿದ ಆಹಾರವನ್ನು ಏರ್ ಫ್ರೈಯರ್ ಬಾಸ್ಕೆಟ್ ಮೇಲೆ ಒಂದು ಪದರದಂತೆ ಇರಿಸಿ. ಅಗತ್ಯಕ್ಕೆ ತಕ್ಕಂತೆ 5-10 ನಿಮಿಷಗಳ ಕಾಲ ಬೇಯಿಸಿ. ಅದರ ಮಧ್ಯೆ ಅದನ್ನು ಪರಿಶೀಲಿಸಲು ಮರೆಯದಿರಿ ಮತ್ತು ಅದನ್ನು ಒಮ್ಮೆ ತಿರುಗಿಸಿ ಇದರಿಂದ ಅದು ಸಮಾನವಾಗಿ ಬೇಯುತ್ತದೆ. ರುಚಿಯೂ ಫ್ರೆಶ್ ಆಗಿ ಇರುತ್ತೆ.

ಫ್ರೈಯಿಂಗ್ ಪ್ಯಾನ್ ಅಥವಾ ಪ್ಯಾನ್ ಬಳಸಿ
ನಿಮ್ಮ ಬಳಿ ಓವನ್ ಅಥವಾ ಏರ್ ಫ್ರೈಯರ್ ಇಲ್ಲದಿದ್ದರೆ, ಫ್ರೈಯಿಂಗ್ ಪ್ಯಾನ್ (frying pan) ಅಥವಾ ಪ್ಯಾನ್ ಸಹಾಯದಿಂದ ಕರಿದ ಆಹಾರವನ್ನು ನೀವು ಸುಲಭವಾಗಿ ಮತ್ತೆ ಬಿಸಿ ಮಾಡಬಹುದು. ಇದು ಪ್ರತಿ ಮನೆಯಲ್ಲೂ ಲಭ್ಯವಿದೆ. ಇದಕ್ಕಾಗಿ, ಮಧ್ಯಮ ಫ್ಲೇಮ್ ನಲ್ಲಿ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಎಣ್ಣೆ ಚೆನ್ನಾಗಿ ಬಿಸಿಯಾಗಲಿ. ಈ ಎಣ್ಣೆಯ ತಾಪಮಾನ ಸುಮಾರು 300 ಡಿಗ್ರಿ ಫ್ಯಾರನ್ ಹೀಟ್ ಆಗಿರಬೇಕು. ಈಗ ಅದಕ್ಕೆ ಕರಿದ ಆಹಾರ ಸೇರಿಸಿ ಮತ್ತು 2 ರಿಂದ 3 ನಿಮಿಷಗಳ ಕಾಲ ಬೇಯಿಸಿ.  ಬಾಣಲೆಯಲ್ಲಿ ಒಂದೇ ಬಾರಿಗೆ ಹೆಚ್ಚು ಕರಿದ ಆಹಾರ ಸೇರಿಸಬೇಡಿ ಎಂಬುದನ್ನು ನೆನಪಿನಲ್ಲಿಡಿ.

ಇದನ್ನು ನೆನಪಿನಲ್ಲಿಡಿ
ಆಗಾಗ್ಗೆ ಕರಿದ ಆಹಾರ ಸಹ ಎಣ್ಣೆಯಿಂದ ಕೂಡಿ, ಒದ್ದೆಯಾದಂತೆ ಆಗುತ್ತದೆ. ಈ ರೀತಿ ಆಗೋದು ಯಾಕಂದ್ರೆ ನೀವು ಅದನ್ನ ಸರಿಯಾಗಿ ಸ್ಟೋರ್ ಮಾಡಿರೋದಿಲ್ಲ. ಅಲ್ಲದೇ ನೀವು ಮಾರುಕಟ್ಟೆಯಿಂದ ಕರಿದ ಆಹಾರ ತಂದಿದ್ದರೆ ಅಥವಾ ಮನೆಯಲ್ಲಿ ತಯಾರಿಸುತ್ತಿದ್ದರೆ, ಅದನ್ನು ಗಾಳಿಯಾಡದ ಪೆಟ್ಟಿಗೆಯಲ್ಲಿ ಸಂಗ್ರಹಿಸಲು ಎಂದಿಗೂ ಮರೆಯಬೇಡಿ. ನೀವು ಅವುಗಳನ್ನು ಗಾಳಿಯಾಡುವ ರಟ್ಟಿನ ಪೆಟ್ಟಿಗೆಯಲ್ಲಿ ಹಾಕಬಹುದು ಅಥವಾ ಕರಿದ ಆಹಾರವನ್ನು ಕಾಗದದ ಟವೆಲ್ ನಿಂದ ಮುಚ್ಚಬಹುದು.

Latest Videos

click me!