ಬೆಳಗಿನ ಎನರ್ಜಿ, ಮಧ್ಯಾಹ್ನದ ರಿಲ್ಯಾಕ್ಸ್, ಸಂಜೆ ಸ್ನೇಹಿತರ ಜೊತೆ ಹರಟೆ ಎಲ್ಲದಕ್ಕೂ ಕಪ್ ಟೀ ಬೇಕು. ಮಳೆಗಾಲ ಶುರು ಆಗ್ತಿದ್ದಂತೆ ಟೀ ಕುಡಿಯೋದು ಹೆಚ್ಚಾಗುತ್ತೆ. ಆದ್ರೆ ಒಂದೇ ರುಚಿ ಟೀಯನ್ನ ಎಷ್ಟು ಸಲ ಕುಡಿತೀರಿ. ನಿಮಗೂ ಹಳೆ ಸ್ಟೈಲ್ ಬೋರ್ ಆಗಿದ್ರೆ ಹೊಸ ರುಚಿ ಟ್ರೈ ಮಾಡಿ.
ಸಾಮಾನ್ಯವಾಗಿ ನಾವು ಹಾಲನ್ನು ಬಿಸಿ ಮಾಡಿ, ಅದಕ್ಕೆ ಟೀ ಪುಡಿ ಹಾಕಿ ಕುದಿಸಿ, ಸಕ್ಕರೆ ಹಾಕಿ ಟೀ ತಯಾರಿಸ್ತೇವೆ. ಕೆಲವರು ನೀರಿಗೆ ಟೀ ಪುಡಿ, ಸಕ್ಕರೆ ಹಾಕಿ ಅದು ಚೆನ್ನಾಗಿ ಕುದ್ದ ಮೇಲೆ ಬಿಸಿ ಹಾಲನ್ನು ಸೇರಿಸಿ ಕುಡಿತಾರೆ. ಮಸಾಲೆ ಟೀ ಅಂತ ಅದಕ್ಕೆ ಶುಂಠಿ ಸೇರಿಸೋರ ಸಂಖ್ಯೆ ಸಾಕಷ್ಟಿದೆ. ಆದ್ರೆ ಈಗ ತಯಾರಿಸೋ ಟೀ ಸ್ವಲ್ಪ ಭಿನ್ನವಾಗಿದೆ.
25
ಕುಟ್ಟಿ ಪುಡಿ
ನಿಮಗೆ ಈ ಟೀ ತಯಾರಿಸೋಕೆ ಒರಳು ಕಲ್ಲು ಅಂದ್ರೆ ಕಟ್ಟು ಕಲ್ಲು ಬೇಕು. ಮೊದಲು ಸಕ್ಕರೆ ಹಾಗೂ ಟೀ ಪುಡಿಯನ್ನು ಕುಟ್ಟು ಕಲ್ಲಿನಲ್ಲಿ ಕುಟ್ಟಬೇಕು. ನುಣ್ಣಗೆ ಪುಡಿ ಮಾಡ್ಬೇಡಿ. ಸ್ವಲ್ಪ ಒರಟಾಗಿ ಅರೆದುಕೊಳ್ಳಿ. ಹೀಗೆ ಮಾಡಿದ್ರೆ ಟೀ ಎಲೆಯಿಂದ ಮತ್ತಷ್ಟು ನೈಸರ್ಗಿಕ ಪರಿಮಳ ಹೊರಗೆ ಬರುತ್ತೆ. ಟೀ ಪುಡಿಯಲ್ಲಿ ಮಿಕ್ಸ್ ಆದ ಸಕ್ಕರೆ ಕರಗಿ ಗೋಲ್ಡನ್ ಬಣ್ಣಕ್ಕೆ ತಿರುಗಲು ಶುರುವಾಗುತ್ತದೆ. ಇದನ್ನೇ ಕ್ಯಾರಮೆಲೈಸೇಶನ್ ಅಂತಾರೆ. ಇದೇ ಈ ಟೀಯ ಸೀಕ್ರೆಟ್. ಇದರಿಂದ ಟೀಗೆ ಸ್ಮೋಕಿ, ರಿಚ್ ಫ್ಲೇವರ್ ಬರುತ್ತೆ.
35
ಟೀ ತಯಾರಿಸುವ ವಿಧಾನ
ಈಗ ಈ ಮಿಶ್ರಣವನ್ನು ಒಂದು ಬೌಲ್ ಗೆ ಹಾಕಿ. ಅದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಗ್ಯಾಸ್ ಆನ್ ಮಾಡಿ, ಹಾಲನ್ನು ಕುದಿಸಿ. ನೀವು ಬಯಸಿದ್ರೆ ಸ್ವಲ್ಪ ಕೇಸರಿ ಸೇರಿಸ್ಬಹುದು. ಕೇಸರಿ ಹಾಕಿದ್ರೆ ಟೀಯ ಬಣ್ಣ ಮತ್ತಷ್ಟು ರಾಯಲ್ ಆಗುತ್ತೆ.
ಇದಾದ ಮೇಲೆ ಶುಂಠಿ, ಏಲಕ್ಕಿ, ಲವಂಗ, ಕರಿಮೆಣಸು ಮತ್ತು ಚಕ್ರ ಹೂವು ತೆಗೆದುಕೊಂಡು ಅದನ್ನು ಕುಟ್ಟು ಕಲ್ಲಿನಲ್ಲಿ ಚೆನ್ನಾಗಿ ಅರೆಯಬೇಕು. ಕುದಿಯುತ್ತಿರುವ ಹಾಲಿಗೆ ಈ ಫ್ರೆಶ್ ಮಸಾಲೆಯನ್ನು ಸೇರಿಸಿ ಮಿಕ್ಸ್ ಮಾಡಿ. ಈಗ ಟೀಯ ನಿಜವಾದ ಮ್ಯಾಜಿಕ್ ಶುರುವಾಗುತ್ತದೆ. ಮನೆಯ ತುಂಬಾ ಹರಡುವ ಆ ಸುವಾಸನೆ, ಟೀ ಕುಡಿಯುವ ಮೊದಲೇ ಮನಸ್ಸನ್ನು ಫ್ರೆಶ್ ಮಾಡುತ್ತೆ.
55
ಸ್ವಾದ ಸೂಪರ್
ಮೂರರಿಂದ ನಾಲ್ಕು ಬಾರಿ ಟೀಯನ್ನು ಚೆನ್ನಾಗಿ ಕುದಿಸಿ. ನಂತರ ಸೋಸಿ ಕಪ್ ಗೆ ಹಾಕಿ ಸರ್ವ್ ಮಾಡಿ. ಮೊದಲ ಸಿಪ್ ತೆಗೆದುಕಕೊಳ್ತಿದ್ದಂತೆ ಮಸಾಲೆಗಳ ಕಿಕ್ ನಿಮಗೆ ಸಿಗುತ್ತೆ. ನಾಲಿಗೆ ಮತ್ತೆ ಮತ್ತೆ ಇಂಥ ಟೀ ಕೇಳುತ್ತೆ. ಕಿಚನ್ ಕಿ ದುನಿಯಾ ಹೆಸರಿನ ಇನ್ಸ್ಟಾ ಖಾತೆಯಲ್ಲಿ ಇದ್ರ ವಿಡಿಯೋ ಹಂಚಿಕೊಳ್ಳಲಾಗಿದೆ. ಸಾಮಾನ್ಯ ಟೀಗಿಂತ ಇದು ಹೆಚ್ಚು ರಿಚ್, ಹೆಚ್ಚು ಸ್ಟ್ರಾಂಗ್, ಹೆಚ್ಚು ಸುಗಂಧಭರಿತ. ನೀವೂ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.