ಪಾಂಡಾಗೆ ಬಿದಿರನ್ನು ಕಂಡರೆ ಎಷ್ಟು ಇಷ್ಟ ಎಂಬುದು ಎಲ್ಲರಿಗೂ ಗೊತ್ತು. ಮುದ್ದಾದ ಪಾಂಡಾಗಳ ಮೃದುವಾದ, ಹೊಳೆಯುವ ಮೈ ಮತ್ತು ಅವುಗಳ ಸೌಂದರ್ಯವು ಬಿದಿರಿನ ಪರಿಣಾಮವೇ ಅಥವಾ ಅಲ್ಲವೇ ಎಂಬುದು ಇನ್ನೂ ಸಂಶೋಧನೆಯ ವಿಷಯ. ಆದರೆ ಈ ಸಸ್ಯವು ಖಂಡಿತವಾಗಿಯೂ ಮಾನವನ ತ್ವಚೆಯ ಆರೈಕೆಗೆ ಆಸಕ್ತಿದಾಯಕ ಅಂಶ.
ಇಂದು ವಿಶ್ವ ಬಿದಿರು ದಿನವಾದ್ದರಿಂದ, ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಆಂತರಿಕ ಔಷಧದ ಹೆಚ್ಚುವರಿ ನಿರ್ದೇಶಕರಾದ ಡಾ. ಬೇಲಾ ಶರ್ಮಾ, ಚಿಗುರುಗಳ ಕೆಲವು ಆರೋಗ್ಯ ಪ್ರಯೋಜನಗಳನ್ನು ಹೇಳಿದ್ದಾರೆ. ಅದನ್ನು ನಮ್ಮ ರೊಟೀನ್‌ನಲ್ಲಿ ಏಕೆ ಸೇರಿಸಬೇಕು ಎಂದು ತಿಳಿಸಿದ್ದಾರೆ.
ಬಿದಿರು ಮೊಡವೆ ವಿರೋಧಿ. ಸಂಕೋಚಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ ಇದು ಚರ್ಮಕ್ಕೆ ನವ ಯೌವನ ನೀಡುತ್ತದೆ. ಇದು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ. ಬಿದಿರು ತ್ವಚೆಯು ತನ್ನ ಕಾಂತಿ ಮತ್ತು ದೃಢತೆಯನ್ನು ಉಳಿಸಿಕೊಳ್ಳಲು ನೆರವಾಗುತ್ತದೆ.
ಚರ್ಮಕ್ಕೆ ಇದು ಮಾಂತ್ರಿಕ ಮದ್ದು. ಬಿದಿರಿನಲ್ಲಿ ನೈಸರ್ಗಿಕ ಸಿಲಿಕಾ ಇದ್ದು ಇದು ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಚರ್ಮವನ್ನು ಗಟ್ಟಿಗೊಳಿಸುತ್ತದೆ ಅಂದರೆ ಸುಕ್ಕುಬಿದ್ದು ಜೋತುಬೀಳುವುದನ್ನು ತಪ್ಪಿಸಿ ಸ್ಟಿಫ್ ಆಗಿರುವಂತೆ ನೋಡುತ್ತದೆ.
ಇದು ಚರ್ಮವನ್ನು ಮಾಲಿನ್ಯ ಮತ್ತು ಹಾನಿಕಾರಕ ಯುವಿ ಕಿರಣಗಳಿಂದ ರಕ್ಷಿಸುತ್ತದೆ. ಇದನ್ನು ಸೇರಿಸಿದರೆ, ಇದು ಚರ್ಮವನ್ನು ಸ್ವಚ್ಛವಾಗಿ, ಮೃದುವಾಗಿ ಮತ್ತು ತೇವಾಂಶದಿಂದ ಕೂಡಿರುವಂತೆ ಮಾಡುತ್ತದೆ ಎಂದು ಶರ್ಮಾ ಹೇಳುತ್ತಾರೆ.
ಎಲ್ಲಾ ಪ್ರಮುಖ ಕಾಸ್ಮೆಟಿಕ್ ಬ್ರಾಂಡ್‌ಗಳಲ್ಲಿ ಬಿದಿರು ಇದೆ ಎಂದು ಹೇಳಿಕೊಳ್ಳಲು ಇದೂ ಒಂದು ಕಾರಣವಾಗಿರಬಹುದು. ಬಿದಿರು ಹಲವು ರೀತಿಯಲ್ಲಿ ತ್ವಚೆಯ ಸೌಂದರ್ಯಕ್ಕೆ ನೆರವಾಗುತ್ತದೆ