ಈ ಟಿಪ್ಸ್ ಬಳಸಿ, ಮನೆಯಲ್ಲಿಯೇ ರೆಸ್ಟೋರೆಂಟ್ ರೀತಿ ಫ್ಲಫಿ ಅನ್ನ ತಯಾರಿಸಿ!

First Published | Nov 17, 2022, 5:31 PM IST

ನೀವು ಸಹ ಅನ್ನ ತಯಾರಿಸುವಾಗ ಫ್ಲಫಿಯಾಗಿ ಬರುತ್ತಿಲ್ವಾ, ಹಾಗಿದ್ರೆ ಇಲ್ಲಿ ಕೆಲವು ಸಲಹೆಗಳನ್ನು ಹೇಳಲಾಗಿದೆ, ಇದರಿಂದ ನೀವು ಮನೆಯಲ್ಲಿ ರೆಸ್ಟೋರೆಂಟ್ ಗಳಂತೆ ಅರಳುವ ಅನ್ನವನ್ನು ತಯಾರಿಸಲು ಸಾಧ್ಯವಾಗುತ್ತೆ. ಅದಕ್ಕೆ ನೀವೇನು ಮಾಡಬೇಕು? ನೀವು ಕೂಡ ಈ ಟಿಪ್ಸ್ ಫಾಲೋ ಮಾಡಿ, ಫ್ಲಫಿ ಅನ್ನ ತಯಾರಾಗೋದನ್ನ ಟ್ರೈ ಮಾಡಿ ನೋಡಿ.  

ಊಟದ ತಟ್ಟೆಯಲ್ಲಿ ಅನ್ನ ಇಲ್ಲದಿದ್ದರೆ, ಆಹಾರ ಅಪೂರ್ಣವೆಂದು ತೋರುತ್ತೆ. ಸಾಮಾನ್ಯವಾಗಿ, ಪ್ರತಿ ಮನೆಯಲ್ಲೂ ಪ್ರತಿದಿನ ಅನ್ನ(Rice) ತಯಾರಿಸಲಾಗುತ್ತೆ, ಆದರೆ ಮಹಿಳೆಯರು ಅನ್ನ ತಯಾರಿಸೋವಾಗ ಕೆಲವೊಮ್ಮೆ ಅಕ್ಕಿ ಹಾಗೆ ಉಳಿಯುತ್ತೆ ಅಥವಾ ಹೆಚ್ಚು ಬೇಯುತ್ತೆ ಎಂದು ಆಗಾಗ್ಗೆ ದೂರುತ್ತಾರೆ. ಇದು ಯಾಕೆ ಸಂಭವಿಸುತ್ತದೆ? ನಾವು ಅಡುಗೆ ಮಾಡಲು ಅಕ್ಕಿ ಬಳಸುವಾಗ ನಮಗೆ ನೀರು ಎಷ್ಟು ಹಾಕಬೇಕು ಅನ್ನೋದು ಗೊತ್ತಾಗೋದಿಲ್ಲ. ಇದರಿಂದಾಗಿ ಅದು ಅಂಟಿಕೊಳ್ಳುತ್ತೆ ಅಥವಾ ತುಂಬಾ ನೀರಿನಂತೆ ಉಳಿಯುತ್ತೆ. ಈ ಟಿಪ್ಸ್ ಅಳವಡಿಸಿಕೊಳ್ಳೋ ಮೂಲಕ ಫ್ಲಫಿ ಅನ್ನ ತಯಾರಿಸಲು ಸಾಧ್ಯವಾಗುತ್ತೆ. ಫ್ಲಫಿ ಅನ್ನ ಹೇಗೆ ತಯಾರಿಸೋದು ಎಂದು ತಿಳಿಯೋಣ.

ಈ ಸಲಹೆಗಳು ಫ್ಲಫಿ ಅನ್ನ ತಯಾರಿಸಲು ಸಹಾಯ ಮಾಡುತ್ತೆ

ಸರಿಯಾದ ಪ್ರಮಾಣದಲ್ಲಿ ನೀರನ್ನು(Water) ಬಳಸಿ:
ಅಕ್ಕಿ ಬೇಯಿಸಲು ನೀರು ಬಹಳ ಮುಖ್ಯ, ಆದರೆ ಅದಕ್ಕಿಂತ ಹೆಚ್ಚಾಗಿ, ಸರಿಯಾದ ಪ್ರಮಾಣದಲ್ಲಿ ನೀರನ್ನು ಸೇರಿಸೋದು ಅಗತ್ಯ. ನಾವು ಆಗಾಗ್ಗೆ ಲೆಕ್ಕಕ್ಕೆ ಸಿಗದೆ ನೀರನ್ನು ಸೇರಿಸುತ್ತೇವೆ ಆದರೆ ಅಕ್ಕಿಯನ್ನು ಬೇಯಿಸಲು, ನೀವು ಒಂದು ಲೋಟ ಅನ್ನ ತಯಾರಿಸುತ್ತಿದ್ದರೆ, ಅದಕ್ಕೆ ಎರಡು ಲೋಟ ನೀರನ್ನು ಸೇರಿಸಿ,  ದುಪ್ಪಟ್ಟು ಪ್ರಮಾಣದ ನೀರನ್ನು ಸೇರಿಸುತ್ತೀರಿ ಎಂಬುದನ್ನು ನೆನಪಿನಲ್ಲಿಡಬೇಕು. ಹಾಗೆ,  ಕುಕ್ಕರ್‌ನಲ್ಲಿ ಅನ್ನ ತಯಾರಿಸುತ್ತಿದ್ದರೆ, ಒಂದು ಲೋಟ ಅಕ್ಕಿಗೆ ಒಂದೂವರೆ ಲೋಟ ನೀರನ್ನು ಸೇರಿಸಿ ಮ್ಯಾಜಿಕ್ ನೋಡಿ.  

Tap to resize

ನಿಂಬೆ(Lemon) ಮತ್ತು ಉಪ್ಪನ್ನು ಸೇರಿಸಿ:

ಅನ್ನವನ್ನು ತಯಾರಿಸಲು, ಪಾತ್ರೆಯಲ್ಲಿ ನೀರು ಮತ್ತು ಅಕ್ಕಿಯನ್ನು ಹಾಕಿದಾಗ, ಅದಕ್ಕೆ ಮರೆಯದೆ ನಿಂಬೆ ರಸ ಸೇರಿಸಿ ಮತ್ತು ಒಂದು ಚಿಟಿಕೆ ಉಪ್ಪು ಸೇರಿಸಿ, ಇದನ್ನು ಮಾಡುವ ಮೂಲಕ, ಫ್ಲಫಿ ಅನ್ನ ತಯಾರಾಗುತ್ತೆ. ಅನ್ನ ಒಂದಕ್ಕೊಂದು ಅಂಟಿಕೊಳ್ಳದೆ ಉದುರುದುರಾಗಿ ಬರುತ್ತೆ.

ಕಡಿಮೆ ಉರಿಯಲ್ಲಿ ಬೇಯಿಸಿ:

ನೀವು ಕುಕ್ಕರ್ ನಲ್ಲಿ ಅನ್ನ ತಯಾರಿಸುತ್ತಿದ್ದರೆ, ವಿಸಿಲ್ ಆದ ನಂತ್ರ, ಗ್ಯಾಸ್(Gas) ಅನ್ನು 5 ನಿಮಿಷಗಳ ಕಾಲ ನಿಧಾನಗೊಳಿಸಿ ಮತ್ತು ಕಡಿಮೆ ಗ್ಯಾಸ್ ನಲ್ಲಿ ಅನ್ನವನ್ನು ಬೇಯಲು ಬಿಡಿ. ಇದನ್ನು ಮಾಡೋದರಿಂದ, ಅಕ್ಕಿಯಲ್ಲಿ ನೀರು ಸರಿಯಾದ ರೀತಿಯಲ್ಲಿ ಮೇಂಟೈನ್ ಆಗುತ್ತೆ ಮತ್ತು ಅನ್ನ ಸಂಪೂರ್ಣವಾಗಿ ಫ್ಲಫಿಯಾಗುತ್ತೆ.

ಅಕ್ಕಿಗೆ ಬೆಣ್ಣೆ ಅಥವಾ ತುಪ್ಪವನ್ನು(Ghee) ಸೇರಿಸಿ:

ಸಾಮಾನ್ಯವಾಗಿ ಮಹಿಳೆಯರು ಅಕ್ಕಿಯನ್ನು ಚೆನ್ನಾಗಿ ತೊಳೆಯೋದಿಲ್ಲ, ನೀವು ಅಕ್ಕಿಯನ್ನು ಬೇಯಿಸುತ್ತಿದ್ದರೆ, ನಾಲ್ಕರಿಂದ ಐದು ಸಲ ನೀರಿನಿಂದ ಅಕ್ಕಿಯನ್ನು ತೊಳೆಯಿರಿ, ಇದನ್ನು ಮಾಡೋದರಿಂದ, ಅಕ್ಕಿ ಕ್ಲೀನ್ ಆಗುತ್ತೆ ಮತ್ತು ಫ್ಲಫಿ ಅನ್ನ ತಯಾರಾಗುತ್ತೆ. ಅನ್ನ ತಯಾರಿಸಲು ಒಂದು ಚಮಚ ತುಪ್ಪ ಅಥವಾ ಬೆಣ್ಣೆಯನ್ನು ಸೇರಿಸಬಹುದು, ಇದು ಕೂಡ ಅನ್ನವನ್ನು ಫ್ಲಫಿ ಮಾಡುತ್ತೆ. 

ಲವಂಗದ (Clove) ಬಳಕೆ:

ಅನ್ನ ಬೇಯಿಸುವಾಗ, ಪುದಿನಾ ಮತ್ತು ಲವಂಗವನ್ನು ಸೇರಿಸಬಹುದು, ಇದು ಉತ್ತಮ ಪರಿಮಳವನ್ನು ನೀಡುತ್ತೆ. ಪರಿಮಳ ಮಾತ್ರವಲ್ಲ ಅನ್ನವನ್ನು ಫ್ಲಫಿ ಸಹ ಮಾಡುತ್ತೆ. ಇವುಗಳ ಬಳಕೆಯಿಂದ ಅನ್ನದ ರುಚಿ ಹೆಚ್ಚುತ್ತೆ, ಬೇಕಾದರೆ ನೀವು ಇದನ್ನು ಇಂದೇ ಟ್ರೈ ಮಾಡಿ ನೋಡಿ. 
 

Latest Videos

click me!