ಆಲೂಗಡ್ಡೆ ಫ್ರೈ ಮಾಡುವಾಗ ಪ್ಯಾನ್‌ಗೆ ಅಂಟಿಕೊಳ್ಳುತ್ತಾ? ಶೆಫ್ ಹೇಳಿಕೊಟ್ಟ ಈ ಸಿಂಪಲ್ ಟ್ರಿಕ್ಸ್ ಫಾಲೋ ಮಾಡಿ!

Published : Aug 04, 2026, 11:07 PM IST

Potato frying tips: ಆಲೂಗಡ್ಡೆ ಫ್ರೈ ಮಾಡುವಾಗ ಪ್ರತಿ ಬಾರಿಯೂ ಪ್ಯಾನ್‌ಗೆ ಅಂಟಿಕೊಂಡು ಕಿರಿಕಿರಿ ಉಂಟುಮಾಡುತ್ತಿದೆಯೇ? ಪ್ರಸಿದ್ಧ ಶೆಫ್ ರಣವೀರ್ ಬ್ರಾರ್ ಅವರು ತಿಳಿಸಿರುವ ಈ ಸುಲಭ ತಂತ್ರಗಳನ್ನು ಅನುಸರಿಸಿದರೆ, ನಿಮ್ಮ ಮನೆಯಲ್ಲೂ ಹೋಟೆಲ್‌ನಂತೆ ಕ್ರಿಸ್ಪಿ ಆಲೂ ಫ್ರೈ ತಯಾರಿಸಬಹುದು.

PREV
15
ಇದು ಸಾಮಾನ್ಯ ಸಮಸ್ಯೆ

ಇದು ಸಾಮಾನ್ಯ ಸಮಸ್ಯೆ
ಆಲೂಗಡ್ಡೆ ಪಲ್ಯ, ಫ್ರೆಂಚ್ ಫ್ರೈಸ್ ಅಥವಾ ಆಲೂ ಭುಜಿಯಾ ತಯಾರಿಸುವಾಗ ಒಂದು ಸಾಮಾನ್ಯ ಸಮಸ್ಯೆ ಎದುರಾಗುತ್ತದೆ. ಏನೆಂದರೆ, ಆಲೂಗಡ್ಡೆ ತುಂಡುಗಳನ್ನು ಎಣ್ಣೆಗೆ ಹಾಕಿದ ತಕ್ಷಣ ಅವು ಪ್ಯಾನ್‌ಗೆ ಅಂಟಿಕೊಳ್ಳುತ್ತವೆ ಅಥವಾ ಎಣ್ಣೆ ಮೇಲಕ್ಕೆ ಸಿಡಿಯತೊಡಗುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಪ್ರಸಿದ್ಧ ಸೆಲೆಬ್ರಿಟಿ ಶೆಫ್ ರಣವೀರ್ ಬ್ರಾರ್ ಅವರು ಕೆಲವು ಉಪಯುಕ್ತ ಕಿಚನ್ ಹ್ಯಾಕ್ಸ್‌ಗಳನ್ನು ಹಂಚಿಕೊಂಡಿದ್ದಾರೆ. ಅವು ಇಲ್ಲಿವೆ..

25
ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ

ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ
ನೀವು ಆಲೂಗಡ್ಡೆಯನ್ನು ಯಾವ ಆಕಾರದಲ್ಲಿ ಬೇಕಾದರೂ ಕತ್ತರಿಸಿಕೊಳ್ಳಿ (ಫ್ರೆಂಚ್ ಫ್ರೈಸ್ ಅಥವಾ ಸಣ್ಣ ತುಂಡುಗಳು). ಕತ್ತರಿಸಿದ ನಂತರ ಅವುಗಳನ್ನು ಒಂದು ದೊಡ್ಡ ಪಾತ್ರೆಯಲ್ಲಿ ನೀರು ಹಾಕಿ ಕನಿಷ್ಠ 20-30 ನಿಮಿಷಗಳ ಕಾಲ ನೆನೆಸಿಡಬೇಕು.

35
ಸ್ಟಾರ್ಚ್ (ಪಿಷ್ಟ) ಹೊರಹೋಗುತ್ತೆ

ಸ್ಟಾರ್ಚ್ (ಪಿಷ್ಟ) ಹೊರಹೋಗುತ್ತೆ
ಆಲೂಗಡ್ಡೆಯನ್ನು ನೀರಿನಲ್ಲಿ ನೆನೆಸುವುದರಿಂದ ಅದರಲ್ಲಿರುವ ಹೆಚ್ಚಿನ ಪ್ರಮಾಣದ ಸ್ಟಾರ್ಚ್ ಹೊರಬರುತ್ತದೆ. ಈ ಸ್ಟಾರ್ಚ್ ಅಂಶವೇ ಆಲೂಗಡ್ಡೆ ಪ್ಯಾನ್‌ಗೆ ಅಂಟಿಕೊಳ್ಳಲು ಮತ್ತು ಎಣ್ಣೆ ಸಿಡಿಯಲು ಪ್ರಮುಖ ಕಾರಣ. ಹೀಗೆ ಮಾಡುವುದರಿಂದ ಆಲೂಗಡ್ಡೆ ಅಂಟಿಕೊಳ್ಳುವುದಿಲ್ಲ ಮತ್ತು ಫ್ರೆಂಚ್ ಫ್ರೈಸ್ ಹೆಚ್ಚು ಕ್ರಂಚಿಯಾಗಿ ಬರುತ್ತವೆ.

45
ಎರಡು ಬಾರಿ ತೊಳೆಯಿರಿ ಮತ್ತು ಒರೆಸಿ

ಎರಡು ಬಾರಿ ತೊಳೆಯಿರಿ ಮತ್ತು ಒರೆಸಿ
ಅರ್ಧ ಗಂಟೆ ನೆನೆಸಿದ ನಂತರ, ಆಲೂಗಡ್ಡೆಯನ್ನು ಮತ್ತೊಮ್ಮೆ ಶುದ್ಧವಾದ ನೀರಿನಲ್ಲಿ ತೊಳೆಯಿರಿ. ನಂತರ ಮುಖ್ಯವಾದ ಕೆಲಸವೆಂದರೆ, ಒಂದು ಕಾಟನ್ ಬಟ್ಟೆಯ ಮೇಲೆ ಆಲೂಗಡ್ಡೆಗಳನ್ನು ಹರವಿ ಚೆನ್ನಾಗಿ ಒರೆಸಿಕೊಳ್ಳಿ. ಆಲೂಗಡ್ಡೆಯಲ್ಲಿ ತೇವಾಂಶ ಇಲ್ಲದಿದ್ದರೆ ಎಣ್ಣೆ ಸಿಡಿಯುವುದಿಲ್ಲ.

55
ಬಣ್ಣಕ್ಕಾಗಿ ಅರಿಶಿನ ಬಳಸಿ

ಬಣ್ಣಕ್ಕಾಗಿ ಅರಿಶಿನ ಬಳಸಿ
ನಿಮ್ಮ ಆಲೂಗಡ್ಡೆ ಫ್ರೈ ಹೋಟೆಲ್ ಶೈಲಿಯಲ್ಲಿ ಆಕರ್ಷಕ ಬಣ್ಣ ಹೊಂದಿರಬೇಕೆಂದರೆ, ನೀರು ಮತ್ತು ತೇವಾಂಶವನ್ನು ಒರೆಸಿದ ನಂತರ ಅದಕ್ಕೆ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ. ಆಮೇಲೆ ಎಣ್ಣೆಗೆ ಹಾಕಿದರೆ ಆಲೂಗಡ್ಡೆಗೆ ಉತ್ತಮ ಗೋಲ್ಡನ್ ಬಣ್ಣ ಬರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories