ಮಟನ್ ಇಷ್ಟಪಡದ ಜನರ ಸಂಖ್ಯೆ ಕಡಿಮೆಯೇ ಇರಬಹುದು, ಮಟನ್ ಕರಿ, ಮಟನ್ ಬಿರಿಯಾನಿಯನ್ನು(mutton biriyani) ಹೆಚ್ಚಿನ ಜನ ಇಷ್ಟಪಡುತ್ತಾರೆ. ಆದ್ರೆ ನಿಮಗೆ ಗೊತ್ತಾ? ಮಟನ್ ಸೇವಿಸೋದರಿಂದ ಆರೋಗ್ಯಕ್ಕೆ ತುಂಬಾನೆ ಪ್ರಯೋಜನ ಇದೆ ಅನ್ನೋದು.ಬಂಜೆತನದಂತಹ ಸಮಸ್ಯೆಗಳನ್ನು ತೆಗೆದುಹಾಕುವುದರಿಂದ ಈ ರುಚಿಕರ ಖಾದ್ಯ ಪುರುಷರಿಗೆ ಅತ್ಯಂತ ಪ್ರಯೋಜನಕಾರಿ. ಇದಲ್ಲದೆ, ಇದರಲ್ಲಿ ಇನ್ನೂ ಅನೇಕ ಅಂಶಗಳು ಕಂಡುಬರುತ್ತವೆ, ಇದು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ನಿಯಮಿತವಾಗಿ ಸೇವಿಸುವ ಜನರು ಅನೇಕ ರೀತಿಯ ಸಮಸ್ಯೆಗಳಿಂದ ದೂರವಿರುತ್ತಾರೆ. ಮಟನ್ ತಿನ್ನುವುದರಿಂದ ನೀವು ಎಷ್ಟು ಪ್ರಯೋಜನಗಳನ್ನು ಪಡೆಯುತ್ತೀರಿ ಅನ್ನೋದನ್ನು ತಿಳಿಯೋಣ.