ಏರುತ್ತಿರುವ ಚಿನ್ನದ ಬೆಲೆಗಳು ನಮ್ಮೆಲ್ಲರನ್ನೂ ಆಶ್ಚರ್ಯಗೊಳಿಸುತ್ತಿವೆ. ಅದರ ಬೆಲೆಯನ್ನು ಕೇಳಿದ್ರೆ ಹೇಗಪ್ಪಾ ಚಿನ್ನ ಖರೀದಿಸೋದು ಅಂತಾ ಯೋಚ್ನೆ ಬರೋದಂತೂ ಖಚಿತ. ಆದರೆ ಚಿನ್ನವು ವಿಶ್ವದ ಏಕೈಕ ದುಬಾರಿ ವಸ್ತು ಎಂದು ನೀವು ಭಾವಿಸುತ್ತೀರಾ? ಇಲ್ಲ, ಆಹಾರವು ಚಿನ್ನಕ್ಕಿಂತ ಅನೇಕ ಪಟ್ಟು ದುಬಾರಿ. ಅಂದಹಾಗೆ, ನಾವೆಲ್ಲರೂ ಕೇಸರಿ ಮತ್ತು ಡ್ರೈ ಪ್ರುಟ್ಸ್ ಅನ್ನು ಇಲ್ಲಿಯವರೆಗೆ ದುಬಾರಿ ಎಂದು ಪರಿಗಣಿಸುತ್ತಿದ್ದೆವು, ಆದರೆ ಇಂದು ನಾವು ವಿಶ್ವದ ವಸ್ತುಗಳ ಬಗ್ಗೆ ನಿಮಗೆ ಹೇಳುತ್ತೇವೆ, ಅವುಗಳ ಬೆಲೆಗಳನ್ನು ಕೇಳಿದ್ರೆ ಅದನ್ನು ತಿನ್ನಬೇಕೆ ಎಂದು ಯೋಚ್ನೆ ಮಾಡೋದು ಖಚಿತ. ಇವು ಎಷ್ಟು ದುಬಾರಿ (expensive food) ಆಗಿವೆ ಅಂದ್ರೆ ಸಾಮಾನ್ಯ ಜನರು ಅವುಗಳನ್ನು ಖರೀದಿಸುವ ಬಗ್ಗೆ ಯೋಚಿಸಲು ಸಹ ಸಾಧ್ಯವಿಲ್ಲ. ವಿಶ್ವದ ಈ ಅಮೂಲ್ಯ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.