ಉದ್ದ, ಥಿಕ್ ಕೂದಲು ಬೇಕಂದ್ರೆ ಇವನ್ನೆಲ್ಲ ತಿನ್ನಬೇಕು!

First Published Oct 10, 2024, 2:58 PM IST

ಸಾವಿರಾರು ರೂಪಾಯಿ ಖರ್ಚು ಮಾಡಿ ಏನೇನೋ ಎಣ್ಣೆ, ಕ್ರೀಮು ಬಳಸುತ್ತಲೇ ಇರುತ್ತೀರಿ. ಆದರೆ.. ಇಷ್ಟೆಲ್ಲಾ ಮಾಡಿದರೂ ಕೂಡ ಕೂದಲು ಬೆಳೆಯುತ್ತಿಲ್ಲ ಅಂತ ಬೇಸರ ಪಡ್ತಿದ್ದೀರಾ? ಹಾಗಾದ್ರೆ..ಈ ಸಮಸ್ಯೆಗೆ  ಇಲ್ಲಿದೆ ಪರಿಹಾರ
 

ಉದ್ದ ಕೂದಲೆಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಕೂದಲು ದಟ್ಟವಾಗಿ, ಉದ್ದವಾಗಿ, ಕಪ್ಪಾಗಿದ್ರೆ. ಸೌಂದರ್ಯ ಇಮ್ಮಡಿಗೊಳ್ಳುತ್ತೆ. ಆದ್ರೆ, ಈಗಿನ ಕಾಲದಲ್ಲಿ ಉದ್ದ ಕೂದಲಿರಲಿ ಇರೋ ಸ್ವಲ್ಪ ಕೂದಲನ್ನು ಹೇಗೆ ಕಾಪಾಡಿಕೊಳ್ಳೋದು ಅನ್ನೋ ಪರಿಸ್ಥಿತಿ ಇದೆ. ಕೂದಲನ್ನ ಕಾಪಾಡಿಕೊಳ್ಳೋಕೆ ಜನ ಹೇಗೇಗೋ ಯತ್ನಿಸುತ್ತಾರೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಏನೇನೋ ಎಣ್ಣೆ, ಕ್ರೀಮ್‌ ಬಳಸುತ್ತಲೇ ಇರುತ್ತಾರೆ. ಆದರೆ,ಇಷ್ಟೆಲ್ಲಾ ಮಾಡಿದರೂ ಕೂದಲು ಬೆಳೆಯುತ್ತಿಲ್ಲ ಅಂತ ಬೇಸರ ಪಡ್ತಿದ್ದೀರಾ? ಹಾಗಾದ್ರೆ..ಈ ಸಮಸ್ಯೆಗೆ ನಮ್ಮ ಬಳಿ ಪರಿಹಾರ ಇದೆ.

ಕೂದಲು ಚೆನ್ನಾಗಿ ಬೆಳೆಯಬೇಕು ಅಂತ ಇದ್ರೆ ಮೊದಲು ಆಹಾರದ ಮೇಲೆ ಹೆಚ್ಚಿನ ಗಮನ ಕೊಡಿ. ಕೂದಲು ಬೆಳವಣಿಗೆ ನಿಲ್ಲೋಕೆ, ಕೂದಲು ಉದುರೋಕೆ ಕಾರಣಗಳು ತುಂಬಾ ಇರಬಹುದು. ಶರೀರದಲ್ಲಿನ ಹಾರ್ಮೋನುಗಳ ಅಸಮತೋಲನ, ಶರೀರಕ್ಕೆ ಬೇಕಾದ ಪೌಷ್ಟಿಕ ಆಹಾರದ ಕೊರತೆ, ಒತ್ತಡ, ಥೈರಾಯ್ಡ್, ಪ್ರಸವ ನಂತರ ಕೂದಲು ಉದುರುವಿಕೆ, ಆನುವಂಶಿಕ ಕಾರಣಗಳು ಸೇರಿ ಹಲವು ಕಾರಣಗಳು ಕೂದಲು ಬೆಳವಣಿಗೆ ಕುಂಠಿತಕ್ಕೆ ಕಾರಣವಾಗಬಹುದು. ನೀವು ಉದ್ದ, ದಟ್ಟ, ಶಕ್ತಿಯುತ ಕೂದಲು ಬೇಕಾದರೆಆಹಾರದ ಮೇಲೆ ಗಮನ ಹರಿಸಬೇಕು. ದೈನಂದಿನ ಆಹಾರದಲ್ಲಿ ಇವನ್ನು ಸೇರಿಸಿಕೊಂಡ್ರೆ, ಕೂದಲು ಆರೋಗ್ಯವಾಗಿರುತ್ತೆ. 
 

Latest Videos


ಅಂಜೂರ, ಖರ್ಜೂರ, ಒಣದ್ರಾಕ್ಷಿ

ಡ್ರೈ ಫ್ರೂಟ್ಸ್ ನಮ್ಮ ಆರೋಗ್ಯ ತುಂಬಾ ಒಳ್ಳೇಯದು. ಮುಖ್ಯವಾಗಿ ಅಂಜೂರ, ಖರ್ಜೂರ, ಒಣದ್ರಾಕ್ಷಿಯನ್ನು ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ. ಈ ಮೂರನ್ನ ಸೇವಿಸಿದ್ರೆ ಖಂಡಿತಾ ಕೂದಲು ದಟ್ಟವಾಗಿ ಬೆಳೆಯುತ್ತೆ. ಯಾಕಂದ್ರೆ.. ಇವುಗಳಲ್ಲಿ ಐರನ್, ಮೆಗ್ನೀಷಿಯಂ, ಕಾಪರ್, ವಿಟಮಿನ್, ವಿಟಮಿನ್ ಸಿ ಅಂಶಗಳು ಹೇರಳವಾಗಿವೆ. ಬೆಳಗ್ಗೆ ಉಪಾಹಾರದೊಂದಿಗೆ ನೆನೆಸಿಟ್ಟ 2 ಖರ್ಜೂರ, 2 ಅಂಜೂರ, 1 ಟೇಬಲ್ ಸ್ಪೂನ್ ಒಣದ್ರಾಕ್ಷಿ ಸೇವಿಸಿ. ಇದು ಕ್ಷಣಾರ್ಧದಲ್ಲಿ ಶಕ್ತಿಯನ್ನ ನೀಡುತ್ತೆ. ಶರೀರದಲ್ಲಿ ಐರನ್ ಲೆವೆಲ್ ಸರಿಯಾಗಿರುತ್ತೆ. ಕೂದಲು ಬೆಳವಣಿಗೆಗೆ ಇದು ತುಂಬಾ ಮುಖ್ಯ.

ವಾಲ್‌ನಟ್

ವಾಲ್‌ನಟ್‌ಗಳನ್ನು ನಿಯಮಿತವಾಗಿ ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ವಾಲ್‌ನಟ್‌ಗಳು ಸೆಲೆನಿಯಂಗೆ ಉತ್ತಮ ಮೂಲವಾಗಿದ್ದು, ಇದು ಕೂದಲು ಉದುರುವಿಕೆಯನ್ನು ತಡೆಯುತ್ತದೆ. ಅವುಗಳಲ್ಲಿ ಬಯೋಟಿನ್ ಕೂಡ ಹೇರಳವಾಗಿದ್ದು, ಉದರುವುದು ಕಡಿಮೆ ಮಾಡುತ್ತೆ.
 

ರಾಗಿ

ರಾಗಿ ಸೂಪರ್ ಫುಡ್‌. ಇದರಲ್ಲಿ ಐರನ್, ಕ್ಯಾಲ್ಸಿಯಂ, ಫೋಲೇಟಿನಂತಹ ಪೋಷಕಾಂಶಗಳಿವೆ. ಕೂದಲು ಬೆಳವಣಿಗೆಗೆ ಇವೆಲ್ಲವೂ ತುಂಬಾ ಮುಖ್ಯ. ನೀವು ರಾಗಿ ಹಿಟ್ಟಿನಿಂದ ದೋಸೆ, ಸೂಪ್, ಇನ್ನೂ ಹಲವು ಬಗೆಯ ಖಾದ್ಯಗಳನ್ನ ತಯಾರಿಸಬಹುದು. ಹಾಗಾಗಿ.. ರಾಗಿ ಹಿಟ್ಟನ್ನ ಯಾವುದಾದರೂ ಒಂದು ರೂಪದಲ್ಲಿ ನೀವು ನಿಮ್ಮ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಿ.

ದಾಳಿಂಬೆ

ದಾಳಿಂಬೆಯಲ್ಲಿ ವಿಟಮಿನ್ ಕೆ, ವಿಟಮಿನ್ ಸಿ, ನಾರಿನಂಶ, ಪೊಟ್ಯಾಷಿಯಂ ಮತ್ತು ಪ್ರೋಟೀನ್‌ಗಳು ಹೇರಳವಾಗಿವೆ. ಇದು ದೇಹಕ್ಕೆ ಕಬ್ಬಿಣವನ್ನು ಒದಗಿಸುತ್ತದೆ. ಅಲ್ಲದೆ, ಇದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಸಿ ಇದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಮತ್ತು ಕೂದಲು ಬೆಳವಣಿಗೆಯನ್ನು ಹೆಚ್ಚಿಸುತ್ತದೆ.

click me!