ಆದರೆ ನುಗ್ಗೆ ಸೊಪ್ಪನ್ನು ತೆಗೆದು ಅದನ್ನು ಬೇಯಿಸುವುದು ಕಷ್ಟ. ಕ್ಲೀನ್ ಮಾಡೋದು ಕಷ್ಟ ಎನ್ನುವ ಕಾರಣಕ್ಕೇ ಜನರು ಇದನ್ನು ಬಳಸಲು ಹಿಂದೇಟು ಹಾಕುತ್ತಾರೆ. ಈ ನುಗ್ಗೆ ಸೊಪ್ಪು ಬಿಡಿಸಲು ಒಂದು ಸುಲಭ ಸಲಹೆ ಇದೆ. ಅದಕ್ಕಾಗಿ ಮೊದಲು ಒಂದು ಪ್ಲಾಸ್ಟಿಕ್ ಅಕ್ಕಿ ಚೀಲವನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಕಟ್ಟು ನುಗ್ಗೆ ಸೊಪ್ಪನ್ನು ಹಾಕಿ ಬಿಗಿಯಾಗಿ ಕಟ್ಟಿ, ಆ ಚೀಲದ ಮೇಲೆ 2 ಭಾರವಾದ ದೋಸೆ ಕಲ್ಲಿರಿಸಿ.
ತೂಕದ ದೋಸೆ ಕಲ್ಲುಗಳಾಗಿದ್ದರೆ ಒಳ್ಳೆಯದು. 2 ರಿಂದ 3 ಗಂಟೆಗಳ ಕಾಲ ಆ ದೋಸೆ ಕಲ್ಲುಗಳು ಹಾಗೆಯೇ ಇರಬೇಕು. ಇದಾದ ನಂತರ ನುಗ್ಗೆ ಸೊಪ್ಪಿನ ಕಟ್ಟನ್ನು ಅಕ್ಕಿ ಚೀಲದಲ್ಲೇ ಅಲ್ಲಾಡಿಸಿದರೆ, ಅದರಲ್ಲಿ ಅರ್ಧದಷ್ಟು ಸೊಪ್ಪುಗಳು ಉದುರಿಹೋಗುತ್ತವೆ. ಹೀಗೆಯೇ ಮತ್ತೆ ಅಲ್ಲಾಡಿಸಿದರೆ, ಎಲ್ಲಾ ಸೊಪ್ಪುಗಳು ಆ ಚೀಲದೊಳಗೆ ಉದುರಿಹೋಗುತ್ತವೆ. ಈ ಮೂಲಕ ಯಾವುದೇ ತೊಂದರೆಯಿಲ್ಲದೆ ಸುಲಭವಾಗಿ ನುಗ್ಗೆ ಸೊಪ್ಪನ್ನು ಬಿಡಿಸಬಹುದು.