ವರ್ಷಗಟ್ಟಲೆ ಇಟ್ಟರೂ ಹಾಳಾಗದ 5 ಆಹಾರ ಪದಾರ್ಥಗಳು! ಕಾರಣ ತಿಳಿದರೆ ಅಚ್ಚರಿ ಪಡ್ತೀರಾ

Published : Jun 05, 2026, 09:20 AM IST

ಕೆಲವು ಆಹಾರ ಪದಾರ್ಥಗಳನ್ನು ಸರಿಯಾಗಿ ಸಂಗ್ರಹಿಸಿದರೆ ವರ್ಷಗಳ ಕಾಲ ಬಳಸಬಹುದು. 5 ಪದಾರ್ಥಗಳು ದೀರ್ಘಕಾಲ ಹಾಳಾಗುವುದಿಲ್ಲ, ಇವುಗಳನ್ನು ತುರ್ತು ಸಂದರ್ಭಗಳಿಗಾಗಿ ಸುಲಭವಾಗಿ ಸಂಗ್ರಹಿಸಿಡಬಹುದು.

PREV
16
Food Storage Tips

ನಾವು ತಿನ್ನೋ-ಕುಡಿಯೋ ಹೆಚ್ಚಿನ ವಸ್ತುಗಳಿಗೆ ಒಂದು ಎಕ್ಸ್‌ಪೈರಿ ಡೇಟ್ ಇರುತ್ತೆ. ಆದ್ರೆ, ಕೆಲವು ಆಹಾರ ಪದಾರ್ಥಗಳು ಮಾತ್ರ ಹಾಗಲ್ಲ. ಇವುಗಳನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಟ್ಟರೆ ವರ್ಷಗಟ್ಟಲೆ ಬಳಸಬಹುದು. ಇದೇ ಕಾರಣಕ್ಕೆ ತುರ್ತು ಸಂದರ್ಭಗಳಿಗಾಗಿ ಇವುಗಳನ್ನು ಸಂಗ್ರಹಿಸಿ ಇಡುತ್ತಾರೆ. ಹಾಗಾದ್ರೆ, ದೀರ್ಘಕಾಲ ಹಾಳಾಗದ ಆ ಆಹಾರ ಪದಾರ್ಥಗಳು ಯಾವುವು ಅಂತಾ ತಿಳಿಯೋ ಕುತೂಹಲ ಇದ್ರೆ, ಈ ಮಾಹಿತಿ ನಿಮಗಾಗಿಯೇ ಇದೆ.

26
ಜೇನುತುಪ್ಪ ದೀರ್ಘಕಾಲ ಸುರಕ್ಷಿತ

ಜೇನುತುಪ್ಪ ಬಹುಶಃ ಎಂದಿಗೂ ಹಾಳಾಗದ ಕೆಲವೇ ಕೆಲವು ಆಹಾರ ಪದಾರ್ಥಗಳಲ್ಲಿ ಒಂದು. ಸರಿಯಾದ ವಾತಾವರಣದಲ್ಲಿ ಇಟ್ಟರೆ ಇದು ವರ್ಷಾನುಗಟ್ಟಲೆ ಕೆಡುವುದಿಲ್ಲ. ಇದರ ನೈಸರ್ಗಿಕ ರಚನೆ ಬ್ಯಾಕ್ಟೀರಿಯಾಗಳು ಬೆಳೆಯಲು ಬಿಡುವುದಿಲ್ಲ. ಕಾಲಕ್ರಮೇಣ ಜೇನುತುಪ್ಪದ ಬಣ್ಣ ಅಥವಾ ಅದರ ಗಟ್ಟಿತನ ಬದಲಾಗಬಹುದು, ಆದರೆ ತಿನ್ನಲು ಯೋಗ್ಯವಾಗಿಯೇ ಇರುತ್ತದೆ. ಇದನ್ನು ಯಾವಾಗಲೂ ಒಣಗಿದ ಮತ್ತು ಗಾಳಿಯಾಡದ ಬಾಟಲಿಯಲ್ಲಿ ಇಡಬೇಕು.

36
ಬಿಳಿ ಅಕ್ಕಿಯ ಶೆಲ್ಫ್ ಲೈಫ್ ಹೆಚ್ಚು

ಬಿಳಿ ಅಕ್ಕಿಯನ್ನು ತೇವಾಂಶ ಮತ್ತು ಕೀಟಗಳಿಂದ ದೂರ ಇಟ್ಟರೆ, ಅದು ಹಲವು ವರ್ಷಗಳ ಕಾಲ ಸುರಕ್ಷಿತವಾಗಿರುತ್ತೆ. ಇದೇ ಕಾರಣಕ್ಕೆ ನಮ್ಮಲ್ಲಿಯೂ ಅನೇಕ ಮನೆಗಳಲ್ಲಿ ಅಕ್ಕಿಯನ್ನು ದೀರ್ಘಕಾಲದವರೆಗೆ ಸಂಗ್ರಹಿಸಿ ಇಡುತ್ತಾರೆ. ಗಾಳಿಯಾಡದ ಡಬ್ಬದಲ್ಲಿ ಇಟ್ಟರೆ ಅಕ್ಕಿ ತನ್ನ ಗುಣಮಟ್ಟವನ್ನು ಬಹಳ ಕಾಲ ಉಳಿಸಿಕೊಳ್ಳುತ್ತದೆ. ಬೇಕಾದಾಗ ಸುಲಭವಾಗಿ ಬಳಸಬಹುದು.

46
ಉಪ್ಪು ಎಂದಿಗೂ ಹಾಳಾಗುವುದಿಲ್ಲ

ಉಪ್ಪು ಬಹುತೇಕ ಅಂತ್ಯವೇ ಇಲ್ಲದ ಶೆಲ್ಫ್ ಲೈಫ್ ಹೊಂದಿದೆ ಅಂತಾನೇ ಹೇಳಬಹುದು. ಇದರಲ್ಲಿರುವ ಖನಿಜಾಂಶಗಳು ಇದನ್ನು ದೀರ್ಘಕಾಲದವರೆಗೆ ಸುರಕ್ಷಿತವಾಗಿಡುತ್ತವೆ. ಉಪ್ಪನ್ನು ತೇವಾಂಶದಿಂದ ದೂರ ಇಟ್ಟರೆ, ವರ್ಷಗಟ್ಟಲೆ ಬಳಸಬಹುದು. ಇದೇ ಕಾರಣಕ್ಕೆ ಉಪ್ಪನ್ನು ಅತ್ಯಂತ ಬಾಳಿಕೆ ಬರುವ ಆಹಾರ ಪದಾರ್ಥ ಅಂತಾ ಪರಿಗಣಿಸಲಾಗುತ್ತದೆ.

56
ಒಣ ಬೇಳೆಕಾಳುಗಳು ದೀರ್ಘಕಾಲ ಉಪಯುಕ್ತ

ತೊಗರಿ, ಹೆಸರು, ಕಡಲೆ ಬೇಳೆ ಸೇರಿದಂತೆ ಇತರ ಒಣ ಬೇಳೆಕಾಳುಗಳನ್ನು ಸರಿಯಾದ ಜಾಗದಲ್ಲಿಟ್ಟರೆ ಅವು ಹಲವು ವರ್ಷಗಳ ಕಾಲ ಚೆನ್ನಾಗಿರುತ್ತವೆ. ಕಾಲ ಕಳೆದಂತೆ ಇವು ಬೇಯಲು ಸ್ವಲ್ಪ ಹೆಚ್ಚು ಸಮಯ ತೆಗೆದುಕೊಳ್ಳಬಹುದು, ಆದರೆ ಬಳಸಲು ಯೋಗ್ಯವಾಗಿರುತ್ತವೆ. ಒಣ ಮತ್ತು ತಂಪಾದ ಜಾಗದಲ್ಲಿ ಇಟ್ಟರೆ, ದೀರ್ಘಕಾಲದ ಸಂಗ್ರಹಣೆಗೆ ಬೇಳೆಕಾಳುಗಳು ಉತ್ತಮ ಆಯ್ಕೆ.

66
ಸಕ್ಕರೆಯನ್ನೂ ದೀರ್ಘಕಾಲ ಇಡಬಹುದು

ಸಕ್ಕರೆಯನ್ನು ಕೂಡ ಸರಿಯಾದ ರೀತಿಯಲ್ಲಿ ಶೇಖರಿಸಿಟ್ಟರೆ ಬಹಳ ಕಾಲದವರೆಗೆ ಹಾಳಾಗುವುದಿಲ್ಲ. ಕೆಲವೊಮ್ಮೆ ಇದು ಗಂಟುಗಟ್ಟಬಹುದು, ಆದರೆ ಅದರ ಗುಣಮಟ್ಟದ ಮೇಲೆ ದೊಡ್ಡ ಪರಿಣಾಮವೇನೂ ಆಗುವುದಿಲ್ಲ. ತೇವಾಂಶದಿಂದ ದೂರ, ಗಾಳಿಯಾಡದ ಡಬ್ಬದಲ್ಲಿ ಇಟ್ಟರೆ ಸಕ್ಕರೆ ವರ್ಷಗಟ್ಟಲೆ ಸುರಕ್ಷಿತವಾಗಿರುತ್ತದೆ. ದಿನನಿತ್ಯದ ಬಳಕೆಗೆ ಯಾವುದೇ ತೊಂದರೆ ಇರುವುದಿಲ್ಲ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories