ರವೆ-ಮೊಸರಿನಿಂದ LPG ಇಲ್ಲದೆಯೇ ಮಾಡಿಕೊಳ್ಳಿ ಮೃದುವಾದ ಇಡ್ಲಿ; ಗ್ಯಾಸ್ ಟೆನ್ಷನ್ ಬಿಟ್ಟಾಕಿ

Published : Jun 05, 2026, 08:30 AM IST

ರವೆ ಮತ್ತು ಮೊಸರಿನಿಂದ ಗ್ಯಾಸ್ ಇಲ್ಲದೆಯೇ ಮೃದುವಾದ ಇಡ್ಲಿ ತಯಾರಿಸಬಹುದು. ಎಲ್‌ಪಿಜಿ ಎಲ್ಲದೇ ಕೆಲವೇ ನಿಮಿಷಗಳಲ್ಲಿ ರುಚಿಕರವಾದ ಇಡ್ಲಿಗಳನ್ನು ಸಿದ್ಧಪಡಿಸುವ ವಿಧಾನವನ್ನು ಇಲ್ಲಿ ವಿವರಿಸಲಾಗಿದೆ. ಪದಾರ್ಥಗಳಿಂದ ಗ್ಯಾಸ್ ಇಲ್ಲದೆಯೇ ರುಚಿಯಾದ ಮಲ್ಲಿಗೆಯಂಥ ಇಡ್ಲಿಗಳನ್ನು ಮಾಡಬಹುದಾಗಿದೆ.

PREV
15
ಗ್ಯಾಸ್ ಇಲ್ಲದೆಯೇ ಇಡ್ಲಿ

ಗ್ಯಾಸ್ ಇಲ್ಲದೆಯೇ ಇಡ್ಲಿ ಮಾಡಬಹುದಾಗಿದೆ. ಒಂದು ಕಪ್ ರವೆ, ಒಂದು ಕಪ್ ಮೊಸರು, ಅರ್ಧ ಕಪ್ ನೀರು, ಅರ್ಧ ಚಮಚ ಉಪ್ಪು, ಒಂದು ಚಮಚ ಈನೋ ಅಥವಾ ಅಡುಗೆ ಸೋಡಾ ಮತ್ತು ಸ್ವಲ್ಪ ಎಣ್ಣೆ ಬೇಕಾಗುತ್ತದೆ. ಇಷ್ಟು ಪದಾರ್ಥಗಳಿಂದ ಗ್ಯಾಸ್ ಇಲ್ಲದೆಯೇ ರುಚಿಯಾದ ಮಲ್ಲಿಗೆಯಂಥ ಇಡ್ಲಿಗಳನ್ನು ಮಾಡಬಹುದಾಗಿದೆ.

25
ಮಾಡುವ ವಿಧಾನ

ಮೊದಲುಗೆ ಒಂದು ಮಿಕ್ಸಿಂಗ್ ಬೌಲ್‌ಗೆ ರವೆ ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬ್ಯಾಟರ್ ಸಾಫ್ಟ್ ಆಗಲು ಸ್ವಲ್ಪ ಸ್ವಲ್ಪವೇ ನೀರು ಸೇರಿಸಿಕೊಳ್ಳಬೇಕು. ಬ್ಯಾಟರ್ ತುಂಬಾ ಥಿಕ್ ಅಥವಾ ತೆಳುವಾಗದಂತೆ ನೋಡಿಕೊಳ್ಳಿ. ರವೆ ಮತ್ತು ಮೊಸರು ಮಿಶ್ರಣವನ್ನು ಮುಚ್ಚಳ ಮುಚ್ಚಿ 10 ರಿಂದ 15 ನಿಮಿಷಗಳ ಕಾಲ ಎತ್ತಿಟ್ಟುಕೊಳ್ಳಬೇಕು. ಮೊಸರಿನಲ್ಲಿರುವ ಹುಳಿ ಅಂಶದಿಂದ ಬ್ಯಾಟರ್ ಹುದುಗಿಕೊಳ್ಳುತ್ತದೆ. ಕೊನೆಯದಾಗಿ ರುಚಿಗೆ ತಕ್ಕಷ್ಟು ಉಪ್ಪು, ಇನೋ ಅಥವಾ ಅಡುಗೆ ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ.

35
ಸ್ಟೀಮರ್‌ನಿಂದ ಇಡ್ಲಿ

ಇನೋ ಸೇರಿಸುತ್ತಿದ್ದಂತೆ ಹಿಟ್ಟು ಉಬ್ಬಿಕೊಳ್ಳಲು ಶುರು ಮಾಡುತ್ತದೆ. ಈಗ ನೀವು ಸುಲಭವಾಗಿ ಇಡ್ಲಿಗಳನ್ನು ಗ್ಯಾಸ್ ಇಲ್ಲದೆಯೇ ಮಾಡಬಹುದು. ಎಲೆಕ್ಟ್ರಿಕ್ ಸ್ಟೀಮರ್ ಇದ್ದರೆ, ಮೊದಲು ಅದನ್ನು ನೀರಿನಿಂದ ತುಂಬಿಸಿ. ಅದನ್ನು ಬಿಸಿ ಮಾಡಿ, ಇಡ್ಲಿ ಅಚ್ಚುಗಳಿಗೆ ಎಣ್ಣೆಯಿಂದ ಲಘುವಾಗಿ ಗ್ರೀಸ್ ಮಾಡಿ. ಇಡ್ಲಿ ಹಿಟ್ಟನ್ನು ಅದರಲ್ಲಿ ಸುರಿಯಿರಿ. ಅದನ್ನು ಸ್ಟೀಮರ್‌ನಲ್ಲಿ ಇರಿಸಿ 10 ರಿಂದ 12 ನಿಮಿಷ ಬೇಯಿಸಿಕೊಂಡ್ರೆ ಇಡ್ಲಿ ಸಿದ್ಧವಾಗುತ್ತದೆ.

45
ಮೈಕ್ರೋವೇವ್

ಮೈಕ್ರೋವೇವ್ ಅಡುಗೆ ಇಡ್ಲಿಗಳನ್ನು ತಯಾರಿಸಲು ಸುರಕ್ಷಿತ ಮತ್ತು ತ್ವರಿತ ವಿಧಾನವಾಗಿದೆ. ಕೇವಲ 3-4 ನಿಮಿಷಗಳಲ್ಲಿ ಇಡ್ಲಿ ಸಿದ್ಧವಾಗುತ್ತವೆ. ನಿಮಗೆ ಮೈಕ್ರೋ-ಸೇಫ್ ಇಡ್ಲಿ ಅಚ್ಚು ಬೇಕಾಗುತ್ತದೆ. ಅಚ್ಚಿಗೆ ಗ್ರೀಸ್ ಹಚ್ಚುವ ಅಗತ್ಯವಿಲ್ಲ. ಇಡ್ಲಿ ಬ್ಯಾಟರ್ ಅನ್ನು ಹಾಕಿಕೊಂಡು ಮತ್ತು 3-4 ನಿಮಿಷಗಳ ಕಾಲ ಮೈಕ್ರೋವೇವ್ ಮಾಡಿ. ಇದರಿಂದ ಇಡ್ಲಿ ಬೇಗ ರೆಡಿಯಾಗುತ್ತದೆ.

55
ಇಂಡಕ್ಷನ್

ಇಂಡಕ್ಷನ್ ಮೇಲೆ ಇಡ್ಲಿಗಳನ್ನು ತಯಾರಿಸಲು, ನಿಮಗೆ ಇಂಡಕ್ಷನ್ ಆಧಾರಿತ ಕುಕ್ಕರ್ ಬೇಕಾಗುತ್ತದೆ. ಒಂದು ಸಣ್ಣ ಪಾತ್ರೆಯ ನೀರಿನ ಮೇಲೆ ಸ್ಟ್ಯಾಂಡ್ ಇರಿಸಿ. ನೀರು ಬಿಸಿಯಾದ ನಂತರ, ಸ್ಟ್ಯಾಂಡ್ ಅನ್ನು ಇಡ್ಲಿ ಬ್ಯಾಟರ್‌ನಿಂದ ತುಂಬಿಸಿ ಮತ್ತು ಅದನ್ನು 10 ರಿಂದ 15 ನಿಮಿಷಗಳ ಕಾಲ ಆವಿಯಲ್ಲಿ ಬಿಡಿ. ನಿಮ್ಮ ಇಡ್ಲಿಗಳು ಇಂಡಕ್ಷನ್ ಅಡುಗೆ ಮಾಡುವಾಗ ಗ್ಯಾಸ್‌ನಲ್ಲಿ ಬೇಯಿಸುವಷ್ಟೇ ಮೃದು ಮತ್ತು ಸ್ಪಂಜಿನಂತೆ ಇರುವುದನ್ನು ನೀವು ಗಮನಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories