Junk Food ತಿನ್ನೋದ್ರಿಂದ ಈ ರೋಗವೆಲ್ಲಾ ಮೈಗೆ ಅಂಟಿಕೊಳ್ಳಬಹುದು, ಜೋಪಾನ

First Published Feb 6, 2023, 6:09 PM IST

ಇಂದಿನ ಕಾಲದಲ್ಲಿ, ಪ್ರತಿಯೊಬ್ಬರೂ ಜಂಕ್ ಫುಡ್ ತಿನ್ನಲು ಅಭ್ಯಾಸ ಮಾಡಿಕೊಂಡಿದ್ದಾರೆ. ಸಂಜೆ ಹಸಿವಾಗುತ್ತಿದ್ದರೆ, ಆರೋಗ್ಯಕರ ಆಹಾರದ ಬದಲು ಜಂಕ್ ಫುಡ್ ಸೇವಿಸುತ್ತಾರೆ. ಅಂದ್ರೆ  ಪಿಜ್ಜಾ, ಬರ್ಗರ್, ಮೊಮೊಸ್ . ಜಂಕ್ ಫುಡ್ ತಿನ್ನೋದರಿಂದ ದೇಹಕ್ಕೆ ಎಷ್ಟು ಹಾನಿಯಾಗುತ್ತೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಅದರ ಅನಾನುಕೂಲಗಳನ್ನು ತಿಳಿದುಕೊಳ್ಳೋಣ
 

ಒಬೆಸಿಟಿ(Obesity) ವೇಗವಾಗಿ ಹೆಚ್ಚಾಗುತ್ತೆ 
ಜಂಕ್ ಫುಡ್ ತಿನ್ನೋದರಿಂದ ಬೊಜ್ಜು ವೇಗವಾಗಿ ಹೆಚ್ಚಾಗಲು ಪ್ರಾರಂಭಿಸುತ್ತೆ. ಇದರಲ್ಲಿ ಕ್ಯಾಲೋರಿಗಳ ಪ್ರಮಾಣವು ತುಂಬಾ ಹೆಚ್ಚಾಗಿದೆ ಮತ್ತು ನೀವು ಹೆಚ್ಚು ಕ್ಯಾಲೊರಿ ಇರೋ  ಜಂಕ್ ಫುಡ್ ಸೇವಿಸುತ್ತಿದ್ದರೆ,  ಇದು ತೂಕವನ್ನು ಸಾಕಷ್ಟು ಹೆಚ್ಚಿಸುತ್ತೆ  ದೇಹ ತೂಕ ಹೆಚ್ಚಾದ್ರೆ ಆರೋಗ್ಯಕ್ಕೆ ಹಾನಿಯೂ ಹೆಚ್ಚು.

ಆಹಾರದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳೋದು
ಜಂಕ್ ಫುಡ್(Junk food) ಸೇವಿಸುವ ಮೂಲಕ, ನೀವು ಆಹಾರದ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತೀರಿ ಮತ್ತು ಅತಿಯಾದ ಆಹಾರ ಸೇವಿಸುವ ಚಟಕ್ಕೆ ಬಲಿಯಾಗುತ್ತೀರಿ. ಇದು ನಿಮ್ಮ ಹಸಿವನ್ನು ಹೆಚ್ಚಿಸುತ್ತೆ. ಇದರಿಂದ ಆರೋಗ್ಯಕ್ಕೆ ಹಲವಾರು ಸಮಸ್ಯೆಗಳು ಕಾಡುತ್ತವೆ.

ರೋಗನಿರೋಧಕ ಶಕ್ತಿ (Immunity power)
ಜಂಕ್ ಫುಡ್ ಯಾವುದೇ ರೀತಿಯ ಪೋಷಕಾಂಶಗಳನ್ನು ಹೊಂದಿರೋದಿಲ್ಲ, ಈ ಕಾರಣದಿಂದಾಗಿ ಅದನ್ನು ಸೇವಿಸೋದರಿಂದ ನಿಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾಗುತ್ತೆ. ಇದರಿಂದಾಗಿ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತೆ.

ಉರಿಯೂತದ ಸಮಸ್ಯೆ 
ಜಂಕ್ ಫುಡ್ ನಲ್ಲಿ ಸೋಡಿಯಂ(Sodium) ಅಧಿಕವಾಗಿರುತ್ತೆ, ಈ ಕಾರಣದಿಂದಾಗಿ ಅದನ್ನು ಸೇವಿಸೋದರಿಂದ ಹೊಟ್ಟೆಯ ಊತ ಮತ್ತು ಉಬ್ಬರ ಉಂಟಾಗುತ್ತೆ. ಸೋಡಿಯಂ ಸಹ ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸುತ್ತೆ.

ಜೀರ್ಣಕಾರಿ ಸಮಸ್ಯೆಗಳು 
ಜಂಕ್ ಫುಡ್ ತಿನ್ನೋದರಿಂದ ಹೊಟ್ಟೆಯಲ್ಲಿ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಇದು ಅಸಿಡಿಟಿ(Acidity) ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗಬಹುದು. ಇದು ಮಲಬದ್ಧತೆಯ ಸಮಸ್ಯೆಗಳಿಗೂ ಕಾರಣವಾಗಬಹುದು. ಹಾಗಾಗಿ ಎಚ್ಚರವಿರಲಿ.

ಮಧುಮೇಹಕ್ಕೆ(Diabetes) ಕಾರಣ 
ಜಂಕ್ ಫುಡ್ ಇನ್ಸುಲಿನ್ ಅನ್ನು ನಿರ್ವಹಿಸುವ ನಿಮ್ಮ ದೇಹದ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತೆ, ಇದು ಮಧುಮೇಹಕ್ಕೆ ಕಾರಣವಾಗಬಹುದು. ಹಾಗಾಗಿ ಜಂಕ್ ಫುಡ್ ಆದಷ್ಟು ಅವಾಯ್ಡ್ ಮಾಡೋದು ನಮ್ಮ ಆರೋಗ್ಯಕ್ಕೆ ಒಳ್ಳೇದು. 

ಹೃದ್ರೋಗದ(Heart problems) ಅಪಾಯ 
ಜಂಕ್ ಫುಡ್ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತೆ. ಆದ್ದರಿಂದ ನೀವು ಕೂಡ ಜಂಕ್ ಫುಡ್ ಸೇವಿಸುತ್ತಿದ್ದರೆ, ಜಾಗರೂಕರಾಗಿರಿ. ಸಾಧ್ಯವಾದಷ್ಟು ಹೃದಯದ ಆರೋಗ್ಯ ಕಾಪಾಡಿಕೊಂಡ್ರೆ ನೀವು ಆರೋಗ್ಯದಿಂದಿರಲು ಸಹಾಯವಾಗುತ್ತೆ.
 

click me!