ಅಧಿಕ ತೂಕದಿಂದ ಟೀಕೆಗೆ ಒಳಗಾಗಿದ್ದ ಬಿಗ್‌ಬಾಸ್‌ ಸ್ಪರ್ಧಿ ಈಗ ಸ್ಲಿಮ್ ಬ್ಯೂಟಿ, ಆರೇ ತಿಂಗಳಲ್ಲಿ 12 ಕೆಜಿ ತೂಕ ಇಳಿಕೆ!

First Published Oct 14, 2023, 1:54 PM IST

ತೂಕ ಹೆಚ್ಚಳ ಇವತ್ತಿನ ದಿನಗಳಲ್ಲಿ ಹಲವರನ್ನು ಕಾಡುವ ಸಮಸ್ಯೆಯಾಗಿದೆ. ತೂಕ ಇಳಿಸಿಕೊಳ್ಳೋಕೆ ವರ್ಕೌಟ್‌, ಡಯೆಟ್ ಅಂತ ಏನೇನೋ ಮಾಡ್ತಾರೆ. ಆದ್ರೆ ಬಿಗ್‌ಬಾಸ್‌ ಖ್ಯಾತಿಯ ಈ ನಟಿ ಇದ್ಯಾವುದರ ಸಹಾಯವೂ ಇಲ್ಲದೆ ಮನೆಯಲ್ಲೇ  6 ತಿಂಗಳಲ್ಲಿ 12 ಕೆಜಿ ತೂಕ ಕಡಿಮೆ ಮಾಡ್ಕೊಂಡ್ರು ಅದ್ಹೇಗೆ.

ಬಾಲಿವುಡ್‌ನಲ್ಲಿ ತೂಕ ಹೆಚ್ಚಳದ ಸಮಸ್ಯೆಯಿಂದ ಬಳಲುವ ಹಲವು ನಟ-ನಟಿಯರಿದ್ದಾರೆ. ಸದ್ಯ ಫುಲ್‌ ಸಕ್ಸಸ್‌ ಆಗಿ ಓಡ್ತಿರೋ ಹಿಂದಿ ಸಿನಿಮಾದಲ್ಲಿ ನಟಿಸಿರೋ ಈ ಬ್ಯೂಟಿಫುಲ್ ನಟಿ ಸಹ ಹಿಂದೊಮ್ಮೆ ಅಧಿಕ ತೂಕದ ಸಮಸ್ಯೆಯಿಂದ ಬಳಲ್ತಿದ್ರು. ಸದ್ಯ ಸ್ಲಿಮ್ ಆಂಡ್ ಕ್ಯೂಟ್ ಆಗಿರೋ ಈ ನಟಿ ಹಿಂದೆ ಚಬ್ಬೀ ಚಬ್ಬೀಯಾಗಿ ನಡೆದಾಡೋಕು ಕಷ್ಟಪಡುತ್ತಿದ್ರು. ಹಲವರಿಂದ ಟೀಕೆಗೂ ಗುರಿಯಾಗಿದ್ದರು.

ತೂಕ ಇಳಿಸಿಕೊಳ್ಳೋಕೆ ವರ್ಕೌಟ್‌, ಡಯೆಟ್ ಅಂತ ಏನೇನೋ ಮಾಡ್ತಾರೆ. ಆದ್ರೆ ಬಿಗ್‌ಬಾಸ್‌ ಖ್ಯಾತಿಯ ಈ ನಟಿ ಇದ್ಯಾವುದರ ಸಹಾಯವೂ ಇಲ್ಲದೆ ಮನೆಯಲ್ಲೇ  6 ತಿಂಗಳಲ್ಲಿ 12 ಕೆಜಿ ತೂಕ ಕಡಿಮೆ ಮಾಡ್ಕೊಂಡ್ರು

ಬಿಗ್‌ಬಾಸ್ ಹಿಂದಿ ಸೀಸನ್‌ನಲ್ಲಿ ಜನಸಾಮಾನ್ಯರಂತೆ ಎಂಟ್ರಿ ಪಡೆದಾಕೆ ಶೆಹನಾಜ್‌. ಬಾಲಿವುಡ್‌ನ ಖ್ಯಾತ ಕಿರುತೆರೆ ನಟ ಸಿದ್ಧಾರ್ಥ್‌ ಶುಕ್ಲಾ ಗರ್ಲ್‌ಫ್ರೆಂಡ್‌. ಬಿಗ್‌ಬಾಸ್‌ ಮನೆಯೊಳಗೇ ತಮ್ಮ ಅತಿಯಾದ ತೂಕದಿಂದ ಹಲವಾರು ಬಾರಿ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದರು. ಸಹ ಸ್ಪರ್ಧಿಗಳು ಶೆಹನಾಜ್‌ ಗಿಲ್‌ನ್ನು ನೋಡಿ ಸಾಕಷ್ಟು ಬಾರಿ ಅಪಹಾಸ್ಯ ಮಾಡಿ ನಗುತ್ತಿದ್ದರು 

ಆದರೆ ಬಿಗ್ ಬಾಸ್ 13ರ ನಂತರ, ಪಂಜಾಬಿ ಗಾಯಕ-ನಟಿ ಶೆಹನಾಜ್ ಗಿಲ್ ನಂಬಲಾಗದಷ್ಟು ಪ್ರಸಿದ್ಧರಾದರು. ತಮ್ಮ ಮುಗ್ಧವಾದ ನಟವಳಿಕೆಯಿಂದಲೇ ಎಲ್ಲರ ಗಮನ ಸೆಳೆದರು. ಲಕ್ಷಾಂತರ ಅಭಿಮಾನಿಗಳನ್ನು ಗಳಸಿಇದರು  ರಿಯಾಲಿಟಿ ಟಿವಿಯಲ್ಲಿ ತನ್ನ ಸಮಯದಲ್ಲಿ ಅಪಹಾಸ್ಯಕ್ಕೊಳಗಾದ ಹೆಚ್ಚುವರಿ ಕಿಲೋಗಳನ್ನು ಕಳೆದುಕೊಳ್ಳಲು ಶೆಹನಾಜ್‌ ಕೋವಿಡ್-ಪ್ರೇರಿತ ಲಾಕ್‌ಡೌನ್ ಅವಧಿಯನ್ನು ಬಳಸಿದರು.

ನಟಿ ಹೆಚ್ಚು ವ್ಯಾಯಾಮ ಮಾಡದೆಯೇ, ಆರೋಗ್ಯಯುತವಾಗಿ ಆಹಾರ ತಿನ್ನುವ ಮೂಲಕ ತೂಕ ಇಳಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಶೆಹನಾಜ್‌ ಗಿಲ್‌ ತಮ್ಮ ಆಹಾರವನ್ನು ಕಡಿತಗೊಳಿಸಿ ಆರೋಗ್ಯಕ್ಕೆ ಅಪಾಯ ತಂದುಕೊಳ್ಳಲ್ಲಿಲ್ಲ. ಬದಲಿಗೆ ಹೆಲ್ದೀ ಫುಡ್ ತಿನ್ನುವುದಕ್ಕೆ ಆದ್ಯತೆ ನೀಡಿದರು. 

ಅಧಿಕ ತೂಕದಿಂದ ಸ್ಲಿಮ್ ಆಂಡ್ ಬ್ಯೂಟಿಫುಲ್ ಆದ ಆಕೆಯ ಟ್ರಾನ್ಸ್‌ಫಾರ್ಮೇಶನ್‌ ಎಲ್ಲರ ಗಮನ ಸೆಳೆಯಿತು. ಆಕೆಯ ಮೇಕ್ ಓವರ್  ಪ್ರಶಂಸೆಯನ್ನು ಪಡೆಯಿತು. ಕೇವಲ ಆರು ತಿಂಗಳಲ್ಲಿ ಶೆಹನಾಜ್‌ ತನ್ನ ತೂಕವನ್ನು 67 ರಿಂದ 55 ಕೆಜಿಗೆ ಇಳಿಸಿಕೊಂಡರು.

sana

ಶೆಹನಾಜ್ ಗಿಲ್ ತನ್ನ ತೂಕ ಇಳಿಸುವ ಪ್ರಯಾಣದ ಸಮಯದಲ್ಲಿ ಅನುಸರಿಸಿದ ಆಹಾರಕ್ರಮ ಇಲ್ಲಿದೆ:
ಶೆಹನಾಜ್‌ ಪ್ರತಿ ದಿನವನ್ನು ಸ್ವಲ್ಪ ಆಪಲ್ ಸೈಡರ್ ವಿನೆಗರ್ ಮತ್ತು ಅರಿಶಿನದೊಂದಿಗೆ ಬೆರೆಸಿದ ಬೆಚ್ಚಗಿನ ನೀರಿನೊಂದಿಗೆ ಪ್ರಾರಂಭಿಸುತ್ತಾರೆ. ನಂತರ ಗ್ರೀನ್ ಟೀ ಸೇವಿಸಿ. ಹೆಚ್ಚಿನ ಪ್ರೋಟೀನ್ ಆಹಾರವನ್ನು ಆಯ್ಕೆ ಮಾಡುತ್ತಾರೆ ಎಂದು ಬಹಿರಂಗಪಡಿಸಿದರು. ಬೆಳಗಿನ ಉಪಾಹಾರಕ್ಕಾಗಿ, ದೋಸೆಗಳು, ಮೆಂತ್ಯ ಪರಾಠಗಳು ಮತ್ತು ಮೊಳಕೆಗಳನ್ನು ತಿನ್ನುತ್ತಾರೆ. 

ಮಧ್ಯಾಹ್ನ ಒಂದು ಲೋಟ ತೆಂಗಿನಕಾಯಿ ನೀರು, ರಾತ್ರಿ ಮೂಂಗ್ ದಾಲ್ ಮತ್ತು ಒಂದೇ ರೊಟ್ಟಿಯನ್ನು ತಿನ್ನುತ್ತಾಳೆ. ಊಟದ ನಂತರ ತಿಂಡಿಯಾಗಿ, ಅವಳು ಮತ್ತೆ ಗ್ರೀನ್ ಟೀ ಕುಡಿಯುತ್ತಾಳೆ. ನಂತರ ಒಣ ಹಣ್ಣುಗಳನ್ನು ತಿನ್ನುತ್ತಾರೆ. ಶೆಹನಾಜ್ ಗಿಲ್ ರಾತ್ರಿಯ ಊಟವನ್ನು ಬೇಗ ತಿನ್ನುತ್ತಾರೆ. ಊಟದ ನಂತರ ಒಂದು ಕಪ್ ಹಾಲು ಕುಡಿಯುವುದನ್ನು ಮರೆಯುವುದಿಲ್ಲ.

click me!