ಬೆಳ್ಳುಳ್ಳಿ ಸಿಪ್ಪೆ ಸುಲಿಯೋಕೆ ಕಷ್ಟ ಪಡ್ತೀರಾ? ಇಲ್ಲಿದೆ ನೋಡಿ ಸುಲಭ ಟಿಪ್ಸ್

First Published | Oct 11, 2023, 4:32 PM IST

ಬೆಳ್ಳುಳ್ಳಿಯ ಸಿಪ್ಪೆ ಸುಲಿಯುವುದು ಎಷ್ಟೊಂದು ಕಷ್ಟ ಅಂತ, ಅಡುಗೆ ಮಾಡೋರಿಗೆ ಗೊತ್ತು. ಈ ಕೆಲಸಾನ ಸುಲಭವಾಗಿ ಮಾಡಲು ಬಯಸಿದ್ರೆ ಇಲ್ಲಿದೆ ನಿಮಗಾಗಿ ಸಿಂಪಲ್ ಟಿಪ್ಸ್. ಇದರಿಂದ ಅಡುಗೆ ಬೇಗ ಮಾಡಿ ಮುಗಿಸಲು ಸಹ ಸುಲಭವಾಗುತ್ತೆ. 
 

ಬೆಳ್ಳುಳ್ಳಿ (Garlic) ಭಾರತೀಯ ಪಾಕಪದ್ಧತಿಯ ಪ್ರಮುಖ ಭಾಗ. ಅದರ ತೀಕ್ಷ್ಣವಾದ ರುಚಿ ಮತ್ತು ಸುವಾಸನೆಯಿಂದಾಗಿ, ಮಸಾಲೆ ಪಾಕ ವಿಧಾನಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಆದರೆ ಅದರ ಸಿಪ್ಪೆ ಸುಲಿಯುವುದು ಸ್ವತಃ ಒಂದು ದೊಡ್ಡ ಸಮಸ್ಯೆ. ಇದರ ಟ್ರಿಕ್ ಗೊತ್ತಿಲ್ಲದವರು, ಬೆಳ್ಳುಳ್ಳಿಯನ್ನು ಆರಾಮವಾಗಿ ಸಿಪ್ಪೆ ಸುಲಿಯಲು 5-10 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ. 
 

ಬೆಳ್ಳುಳ್ಳಿಯ ಹೆಚ್ಚಿದ್ದರೆ, ಅದನ್ನ ಸುಲಿಯೋಕೆ ಹೆಚ್ಚಿನ ಸಮಯ ಹಿಡಿಸುತ್ತೆ. ಇದರಿಂದಾಗಿ ಅಡುಗೆ ತಯಾರಿಸಲು ಸಹ ಹೆಚ್ಚು ಸಮಯ ವ್ಯಯವಾಗುತ್ತೆ. ಅಂತಹ ಪರಿಸ್ಥಿತಿಯಲ್ಲಿ, ಬೆಳ್ಳುಳ್ಳಿಯ ಸಿಪ್ಪೆ (garlic peel) ಸುಲಿಯುವಲ್ಲಿ ನೀವು ತೊಂದರೆಯನ್ನು ಎದುರಿಸುತ್ತಿದ್ದರೆ, ಈ ಲೇಖನ ನಿಮಗಾಗಿ. ಬೆಳ್ಳುಳ್ಳಿ ಸಿಪ್ಪೆಗಳನ್ನು ಸೆಕೆಂಡುಗಳಲ್ಲಿ ತೆಗೆದು ಹಾಕುವುದು ಹೇಗೆ ಎಂದು ಇಲ್ಲಿ ನೀವು ಕಲಿಯಬಹುದು.
 

Tap to resize

ಮೈಕ್ರೋವೇವಲ್ಲಿ ಇರಿಸಿ
ನಿಮ್ಮ ಬಳಿ ಮೈಕ್ರೋವೇವ್ (Microwave) ಇದ್ದರೆ, ಬೆಳ್ಳುಳ್ಳಿಯನ್ನು 30 ಸೆಕೆಂಡುಗಳ ಕಾಲ ಮೈಕ್ರೋವೇವ್‌ನಲ್ಲಿಡಿ. ಹೀಗೆ ಮಾಡುವುದರಿಂದ, ಬೆಳ್ಳುಳ್ಳಿ ಸಿಪ್ಪೆಗಳು ಸುಲಭವಾಗಿ ಬೇರ್ಪಡುತ್ತವೆ. ಮೈಕ್ರೋವೇವ್ ಬದಲಿಗೆ, ನೀವು ಬೆಳ್ಳುಳ್ಳಿಯನ್ನು ಬಾಣಲೆಯಲ್ಲಿ ಹುರಿಯಬಹುದು.
 

ಬೆಳ್ಳುಳ್ಳಿಯನ್ನು ನೀರಲ್ಲಿ ನೆನೆಸಿಡಿ
ಬೆಳ್ಳುಳ್ಳಿ ಸಿಪ್ಪೆಯನ್ನು ತೆಗೆದುಹಾಕಲು ನಿಮಗೆ ಕಷ್ಟವಾಗುತ್ತಿದ್ದರೆ, ಅದನ್ನು 2 ನಿಮಿಷಗಳ ಕಾಲ ನೀರಲ್ಲಿಡಿ. ಇದು ಸಿಪ್ಪೆಯನ್ನು ತೇವಾಂಶದಿಂದ ಉಬ್ಬುವಂತೆ ಮಾಡುತ್ತದೆ ಇದರಿಂದ ನೀವು ಅದನ್ನು ಸುಲಭವಾಗಿ ಬೇರ್ಪಡಿಸಬಹುದು.
 

ಈ ವಿಧಾನವೂ ಅದ್ಭುತವಾಗಿದೆ.
ಮೇಲೆ ತಿಳಿಸಿದ ಕ್ರಮಗಳನ್ನು ಮಾಡಲು ನಿಮಗೆ ಸಮಯವಿಲ್ಲದಿದ್ದರೆ, ಬೆಳ್ಳುಳ್ಳಿ ಸಿಪ್ಪೆ ಸುಲಿಯಲು ಅದರ ದಪ್ಪ ತುದಿಯನ್ನು ಸ್ಲ್ಯಾಬ್ ಒತ್ತಿ, ನೀವು ಅದನ್ನು ಚಾಕುವಿನಿಂದ ಕತ್ತರಿಸಬಹುದು. ಇದು ಸಿಪ್ಪೆಯನ್ನು ಸುಲಭವಾಗಿ ತೆಗೆದು ಹಾಕುತ್ತದೆ, ನಂತರ ಬೆಳ್ಳುಳ್ಳಿಯನ್ನು ಸುಲಭವಾಗಿ ಸಿಪ್ಪೆ ಸುಲಿಯಬಹುದು.
 

ಇದಲ್ಲದೇ ಬೆಳ್ಳುಳ್ಳಿಯನ್ನು ಎರಡು ಭಾಗ ಮಾಡಿದ್ರೇ ಸಹ ಸುಲಭವಾಗಿ ಸಿಪ್ಪೆ ಸುಲಿಯಬಹುದು. ಅದಕ್ಕಾಗಿ ಬೆಳ್ಳುಳ್ಳಿಯ ಮಧ್ಯದಲ್ಲಿ ಚಾಕುವಿನಿಂದ ಸಣ್ಣದಾಗಿ ಕತ್ತರಿಸಿ. ಈಗ ಅದನ್ನು ನೀವು ಸುಲಭವಾಗಿ ಸಿಪ್ಪೆ ತೆಗೆಯಬಹುದು. 
 

Latest Videos

click me!