ನಮ್ಮಲ್ಲಿ ಹೆಚ್ಚಿನವರಿಗೆ ಬೆಳಗ್ಗೆ ಎದ್ದ ತಕ್ಷಣ ಚಹಾ ಬೇಕು. ಭಾರತದಲ್ಲಿ ಚಹಾ ಎಂದರೆ ಕೇವಲ ಒಂದು ಕಪ್ ಬಿಸಿ ಪಾನೀಯವಲ್ಲ, ಬದಲಾಗಿ ಒಂದು ಭಾವನೆ. ಬೆಳಗ್ಗೆ ಒಂದು ಕೈಯಲ್ಲಿ ಒಂದು ಕಪ್ ಚಹಾ, ಇನ್ನೊಂದು ಕೈಯಲ್ಲಿ ಪತ್ರಿಕೆ ದೊಡ್ಡವರ ದಿನಚರಿಯಾಗಿದೆ. ಅಷ್ಟೇ ಅಲ್ಲ, ಮನೆಯಾಗಿರಲಿ ಅಥವಾ ಕಚೇರಿಯಾಗಿರಲಿ ಏನೇ ಮಾತನಾಡುವುದಾದರೂ ಜನ ಟೀ ಇಲ್ಲದೆ ಚರ್ಚೆಗೆ ಬರಲ್ಲ, ಆದರೆ ಇಷ್ಟು ಪ್ರಿಯವಾದ ಚಹಾ ಅಥವಾ ಟೀ ತಯಾರಿಸುವುದು ಹೇಗೆಂದು ನಿಮಗೆ ತಿಳಿದಿದೆಯೇ?. ಇಲ್ಲದಿದ್ದರೆ ಬನ್ನಿ ಅದನ್ನು ಮಾಡುವುದು ಹೇಗೆಂದು ತಿಳಿಯೋಣ…
25
ನೀರು ಹೆಚ್ಚಾದಂತೆ ಪೌಡರ್ ಪ್ರಮಾಣ ಹೆಚ್ಚು
ಚಹಾ ತಯಾರಿಸಲು ಮೊದಲನೆಯದಾಗಿ ಒಂದು ಪಾತ್ರೆಯಲ್ಲಿ 2 ಕಪ್ ನೀರನ್ನು ಹಾಕಿ. ನೀವೀಗ ಟೀ ಪೌಡರ್ ತೆಗೆದುಕೊಳ್ಳಬೇಕಾಗುತ್ತದೆ. ನೆನಪಿಡಿ ನೀರಿನ ಪ್ರಮಾಣ ಹೆಚ್ಚಾದಂತೆ, ಟೀ ಪೌಡರ್ ಪ್ರಮಾಣವೂ ಹೆಚ್ಚಾಗುತ್ತದೆ. ಸಾಮಾನ್ಯವಾಗಿ ಒಂದು ಕಪ್‌ಗೆ ಅರ್ಧ ಟೀ ಚಮಚ ಟೀ ಪೌಡರ್ ಆಧರಿಸಿ ಇದನ್ನು ಅಳೆಯಬಹುದು.
35
ಹಾಲು ಹಸಿಯಾಗದಂತೆ ನೋಡಿಕೊಳ್ಳಿ
ಮೊದಲನೆಯದಾಗಿ ನೀವು ನೀರನ್ನು ಕುದಿಸಬೇಕು. ಇದರಿಂದ ಹಾಲು ಸೇರಿಸಿದ ನಂತರವೂ ಹಾಲು ನೀರಿನಿಂದ ಹಸಿಯಾಗುವುದಿಲ್ಲ. ನೀರನ್ನು ಕುದಿಸಿದ ನಂತರ ಹಾಲು ಸೇರಿಸಿ. ಒಂದು ನಿಮಿಷದ ನಂತರ ಟೀ ಪೌಡರ್ ಸೇರಿಸಿ. ಈ ರೀತಿಯಾಗಿ ಟೀ ಹಸಿಯಾಗುವುದಿಲ್ಲ ಮತ್ತು ಯಾವುದೇ ಕಾರಣಕ್ಕೂ ಹಾಲು ಒಡೆಯಲು ಅವಕಾಶವಿರುವುದಿಲ್ಲ.
ಹಾಲು ಈಗಾಗಲೇ ಬಿಸಿ ಮಾಡಿದ್ದರೆ ಮೊದಲು ನೀರನ್ನು ಕುದಿಸಿ, ನಂತರ ಟೀ ಪೌಡರ್ ಸೇರಿಸಿ. ಈಗ ಹಾಲು ಸೇರಿಸಿ ಸ್ವಲ್ಪ ಸಮಯ ಕುದಿಸಿ. ಸಕ್ಕರೆ ಕರಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ನೀವು ಅದನ್ನು ಯಾವಾಗ ಬೇಕಾದರೂ ಸೇರಿಸಬಹುದು.
55
ಟೀ ಮಾಡಲು ಎಷ್ಟು ಸಮಯ ಬೇಕು?
ಟೀಗೆ ಸರಿಯಾದ ಟೇಸ್ಟ್ ಬರಬೇಕೆಂದರೆ ಅದನ್ನು ಕನಿಷ್ಠ 5-6 ನಿಮಿಷಗಳ ಕಾಲ ಕುದಿಸಬೇಕು. ಒಟ್ಟಾರೆ ಟೀ ಹಸಿಯಾಗದಂತೆ ನೋಡಿಕೊಳ್ಳಬೇಕು. ಇದರಿಂದ ಅದಕ್ಕೆ ಒಳ್ಳೆಯ ಟೇಸ್ಟ್ ಬರುತ್ತದೆ.