ಚಪಾತಿ, ರೊಟ್ಟಿ ಪರ್ಫೆಕ್ಟ್‌ ಆಗಿ ಬರಲು ಹಿಟ್ಟಿಗೆ ಎಷ್ಟು ನೀರು ಸೇರಿಸ್ಬೇಕು? ಬಹುತೇಕರಿಗೆ ಗೊತ್ತೇ ಇಲ್ಲ

Published : Mar 18, 2026, 03:01 PM IST

Tips for soft chapati in Kannada: ದಿನಾ ರೊಟ್ಟಿ, ಚಪಾತಿ ಮಾಡಿದರೂ ಹಲವರಿಗೆ ಅದು ಮೃದುವಾಗಿ ಮಾಡಲು ಬರುವುದಿಲ್ಲ. ಕೆಲವೊಮ್ಮೆ ಗಟ್ಟಿಯಾಗುತ್ತದೆ ಅಥವಾ ಲಟ್ಟಿಸುವಾಗ ಮಣೆಗೇ ಅಂಟಿಕೊಳ್ಳುತ್ತದೆ. ಇದಕ್ಕೆ ಮುಖ್ಯ ಕಾರಣ ಹಿಟ್ಟು ಕಲೆಸುವಾಗ ಮಾಡುವ ತಪ್ಪುಗಳು.  

PREV
15
ಕಲೆಸುವ ರೀತಿ ಬಹಳ ಮುಖ್ಯ

ಚಪಾತಿ ಅಥವಾ ರೊಟ್ಟಿ ಭಾರತೀಯರ ಮನೆಗಳಲ್ಲಿ ಬೆಳಗ್ಗೆ ಅಥವಾ ರಾತ್ರಿ ಊಟಕ್ಕೆ ಅತಿ ಮುಖ್ಯವಾದ ಆಹಾರ. ಆದರೆ ಮೃದುವಾದ ಮತ್ತು ಉಬ್ಬಿದ ರೊಟ್ಟಿ, ಚಪಾತಿ ಮಾಡುವುದು ಎಲ್ಲರಿಗೂ ಅಷ್ಟು ಸುಲಭದ ಕೆಲಸವಲ್ಲ. ವಿಶೇಷವಾಗಿ ಚಪಾತಿ ಅಥವಾ ರೊಟ್ಟಿ ಸರಿಯಾಗಿ ಬರಬೇಕೆಂದರೆ ಹಿಟ್ಟನ್ನು ಕಲೆಸುವ ರೀತಿ ಬಹಳ ಮುಖ್ಯ. 

25
ಹಿಟ್ಟು ಮತ್ತು ನೀರಿನ ಸರಿಯಾದ ಅಳತೆ

ಯಾವಾಗಲೂ ಚಪಾತಿ ಹಿಟ್ಟಿನ ಗುಣಮಟ್ಟದ ಮೇಲೆ ನೀರಿನ ಅಳತೆ ನಿರ್ಧರಿಸಲಾಗುತ್ತದೆ. ಹೌದು. ಸಾಮಾನ್ಯವಾಗಿ 2 ಕಪ್ ಗೋಧಿ ಹಿಟ್ಟಿಗೆ ಸುಮಾರು 1 ಕಪ್‌ಗಿಂತ ಸ್ವಲ್ಪ ಕಡಿಮೆ ನೀರು ಸಾಕಾಗುತ್ತದೆ. ಅಂದರೆ ಹಿಟ್ಟು ಮತ್ತು ನೀರಿನ ಅನುಪಾತ 2:1ರಷ್ಟಿರಬೇಕು. ಹಾಗೆಯೇ ಹಿಟ್ಟು ಸ್ವಲ್ಪ ತರಿತರಿಯಾಗಿದ್ದರೆ (ದಪ್ಪಗಿದ್ದರೆ) ಅದು ನೀರನ್ನು ಹೆಚ್ಚು ಹೀರಿಕೊಳ್ಳುತ್ತದೆ. ಆಗ ಸ್ವಲ್ಪ ಹೆಚ್ಚಿನ ನೀರು ಬೇಕಾಗಬಹುದು. 

35
ಉಗುರು ಬೆಚ್ಚಗಿನ ನೀರನ್ನು ಬಳಸಿ

ಚಪಾತಿ ದೀರ್ಘಕಾಲ ಮೃದುವಾಗಿರಬೇಕೆಂದರೆ ಹಿಟ್ಟು ಕಲೆಸಲು ಸಾಮಾನ್ಯ ನೀರಿನ ಬದಲು ಉಗುರು ಬೆಚ್ಚಗಿನ ನೀರನ್ನು (Warm Water) ಬಳಸಿ. ಹೀಗೆ ಮಾಡುವುದರಿಂದ ಹಿಟ್ಟಿನಲ್ಲಿರುವ ಪ್ರೋಟೀನ್ ಸಕ್ರಿಯಗೊಂಡು, ಹಿಟ್ಟು ಹೆಚ್ಚು ಮೆದುವಾಗುತ್ತದೆ.

45
ಹಾಲಿನ ಬಳಕೆ (ಪರ್ಯಾಯ ಆಯ್ಕೆ)

ಕೆಲವು ಸಮಯ ಚಪಾತಿ ಬೇಗನೆ ಒಣಗುತ್ತದೆ. ಅಂತಹ ಸಮಯದಲ್ಲಿ ಉಗುರು ಬೆಚ್ಚಗಿನ ನೀರು ಉತ್ತಮವಾಗಿ ಕೆಲಸ ಮಾಡುತ್ತದೆ. ನೀವು ಇನ್ನೂ ಮೃದುವಾದ ಮತ್ತು ಬೆಳ್ಳಗಿನ ರೊಟ್ಟಿ, ಚಪಾತಿ ಬಯಸಿದರೆ ನೀರಿನ ಬದಲಾಗಿ ಹಾಲಿನಿಂದ ಹಿಟ್ಟನ್ನು ಕಲಸಬಹುದು. ಇದು ರೊಟ್ಟಿಗೆ ಕ್ರೀಮಿ ರುಚಿಯನ್ನು ನೀಡುತ್ತದೆ.

55
ಕಲಸಿದ ಹಿಟ್ಟಿಗೆ ವಿಶ್ರಾಂತಿ ನೀಡಿ (15-20 ನಿಮಿಷ)

ಹೆಚ್ಚಿನವರು ಹಿಟ್ಟು ಕಲಿಸಿದ ತಕ್ಷಣ ರೊಟ್ಟಿ ಅಥವಾ ಚಪಾತಿ ಮಾಡಲು ಶುರು ಮಾಡುತ್ತಾರೆ. ಆದರೆ ಉತ್ತಮ ಚಪಾತಿ, ರೊಟ್ಟಿಗಾಗಿ ಹಿಟ್ಟು ಕಲಿಸಿದ ನಂತರ ಅದನ್ನು ಒಂದು ಬಟ್ಟೆ ಅಥವಾ ತಟ್ಟೆಯಿಂದ ಮುಚ್ಚಿ 15-20 ನಿಮಿಷಗಳ ಕಾಲ ಹಾಗೆಯೇ ಬಿಡಿ. ಆ ನಂತರ ಮಾಡಿದರೆ ಅವು ಮೃದುವಾಗಿ ಬರುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories