ಪ್ರೋಟೀನ್ ಶೇಕ್ ಇಲ್ದಿರೋ ಟೈಂನಲ್ಲಿ ಭಾರತದ ಸೈನಿಕರು ತಿಂತಿದ್ರೂ ಈ ಆಹಾರ, ನೀವೂ ಟ್ರೈ ಮಾಡಿ

Published : Mar 16, 2026, 04:02 PM IST

ಭಾರತದ ಇತಿಹಾಸದಲ್ಲಿ ಆಹಾರ ಕೇವಲ ಹೊಟ್ಟೆ ತುಂಬಿಸುವುದಕ್ಕೆ ಮೀಸಲಾಗಿರಲಿಲ್ಲ. ಪ್ರೋಟೀನ್ ಪೌಡರ್ ಇಲ್ಲದ ಸಮಯದಲ್ಲಿ ಕೂಡ ಯೋಧರು ಧಾನ್ಯ, ತುಪ್ಪಗಳಿಂದ ತಯಾರಾದ ಆಹಾರ  ಸೇವಿಸುತ್ತಿದ್ದರು. ಇವು ದೇಹವನ್ನು ಬಲಪಡಿಸಿ, ದೀರ್ಘ ಸಮಯ ತರಬೇತಿ ಮತ್ತು ಯುದ್ಧಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತಿತ್ತು.  

PREV
15
ಸಟ್ಟು

ಉತ್ತರ ಭಾರತದ ಉರಿ ಬಿಸಿಲಿನ ಮೈದಾನಗಳಲ್ಲಿ ಯೋಧರು ಮತ್ತು ಪ್ರಯಾಣಿಕರಿಗೆ ಹೊತ್ತೊಯ್ಯಲು ಹಗುರವಾಗಿದ್ದ, ದೀರ್ಘ ಕಾಲ ಶಕ್ತಿ ನೀಡುವ ಆಹಾರ ಬೇಕಾಗಿತ್ತು. ಆ ಸಮಯದಲ್ಲಿ ಸಟ್ಟು ಅತ್ಯುತ್ತಮ ಆಹಾರವಾಗಿತ್ತು. ಹುರಿದ ಕಡಲೆ ಹಿಟ್ಟಿನಿಂದ ತಯಾರಾಗುವ ಸಟ್ಟನ್ನು ನೀರು, ಉಪ್ಪು, ಬೆಲ್ಲ ಅಥವಾ ಮಸಾಲೆ ಸೇರಿಸಿ ತಕ್ಷಣ ಕುಡಿಯುವ ಪಾನೀಯವಾಗಿ ಮಾಡಿಕೊಳ್ಳಬಹುದು. ಇದು ಸರಳವಾಗಿದ್ದರೂ ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುತ್ತಿತ್ತು.ಸಟ್ಟಿನ ದೊಡ್ಡ ಲಾಭ ಎಂದರೆ ತಯಾರಿಸೋದು ಸುಲಭ. ಪ್ರಯಾಣದಲ್ಲಿದ್ದಾಗಲೂ ಕೆಲವೇ ನಿಮಿಷಗಳಲ್ಲಿ ಪಾನೀಯ ಅಥವಾ ಮುದ್ದೆ ಮಾಡಿಕೊಂಡು ತಿನ್ನಬಹುದು. ಹುರಿದ ಕಡಲೆ ಪ್ರೋಟೀನ್, ಫೈಬರ್ ಹಾಗೂ ಐರನ್, ಮ್ಯಾಗ್ನೀಷಿಯಂ ಮೊದಲಾದ ಖನಿಜಗಳಿಂದ ಸಮೃದ್ಧವಾಗಿದೆ. ಇದರಿಂದ ದೇಹಕ್ಕೆ ನಿಧಾನವಾಗಿ ಶಕ್ತಿ ದೊರೆಯುತ್ತದೆ ಮತ್ತು ದಣಿವು ಕಡಿಮೆಯಾಗುತ್ತದೆ.

25
ಸಜ್ಜೆ ರೊಟ್ಟಿ

ರಾಜಸ್ಥಾನದ ಬರ ಪ್ರದೇಶಗಳಲ್ಲಿ ರಾಜಪುತ್ ಯೋಧರ ಪ್ರಾಬಲ್ಯ ಹೆಚ್ಚಾಗ್ತಿದ್ದ ಸಮಯದಲ್ಲಿ ಗಟ್ಟಿಯಾದ ಧಾನ್ಯ ನಿತ್ಯದ ಆಹಾರವಾಗಿತ್ತು. ಅವುಗಳಲ್ಲಿ ಬಜ್ರಾ (ಸಜ್ಜೆ) ಬಹಳ ಮುಖ್ಯವಾಗಿತ್ತು. ತುಪ್ಪವನ್ನು ಚೆನ್ನಾಗಿ ಹಚ್ಚಿದ ದಪ್ಪವಾದ ಬಜ್ರಾ ರೊಟ್ಟಿಗಳು ಯೋಧರಿಗೆ ಶಕ್ತಿ ನೀಡುವ ಮುಖ್ಯ ಆಹಾರವಾಗಿದ್ದವು. ಸಜ್ಜೆ ಕಾರ್ಬೊಹೈಡ್ರೇಟ್, ಐರನ್ ಮತ್ತು ಪ್ರೋಟೀನ್ಗಳಿಂದ ಸಮೃದ್ಧವಾಗಿದೆ. ಇದು ದೇಹಕ್ಕೆ ದೀರ್ಘ ಕಾಲ ಶಕ್ತಿ ನೀಡುತ್ತದೆ. ಸಜ್ಜೆ, ಅತಿ ಹೆಚ್ಚು ಬಿಸಿಲಿರುವ ಮತ್ತು ಬರ ಪ್ರದೇಶಗಳಲ್ಲಿಯೂ ಸುಲಭವಾಗಿ ಬೆಳೆಯುತ್ತದೆ. ಆದ್ದರಿಂದ ಇದು ಆ ಪ್ರದೇಶದ ಜನರಿಗೆ ವಿಶ್ವಾಸಾರ್ಹ ಆಹಾರವಾಗಿತ್ತು.

35
ಗೊಂದ್‌ ಲಡ್ಡು

ಗೊಂದ್‌ ಲಡ್ಡು ಯೋಧರು ಮತ್ತು ಪೈಲ್ವಾನರಿಗೆ ಬಹಳ ಪ್ರಿಯವಾದ ಆಹಾರವಾಗಿತ್ತು. ಈ ಲಡ್ಡುಗಳಲ್ಲಿ ಗೋಂದ್ ಜೊತೆಗೆ ಗೋಧಿ ಹಿಟ್ಟು, ಡ್ರೈ ಫ್ರೂಟ್ಸ್, ಬೇಳೆಕಾಯಿ ಮತ್ತು ಸಾಕಷ್ಟು ತುಪ್ಪವನ್ನು ಬಳಸಲಾಗುತ್ತದೆ. ಇದ್ರಲ್ಲಿ ಎಲ್ಲಾ ಪದಾರ್ಥಗಳನ್ನು ನಿಧಾನವಾಗಿ ಕರಿಯಲಾಗುತ್ತದೆ. ಇದರಿಂದ ಅವುಗಳ ಸಹಜ ಎಣ್ಣೆ ಮತ್ತು ಸುವಾಸನೆ ಹೊರಬಂದು ದೇಹಕ್ಕೆ ದೀರ್ಘ ಕಾಲ ಶಕ್ತಿ ನೀಡುವ ಮಿಶ್ರಣ ಸಿದ್ಧವಾಗುತ್ತದೆ. ಇದು ದೇಹಕ್ಕೆ ಉಷ್ಣತೆ, ಶಕ್ತಿ ನೀಡುತ್ತದೆ. ಗೋಂದ್ ಕರಿದಾಗ ಉಬ್ಬಿ ಕರಕರೆ ಆಗುತ್ತದೆ. ಇದರಿಂದ ರುಚಿ ಹೆಚ್ಚುವುದರ ಜೊತೆಗೆ ಪೌಷ್ಟಿಕತೆಯೂ ಹೆಚ್ಚುತ್ತದೆ. ಈ ಲಡ್ಡುಗಳಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ಖನಿಜವಿದೆ.

45
ಬಾದಾಮಿ ಹಾಲು (Badam Milk)

ಅನೇಕ ರಾಜಮನೆತನಗಳಲ್ಲಿ ಶಕ್ತಿಯನ್ನು ಹೆಚ್ಚಿಸಲು ವಿಶೇಷ ಡ್ರಿಂಕ್ಸ್ ತಯಾರಿಸಲಾಗುತ್ತಿತ್ತು. ಅವುಗಳಲ್ಲಿ ಬಾದಾಮಿ ಹಾಲು ಸೇರಿದೆ. ಬಾದಾಮಿ, ಕೇಸರಿ ಮತ್ತು ಕೆಲವು ಮಸಾಲೆಗಳನ್ನು ಹಾಲಿಗೆ ಹಾಕಿ ಇದನ್ನು ತಯಾರಿಸಲಾಗುತ್ತದೆ. ಇದು ಮನಸ್ಸನ್ನು ತಾಜಾಗೊಳಿಸಿ, ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾದಾಮಿಯಲ್ಲಿ ಆರೋಗ್ಯಕರ ಕೊಬ್ಬು, ಪ್ರೋಟೀನ್ ಮತ್ತು ವಿಟಮಿನ್ ಇ ಇರುತ್ತದೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಹೆಚ್ಚು ಇರುತ್ತದೆ. ಈ ಎರಡೂ ಸೇರಿ ದೇಹದ ಸ್ನಾಯುಗಳನ್ನು ಬಲಪಡಿಸುತ್ತದೆ. ಸಂಪ್ರದಾಯದಂತೆ ಬಾದಾಮಿಯನ್ನು ಮೊದಲು ನೀರಿನಲ್ಲಿ ನೆನೆಸುತ್ತಾರೆ. ನಂತ್ರ ಅದರ ಸಿಪ್ಪೆ ತೆಗೆದು, ಪೇಸ್ಟ್‌ ತಯಾರಿಸಿ ಬಿಸಿ ಹಾಲಿನಲ್ಲಿ ಸೇರಿಸಲಾಗುತ್ತದೆ.

55
ಖಿಚ್ಡಿ (Khichdi)

ಖಿಚಡಿಯನ್ನು ಈಗ ನಾವು ಕಂಪರ್ಟ್‌ ಆಹಾರ ಅಂದ್ಕೊಂಡಿದ್ದೇವೆ. ಆದ್ರೆ ಆಗಿನ ಕಾಲದಲ್ಲಿ ಯೋಧರು ಮತ್ತು ಪ್ರಯಾಣಿಕರು ಇದನ್ನು ಶಕ್ತಿ ನೀಡುವ ಆಹಾರ ಎಂದು ಪರಿಗಣಿಸಿದ್ದರು. ಅಕ್ಕಿ ಮತ್ತು ಬೇಳೆಗಳನ್ನು ಒಟ್ಟಿಗೆ ಬೇಯಿಸಿ, ಸ್ವಲ್ಪ ಮಸಾಲೆ ಸೇರಿಸಿ ತಯಾರಿಸುವ ಈ ಕಿಚಡಿ ಕಾರ್ಬೊಹೈಡ್ರೇಟ್ ಮತ್ತು ಪ್ರೋಟೀನ್ಗಳ ಸಮತೋಲನವನ್ನು ನೀಡುತ್ತದೆ. ಖಿಚ್ಡಿ ಸುಲಭವಾಗಿ ಜೀರ್ಣವಾಗುತ್ತದೆ ಮತ್ತು ದೇಹಕ್ಕೆ ಬೇಕಾದ ಪೌಷ್ಟಿಕತೆಯನ್ನು ನೀಡುತ್ತದೆ. ಇದಕ್ಕೆ ತುಪ್ಪ ಸೇರಿಸಿದರೆ ರುಚಿ ಜೊತೆ ಹೆಚ್ಚು ಕ್ಯಾಲೊರಿ ಮತ್ತು ಶಕ್ತಿ ಸಿಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories