ಧರ್ಮಸ್ಥಳದಲ್ಲಿ ಅನ್ನದಾಸೋಹ ಪುಣ್ಯಕಾರ್ಯದ ಸಿದ್ಧತೆ ಹೇಗಿರುತ್ತೆ ನೋಡಿ

Published : Sep 08, 2023, 02:33 PM ISTUpdated : Sep 08, 2023, 03:43 PM IST

ಧರ್ಮಸ್ಥಳಕ್ಕೆ ಮಂಜುನಾಥನ ಆಶೀರ್ವಾದ ಪಡೆಯಲು ಆಗಮಿಸುವ ಸಾವಿರಾರು ಭಕ್ತಾಧಿಗಳಿಗೆ ಪ್ರತಿದಿನ ಉಚಿತ ಆಹಾರವನ್ನು ನೀಡಲಾಗುತ್ತದೆ. ದೇವಸ್ಥಾನಕ್ಕೆ ಬಂದವರು ಹಸಿದುಕೊಂಡು ವಾಪಾಸ್ ಆದ ಉದಾಹರಣೆಯಿಲ್ಲ. ಹಾಗಿದ್ರೆ ಇಷ್ಟೊಂದು ಪ್ರಮಾಣದಲ್ಲಿ ಅಡುಗೆ ತಯಾರಿಸುವ ಅಡುಗೆ ಕೋಣೆ ಹೇಗಿದೆ?

PREV
18
ಧರ್ಮಸ್ಥಳದಲ್ಲಿ ಅನ್ನದಾಸೋಹ ಪುಣ್ಯಕಾರ್ಯದ ಸಿದ್ಧತೆ ಹೇಗಿರುತ್ತೆ ನೋಡಿ

ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲೊಂದು ದಕ್ಷಿಣಕನ್ನಡದ ಬೆಳ್ತಂಗಡಿ ತಾಲೂಕಿನಲ್ಲಿರುವ ಶ್ರೀ ಕ್ಷೇತ್ರ ಧರ್ಮಸ್ಥಳ. ಪ್ರತಿನಿತ್ಯ ಸಾವಿರಾರು ಮಂದಿ ಇಲ್ಲಿಗೆ ಆಗಮಿಸಿ ಮಂಜುನಾಥನ ದರ್ಶನ ಪಡೆದು ಧನ್ಯರಾಗುತ್ತಾರೆ. ನೇತ್ರಾವತಿಯಲ್ಲಿ ಮಿಂದು, ಜೀವನದಲ್ಲಿ ಕಷ್ಟ ಎದುರಾದಾಗ ಹೇಳಿಕೊಂಡ ಹರಕೆಯನ್ನು ತೀರಿಸಿ ಪಾವನರಾಗುತ್ತಾರೆ.

28

ಮಂಜುನಾಥನ ಆಶೀರ್ವಾದ ಪಡೆಯಲು ಧರ್ಮಸ್ಥಳಕ್ಕೆ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಪ್ರತಿದಿನ ಉಚಿತ ಆಹಾರವನ್ನು ನೀಡಲಾಗುತ್ತದೆ. ಪ್ರತಿಯೊಬ್ಬ ಸಂದರ್ಶಕರಿಗೂ ಜಾತಿ, ಧರ್ಮ, ಸಂಸ್ಕೃತಿ ಅಥವಾ ಸ್ಥಾನಮಾನವನ್ನು ಲೆಕ್ಕಿಸದೆ ಊಟದ ವ್ಯವಸ್ಥೆಯಿದೆ. ದೇವಸ್ಥಾನಕ್ಕೆ ಬಂದವರು ಹಸಿದುಕೊಂಡು ವಾಪಾಸ್ ಆದ ಉದಾಹರಣೆಯಿಲ್ಲ.

38

ಇಲ್ಲಿನ ಅನ್ನಪೂರ್ಣ ಚೌಲ್ಟ್ರಿಯನ್ನು ಯಾವುದೇ ದಿನದಲ್ಲಿ 30,000 ರಿಂದ 70,000 ಯಾತ್ರಾರ್ಥಿಗಳಿಗೆ ಆಹಾರವನ್ನು ನೀಡಲು ವಿನ್ಯಾಸಗೊಳಿಸಲಾಗಿದೆ. ಇದು ಆಧುನಿಕ, ನೈರ್ಮಲ್ಯ, ಸ್ವಯಂಚಾಲಿತ ಅಡುಗೆಮನೆಯನ್ನು ಹೊಂದಿದೆ. ಅಡುಗೆ ತಯಾರಿಯಲ್ಲಿ ಜೈವಿಕ ಅನಿಲ ಬೆಂಕಿ ಮತ್ತು ಸಾವಯವ ಬಾಳೆ ಎಲೆ ಫಲಕಗಳನ್ನು ಆಹಾರ ಪೂರೈಸಲು ಬಳಸಲಾಗುತ್ತದೆ.

48

ಧರ್ಮಸ್ಥಳಕ್ಕೆ ಬರುವ ಭಕ್ತರಿಗೆ ಮೂರೂ ಹೊತ್ತಿನ ಊಟವನ್ನು ನೀಡಲಾಗುತ್ತದೆ, ಇದು ಯಾವುದೇ ದೇವಸ್ಥಾನದಲ್ಲಿ ಅತ್ಯುತ್ತಮವಾದ ಊಟಗಳಲ್ಲಿ ಒಂದಾಗಿದೆ. ಊಟ ಮಾಡದೆ ಧರ್ಮಸ್ಥಳವನ್ನು ಬಿಡಬಾರದು ಎಂಬುದು ಸಂಪ್ರದಾಯವಾಗಿದೆ, ಹಾಗೆ ಮಾಡುವುದರಿಂದ ತೀರ್ಥಯಾತ್ರೆ ಅಪೂರ್ಣವಾಗುತ್ತದೆ ಎಂದು ಹೇಳುತ್ತಾರೆ. 

58

ಆದರೆ ದಿನವೊಂದಕ್ಕೆ ಸಾವಿರಾರು ಮಂದಿಗೆ ಊಟವುಣಿಸುವ ಧರ್ಮಸ್ಥಳದ ಅಡುಗೆ ಕೋಣೆ ಹೇಗೆ ಇದೆ ಎಂಬುದು ಹಲವರಿಗೆ ಗೊತ್ತಿಲ್ಲ. ಹೆಚ್ಚಿನವರಿಗೆ ಅದನ್ನು ತಿಳಿದುಕೊಳ್ಳುವ ಕುತೂಹಲ ಇರಬಹುದು. ನಟ ಹಾಗೂ ನಿರೂಪಕ ಸಿಹಿಕಹಿ ಚಂದ್ರು ಆ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

68

ಧರ್ಮಸ್ಥಳದ ಅಡುಗೆ ಕೋಣೆಯ ವಿಡಿಯೋವನ್ನು ಸಿಹಿಕಹಿ ಚಂದ್ರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಲ್ಲಿ ಅವರು ಅಡುಗೆ ಪಾತ್ರೆಗಳು, ಅಡುಗೆ ತಯಾರಿಸುವ ರೀತಿಯನ್ನು ಹಂಚಿಕೊಂಡಿದ್ದಾರೆ.

78

ಫೋಟೋದಲ್ಲಿ ಸಿಹಿಕಹಿ ಚಂದ್ರು ಅವರು ಅಲ್ಲಿನ ಅಡುಗೆ ತಯಾಕರಲ್ಲಿ ಮಾತನಾಡುವುದನ್ನು ಸಹ ನೋಡಬಹುದು. ವೈರಲ್ ಆಗಿರುವ ವಿಡಿಯೋಗೆ ನೆಟ್ಟಿಗರು ಸಹ ಕಮೆಂಟ್ ಮಾಡಿದ್ದಾರೆ. 

88

ಒಬ್ಬರು 'ಅನ್ನದಾತ ಸುಖೀ ಭವ' ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ಶ್ರೀ ಮಹಾ ಅನ್ನಪೂರ್ಣೇಶ್ವರಿ ದೇವಿ ನಮಃ' ಎಂದು ಕಮೆಂಟಿಸಿದ್ದಾರೆ. ಇನ್ನೊಬ್ಬರು, 'ಸಿಹಿ ಕಹಿ ಚಂದ್ರು ಅವರನ್ನು ನೋಡಿ ಮಹಾತ್ಮ ಗಾಂಧೀಜಿ ನೆ ಬಂದ್ರು ಅಂದ್ಕೊಂಡೆ' ಎಂದು ತಮಾಷೆ ಮಾಡಿದ್ದಾರೆ.

Read more Photos on
click me!

Recommended Stories