ಟೊಮ್ಯಾಟೋ ಕೆಚಪ್ ರುಚಿ ಹೆಚ್ಚಿಸುವುದರ ಜತೆಗೆ ಕೂದಲನ್ನು ಶೈನ್ ಮಾಡುತ್ತೆ!

First Published Oct 16, 2020, 11:21 PM IST

ಗರಿ ಗರಿ ಸಮೋಸ, ಚಿಪ್ಸ್, ಸ್ಯಾಂಡ್ ವಿಚ್, ಅಷ್ಟೇ ಯಾಕೆ ಕೆಲವರಿಗೆ ಚಪಾತಿ ತಿನ್ನೊವಾಗ್ಲೂ ಜೊತೆಗೆ  ಕೆಚಪ್ ಇರಲೇಬೇಕು. ಈಗಂತೂ ಬೇರೆ ಬೇರೆ ರುಚಿಯ ಕೆಚಪ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಕೆಚಪ್ ಮಕ್ಕಳ ತಿಂಡಿಯ ಸ್ವಾದ ಹೆಚ್ಚುವ ಕೆಲಸವನ್ನು ಮಾಡಿ ನಮ್ಮ ಕೆಲಸ ಕಡಿಮೆ ಮಾಡಿಸಿರೋದಂತೂ ನಿಜಾ.. 

ಈ ಕೆಚಪ್ ಎಂಬ ಕಿಚನ್ ಫ್ರೆಂಡ್ ತಿಂಡಿ ಜೊತೆಗೆ ಮಾತ್ರ ಇದ್ರೆ ಚೆನ್ನಾಗಿರುತ್ತೆ ಅಂದ್ಕೊಂಡ್ರಾ? ನೀವು ತಪ್ಪು ತಿಳ್ಕೊಂಡಿದೀರಾ... ಹಾನಿಗೊಳಗಾದ ಕೂದಲನ್ನು ಸರಿಪಡಿಸುವುದರಿಂದ ಹಿಡಿದು, ಪಾತ್ರೆಗಳ ಕಳೆದುಹೋದ ಹೊಳಪನ್ನು ಮತ್ತೆ ತರಿಸುವವರೆಗೆ, ಸೂಪ್ ಮತ್ತು ಕರ್ರಿ ಗಳಿಗೆ ಟ್ವಿಸ್ಟ್ ಕೊಡುವ ಜೊತೆಗೆ ಕೆಚಪ್ ನಿಂದ ಹಲವು ಪ್ರಯೋಜನಗಳಿವೆ. ಅವು ಯಾವುವು ಅನ್ನೋದನ್ನು ನಾವಿಲ್ಲಿ ನೋಡೋಣ...
undefined
ಟೊಮೆಟೊ ಕೆಚಪ್ ಏಕೆ?ಟೊಮೆಟೊ ಕೆಚಪ್ ವಿನೆಗರ್ ಮತ್ತು ಸಿಟ್ರಿಕ್ ಆಮ್ಲದ ಸಂಯೋಜನೆಯನ್ನು ಹೊಂದಿರುತ್ತದೆ. ವಿನೆಗರ್ ನಲ್ಲಿ ಅಸಿಟಿಕ್ ಆಮ್ಲ ಮತ್ತು ಟೊಮೆಟೊದಲ್ಲಿ ಸಿಟ್ರಿಕ್ ಆಮ್ಲದ ಉಪಸ್ಥಿತಿಯು ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಪಾತ್ರೆಗಳು, ಬಣ್ಣ ಕೆಟ್ಟ ಆಭರಣಗಳು ಮತ್ತು ತುಕ್ಕು ಕಲೆಗಳನ್ನು ಸ್ವಚ್ಛ ಗೊಳಿಸಿ ಹೊಸದರಂತೆ ಮಾಡೋದರಲ್ಲಿ ಸಂಶಯವಿಲ್ಲ.
undefined
ಅಡುಗೆಯ ರುಚಿ ಹೆಚ್ಚಿಸಲುಕೆಲವು ಸಲ ನೀವು ಅಡುಗೆ ಮಾಡುವಾಗ ಗೊತ್ತಾಗದೆ ಮಸಾಲೆಯನ್ನು ಹೆಚ್ಚು ಕಡಿಮೆ ಹಾಕಿ ಆಹಾರದ ರುಚಿಯನ್ನು ಹಾಳುಮಾಡುತ್ತೀರಿ. ಅಂತಹ ಸಮಯದಲ್ಲಿ ತಲೆ ಕೆಡಿಸಿಕೊಳ್ಳಬೇಡಿ. ಯಾಕೆಂದ್ರೆ ಟೊಮೆಟೊ ಕೆಚಪ್ ಗೆ ನಿಮ್ಮ ಖಾದ್ಯಗಳ ಮಸಾಲೆ ಅಂಶವನ್ನು ಸರಿ ಮಾಡಿ ಕೆಲವೇ ನಿಮಿಷಗಳಲ್ಲಿ ಅದರ ಸಿಹಿ ಮತ್ತು ಹುಳಿ ರುಚಿಯೊಂದಿಗೆ ಹೊಂದಿಸುವ ಶಕ್ತಿ ಇದೆ.
undefined
ಸೂಪ್ ಮತ್ತು ಸ್ಟ್ಯೂಗಳಿಗೆ ಹೆಚ್ಚಿನ ದಪ್ಪವನ್ನು ಸೇರಿಸಿಕೆಲವು ಬಾರಿ, ನಿಮ್ಮ ಕರ್ರಿಗಳು, ಸೂಪ್ ಗಳು ಮತ್ತು ಸ್ಟ್ಯೂಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದರೆ, ಸರಿಯಾದ ದಪ್ಪವನ್ನು ಪಡೆಯಲು ಸುಲಭವಾದ ಮಾರ್ಗವೆಂದರೆ ಸ್ವಲ್ಪ ಟೊಮೆಟೊ ಕೆಚಪ್ ಅನ್ನು ಸೇರಿಸಿ ಮತ್ತು ಖಾದ್ಯಕ್ಕೆ ಉತ್ತಮವಾದ ಸ್ಟಿರ್ ನೀಡಿ. ಇದರಿಂದ ಸೂಪ್ ದಪ್ಪವಾಗುತ್ತದೆ ಜೊತೆಗೆ ಉತ್ತಮ ಟೇಸ್ಟ್ ಕೂಡ ದೊರೆಯುತ್ತದೆ.
undefined
ಆಭರಣಗಳಿಗೆ ಹೊಳಪು :ಹೌದು, ಟೊಮೆಟೊ ಕೆಚಪ್ ಮಂದ ಮತ್ತು ಹೊಳಪು ಕಳೆದುಕೊಂಡ ಆಭರಣಗಳನ್ನು ಹೊಸದರಂತೆ ಮಾಡುತ್ತದೆ. ಕೇವಲ ಒಂದು ಬಟ್ಟಲನ್ನು ತೆಗೆದುಕೊಂಡು ಸ್ವಲ್ಪ ಕೆಚಪ್ ಹಾಕಿ, ಅದರಲ್ಲಿ ನಿಮ್ಮ ಬೆಳ್ಳಿ ಮತ್ತು ಲೋಹದ ಆಭರಣಗಳನ್ನು 10 ನಿಮಿಷಗಳ ಕಾಲ ನೆನೆಸಿ, ನಂತರ ನೀರಿನಿಂದ ತೊಳೆಯಿರಿ ಮತ್ತು ನೇವೆ ಮ್ಯಾಜಿಕ್ ನೋಡಿ..
undefined
ನೆನಪಿಡಿ : ನಿಮ್ಮ ಆಭರಣಗಳನ್ನು ಕೆಚಪ್ ನಲ್ಲಿ ತೊಳೆಯುವಾಗ ನೀವು ದೀರ್ಘಕಾಲ ಅವುಗಳನ್ನು ನೆನೆಯಲು ಬಿಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಿ, ಹೀಗೆ ಮಾಡಿದರೆ ಇದು ಆಭರಣದ ಮೇಲಿನ ಪದರವನ್ನು ಹಾಳುಮಾಡಬಹುದು ಅಥವಾ ಸವೆಸಬಹುದು. ಆದುದರಿಂದ ಜಾಗರೂಕರಾಗಿರಿ.
undefined
ಕೀಟಗಳ ಕಡಿತವನ್ನು ಗುಣಪಡಿಸಿಇದು ಸಾಧ್ಯವೇ ಎಂದು ಅಂದುಕೊಳ್ಳಬೇಡಿ, ಆದರೆ ಮುಂದಿನ ಬಾರಿ ನೀವು ಕೀಟಗಳ ಕಡಿತವನ್ನು ಎದುರಿಸುವಾಗ, ಸ್ವಲ್ಪ ಟೊಮೆಟೊ ಕೆಚಪ್ ಅನ್ನು ಹಚ್ಚಿ ಮತ್ತು ಕಿರಿಕಿರಿ ಮತ್ತು ರೆಡ್ ರಾಶಸ್ ಆಗುವುದನ್ನು ತೊಡೆದುಹಾಕಿ.
undefined
ಕೂದಲಿಗೆ ಶೈನ್ ನೀಡುತ್ತದೆ :ನೀರಿನಲ್ಲಿ ಕ್ಲೋರಿನ್ ಇರುವಿಕೆಯು ಕೂದಲಿನ ಸ್ಥಿತಿಯನ್ನು ಹಾನಿಗೊಳಿಸುತ್ತದೆ, ಇದನ್ನೆಲ್ಲಾ ನಿವಾರಿಸಿ ಸುಂದರವಾದ ಹೊಳೆಯುವ ಕೂದಲು ನಿಮಗೆ ಬೇಕೆಂದರೆ ನಿಮ್ಮ ಕೂದಲಿನ ಎಳೆಗಳ ಮೇಲೆ ಸ್ವಲ್ಪ ಕೆಚಪ್ ಅನ್ನು ಹಚ್ಚುವ ಮೂಲಕ ನೀವು ಈ ಹಾನಿಯನ್ನು ಸರಿಪಡಿಸಬಹುದು .
undefined
ಹೇಗೆ ಇದನ್ನ ಮಾಡೋದು ಗೊತ್ತಾ?ಕೂದಲಿನ ಮೇಲೆ ಕೆಚಪ್ ನ್ನು ಹಾಗೆ ಹಚ್ಚಿ, 15 ನಿಮಿಷಗಳ ಕಾಲ ಹಾಗೆ ಇಟ್ಟು , ನಂತರ ಅದನ್ನು ಶಾಂಪೂ ಬಳಸಿ ತೊಳೆಯಿರಿ. ಕೆಚಪ್ ನಲ್ಲಿ ವಿನೆಗರ್ ಇರುವುದರಿನ್ದ ಇದು ನೀರಿನಲ್ಲಿರುವ ಕಠಿಣ ಅಂಶಗಳಿಂದ ಉಂಟಾಗುವ ಹಾನಿಯನ್ನು ಸರಿಪಡಿಸುತ್ತದೆ. ಜೊತೆಗೆ ಕೂದಲಿಗೆ ನ್ಯಾಚುರಲ್ ಸೌಂದರ್ಯ ಬರುತ್ತದೆ.
undefined
click me!