Mysuru Mylari Hotel: ಸುಮಾರು 87ವರ್ಷಗಳ ಇತಿಹಾಸವಿರುವ ಮೈಸೂರು ಮೈಲಾರಿ ಹೋಟೆಲ್ ಇತ್ತೀಚೆಗೆ ಬೆಂಗಳೂರು ಇಂದಿರಾನಗರದಲ್ಲಿಯೂ ತನ್ನ ಶಾಖೆಯನ್ನು ಆರಂಭಿಸಿದೆ. ಈ ಹೋಟೆಲ್‌ಗೆ 'ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ - 1938’(Old Original Vinayaka Mylari) ಎಂದು ನಾಮಕರಣ ಮಾಡಲಾಗಿದೆ.
ಮೈಸೂರಿಗೆ ಭೇಟಿ ನೀಡಿದಾಗಲೆಲ್ಲಾ ಅಥವಾ ಫುಡ್ ಲವರ್ಸ್ ಖಂಡಿತವಾಗಿ ವಿನಾಯಕ ಮೈಲಾರಿ ದೋಸೆ ಸವಿದಿರುತ್ತೀರಿ. ಮೈಲಾರಿ ದೋಸೆ ಎಂದರೆ "ಕೇವಲ ಒಂದು ತಿನಿಸಲ್ಲ. ಅದು ಮೈಸೂರಿನ ಪಾಕಶಾಲೆಯ ಪರಂಪರೆ, ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕ" ಅಂತಾರೆ ಬಲ್ಲವರು.
27
ಸಿಎಂಗೂ ಅತ್ಯಂತ ಫೇವರಿಟ್ ಹೋಟೆಲ್
ಸುಮಾರು 87ವರ್ಷಗಳ ಇತಿಹಾಸವಿರುವ ಮೈಸೂರು ಮೈಲಾರಿ ಹೋಟೆಲ್ ಇತ್ತೀಚೆಗೆ ಬೆಂಗಳೂರು ಇಂದಿರಾನಗರದಲ್ಲಿಯೂ ತನ್ನ ಶಾಖೆಯನ್ನು ಆರಂಭಿಸಿದೆ. ಬೆಂಗಳೂರಿನ ಶಾಖೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದು(ಜ. 23), ದೋಸೆಯನ್ನು ಸವಿದಿದ್ದಾರೆ. ಇದು ಅವರ ಅತ್ಯಂತ ಫೇವರಿಟ್ ಹೋಟೆಲ್.
37
ಬೆಂಗಳೂರಿನಲ್ಲೇ ಮೈಸೂರಿನ ಮೈಲಾರಿ ದೋಸೆಯ ರುಚಿ
"ಇನ್ಮುಂದೆ ಬೆಂಗಳೂರಿನಲ್ಲೇ ಮೈಸೂರಿನ ಮೈಲಾರಿ ದೋಸೆಯ ರುಚಿ ಸವಿಯಬಹುದಾಗಿದ್ದು, ಬೆಂಗಳೂರು ನಿವಾಸಿಗಳು ಮೈಸೂರಿನ ಐತಿಹಾಸಿಕ ರುಚಿಯನ್ನು ಹೊತ್ತು ತಂದಿರುವ ಪ್ರಸಿದ್ಧ ಮೈಲಾರಿ ದೋಸೆಗಾಗಿ ಮೈಸೂರಿಗೆ ಇನ್ನು ಮುಂದೆ ಹೋಗಬೇಕಾಗಿಲ್ಲ" ಎಂದು ಸಿದ್ದರಾಮಯ್ಯ ಅವರು ಹೋಟೆಲ್ ಉದ್ಘಾಟಿಸಿದ ಸಂದರ್ಭದಲ್ಲಿ ಹೇಳಿದರು.
ಈ ಹೋಟೆಲ್‌ಗೆ 'ಓಲ್ಡ್ ಒರಿಜಿನಲ್ ವಿನಾಯಕ ಮೈಲಾರಿ - 1938’(Old Original Vinayaka Mylari) ಎಂದು ನಾಮಕರಣ ಮಾಡಲಾಗಿದೆ. ಅಂದಹಾಗೆ ಈ ಹೋಟೆಲ್‌ನ್ನು ಪ್ರಾರಂಭಿಸಿದ್ದು ಮೈಲಾರಸ್ವಾಮಿ ಮತ್ತು ಅವರ ಪತ್ನಿ ಸುಂದರಮ್ಮ (ಗೌರಮ್ಮ).
57
ಡಾ.ರಾಜಕುಮಾರ್ ಅವರಿಗೂ ಇಷ್ಟ
ಅಂದು ಡಾ.ರಾಜಕುಮಾರ್ ಅವರು ಮೈಸೂರಿಗೆ ಶೂಟಿಂಗ್‌ಗೆ ಬಂದಾಗಲೆಲ್ಲಾ ಸೆಟ್‌ನ ಹುಡುಗರೊಂದಿಗೆ ವಿನಾಯಕ ಮೈಲಾರಿಗೆ ಬಂದು ದೋಸೆ ಸವಿಯುತ್ತಿದ್ದರೆಂದು ಸ್ಥಳೀಯರು ಈಗಲೂ ಹೇಳುತ್ತಾರೆ. ಪ್ರವಾಸಕ್ಕೆ ಬರುವ ವಿದೇಶಿಗರೂ ಈ ಒರಿಜಿನಲ್ ಮೈಲಾರಿ ದೋಸೆ ಹುಡುಕಿಕೊಂಡು ಇಲ್ಲಿಗೆ ಬರುತ್ತಾರೆ.
67
ಅನುಭವ ಶೇರ್ ಮಾಡಿದ ಸಿಎಂ
ಈಗ ಇಂದಿರಾ ನಗರದಲ್ಲಿ ಶಾಖೆಯನ್ನು ಹೊಂದಿರುವ ವಿನಾಯಕ ಮೈಲಾರಿ, ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದ್ದು, ಇಲ್ಲಿ ದೋಸೆ ಸವಿದ ಮುಖ್ಯಮಂತ್ರಿಗಳೂ 'ನಮ್ಮ ಮೈಸೂರಿನ ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ತಿಂದರೆ ಒಂಥರಾ ಸಮಾಧಾನ, ತೃಪ್ತಿ. ಇಂದು ಕೂಡ ಹಾಗೆಯೇ ಆಯಿತು’ ಎಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದರು.
77
ಎಲ್ಲೆಡೆ ವೈರಲ್, ಟ್ರೆಂಡ್
ದೋಸೆ ಪ್ರಿಯರೂ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ಈ ಹೋಟೆಲ್‌ನಲ್ಲಿ ದೋಸೆ ತಿಂದ ಅನುಭವವನ್ನು ಹಂಚಿಕೊಳ್ಳುತ್ತಿದ್ದು, ಸದ್ಯ ಎಲ್ಲೆಡೆ ವೈರಲ್ ಆಗುತ್ತಿರುವುದನ್ನು ಗಮನಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.