ಹೌರಾ ಜಂಕ್ಷನ್ - ರಸಗುಲ್ಲಾ: ಪಶ್ಚಿಮ ಬಂಗಾಳದ ಕೋಲ್ಕತ್ತಾ ನಗರದಲ್ಲಿರುವ ಹೌರಾ ಜಂಕ್ಷನ್ ಬಹಳ ದೊಡ್ಡ ರೈಲ್ವೆ ನಿಲ್ದಾಣ. ಇದು ದೇಶದ ಅತಿದೊಡ್ಡ ರೈಲ್ವೆ ನಿಲ್ದಾಣಗಳಲ್ಲಿ ಒಂದು. ಅಷ್ಟೇ ಅಲ್ಲದೆ, ಇಲ್ಲಿ ಸಿಗುವ ರಸಗುಲ್ಲಾ ದೇಶಾದ್ಯಂತ ಪ್ರಸಿದ್ಧವಾಗಿದೆ. ಈ ಸಿಹಿತಿಂಡಿಯನ್ನು ಇಷ್ಟಪಡದವರು ಯಾರೂ ಇಲ್ಲ ಎಂದರೆ ತಪ್ಪಾಗಲಾರದು. ಹೌರಾ ಜಂಕ್ಷನ್ ಮೂಲಕ ಪ್ರಯಾಣಿಸುವ ಹೆಚ್ಚಿನ ಜನರು ಆ ನಿಲ್ದಾಣದಲ್ಲಿ ರಸಗುಲ್ಲಾ ತಿನ್ನದೆ ಹೋಗುವುದಿಲ್ಲ.