Published : Feb 13, 2025, 02:40 PM ISTUpdated : Feb 13, 2025, 03:04 PM IST
Indian Chutney: ಹಲವಾರು ಔಷಧೀಯ ಗುಣಗಳಿಂದ ತುಂಬಿರುವ ಶುಂಠಿ ಚಟ್ನಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಉಂಟಾಗುವ ಅಜೀರ್ಣ, ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಹಾಗಾದರೆ, ಈ ಲೇಖನದ ಮೂಲಕ ಶುಂಠಿ ಚಟ್ನಿಯನ್ನು ಹೇಗೆ ತಯಾರಿಸೋದು ಎಂದು ನೋಡೋಣ ಬನ್ನಿ
ಬೇಸಿಗೆ ಕಾಲ ಆರಂಭವಾದರೆ ಕೆಲವರಿಗೆ ಹಲವಾರು ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಶೀತ, ಕೆಮ್ಮು, ಅಜೀರ್ಣ, ಹೊಟ್ಟೆ ನೋವು ಮುಂತಾದವುಗಳು ಪೀಡಿಸುತ್ತವೆ. ಇವುಗಳನ್ನು ನಿವಾರಿಸಲು ಶುಂಠಿ ಅತ್ಯುತ್ತಮ ಆಹಾರ ಪದಾರ್ಥಗಳಲ್ಲಿ ಒಂದಾಗಿದೆ.
25
ಹಲವಾರು ಔಷಧೀಯ ಗುಣಗಳಿಂದ ತುಂಬಿರುವ ಶುಂಠಿ ಚಟ್ನಿ ಸೇವಿಸುವುದರಿಂದ ಹೊಟ್ಟೆಯಲ್ಲಿ ಉಂಟಾಗುವ ಅಜೀರ್ಣ, ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಶುಂಠಿ ಚಟ್ನಿ ಮಾಡುವ ವಿಧಾನ ಮತ್ತು ಬೇಕಾಗುವ ಸಾಮಾಗ್ರಿಗಳು ಇಲ್ಲಿವೆ
35
ಬೇಕಾಗುವ ಸಾಮಗ್ರಿಗಳು:
ಹೆಚ್ಚಿದ ಹಸಿಶುಂಠಿ- 1/2 ಕಪ್, ಕಡ್ಲೆ ಬೇಳೆ - 2 ಚಮಚ, ಒಣಮೆಣಸಿನಕಾಯಿ - 5, ಕರಿಬೇವು - 10 ರಿಂದ 15, ಹುಣಸೆಹಣ್ಣು - ಒಂದು ಸಣ್ಣ ನೆಲ್ಲಿಕಾಯಿ ಅಷ್ಟು, ಬೆಲ್ಲ - 1/2 ಚಮಚ, ಅಡುಗೆ ಎಣ್ಣೆ - 2 ಚಮಚ, ಉಪ್ಪು - ರುಚಿಗೆ ತಕ್ಕಷ್ಟು, ಸಾಸಿವೆ - 1/2 ಚಮಚ,
45
ಮಾಡುವ ವಿಧಾನ:
ಮೊದಲು ಹುಣಸೆಹಣ್ಣನ್ನು ಒಂದು ಪಾತ್ರೆಯಲ್ಲಿ ನೆನೆಸಿಟ್ಟುಕೊಳ್ಳಬೇಕು. ನಂತರ, ಹಸಿಶುಂಠಿಯನ್ನು ತೊಳೆದು ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಹೆಚ್ಚಿಟ್ಟುಕೊಳ್ಳಿ. ಇದಾದ ನಂತರ, ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ನಂತರ ಹೆಚ್ಚಿದ ಶುಂಠಿ ಹಾಕಿ ಹುರಿಯಿರಿ. ನಂತರ ಅದನ್ನು ತಟ್ಟೆಯಲ್ಲಿ ತೆಗೆದಿಟ್ಟುಕೊಳ್ಳಿ. ಅದೇ ಬಾಣಲೆಯಲ್ಲಿ ಕಡ್ಲೆ ಬೇಳೆ, ಒಣಮೆಣಸಿನಕಾಯಿ ಮತ್ತು ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
55
ನಂತರ ಹುರಿದ ಹಸಿ ಶುಂಠಿ, ಕಡ್ಲೆ ಬೇಳೆ, ಒಣಮೆಣಸಿನಕಾಯಿ, ಕರಿಬೇವು ಮೂರನ್ನೂ ತಣ್ಣಗಾಗಿಸಿ ಮಿಕ್ಸಿ ಜಾರಿಗೆ ಹಾಕಿ. ಅದರ ಜೊತೆ ಉಪ್ಪು ಮತ್ತು ಬೆಲ್ಲ ಸೇರಿಸಿಕೊಳ್ಳಬೇಕು. ನೀರಿನ ಬದಲಾಗಿ ಹುಣಸೆಹಣ್ಣಿನ ರಸ ಸೇರಿಸಿಕೊಂಡು ರುಬ್ಬಿಕೊಳ್ಳಬೇಕು. ಸಣ್ಣ ಪಾತ್ರೆಯಲ್ಲಿ ಸಾಸಿವೆ, ಕರಿಬೇವು ಒಗ್ಗರಣೆ ಹಾಕಿ ಅದನ್ನು ಚಟ್ನಿಯೊಂದಿಗೆ ಸೇರಿಸಿ. ಈಗ ರುಚಿಕರವಾದ ಶುಂಠಿ ಚಟ್ನಿ ಸಿದ್ಧವಾಗಿದೆ. ಈ ಚಟ್ನಿಯನ್ನು ನೀವು ಇಡ್ಲಿ, ದೋಸೆಯೊಂದಿಗೆ ಸೇವಿಸಬಹುದು.