ಅಂಬಾನಿ ಗ್ರೂಪ್‌ನಿಂದ ಹೊಸ ಬಿಸಿನೆಸ್‌, 82 ವರ್ಷ ಹಳೆಯ ಹೆಸರಾಂತ ಬ್ರ್ಯಾಂಡ್‌ ಖರೀದಿ!

First Published | Feb 11, 2024, 9:01 AM IST

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ರಿಲಯನ್ಸ್ ಹಲವಾರು ಅಂಗ ಸಂಸ್ಥೆಗಳು ಒಂದು ದಿನಕ್ಕೆ ಕೋಟಿಗಟ್ಟಲೆ ಗಳಿಸುತ್ತದೆ. ಹಾಗೆಯೇ ಸದ್ಯ ರಿಲಯನ್ಸ್ 82 ವರ್ಷ ಹಳೆಯ ಹೆಸರಾಂತ ಬ್ರ್ಯಾಂಡ್‌ನ್ನು ಖರೀದಿಸಲು ಮುಂದಾಗಿದೆ.

ಮುಕೇಶ್ ಅಂಬಾನಿಯವರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಭಾರತದ ಅತಿದೊಡ್ಡ ಉದ್ಯಮಗಳಲ್ಲಿ ಒಂದಾಗಿದೆ. ರಿಲಯನ್ಸ್ ಹಲವಾರು ಅಂಗ ಸಂಸ್ಥೆಗಳು ಒಂದು ದಿನಕ್ಕೆ ಕೋಟಿಗಟ್ಟಲೆ ಗಳಿಸುತ್ತದೆ. ಲಾಭವನ್ನು ಇನ್ನಷ್ಟು ಹೆಚ್ಚಿಸಲು ಅಂಬಾನಿ ಹೊಸ ಹೊಸ ಉದ್ಯಮವನ್ನು ಆರಂಭಿಸುತ್ತಲೇ ಇರುತ್ತಾರೆ.

ಹಾಗೆಯೇ ಸದ್ಯ ರಿಲಯನ್ಸ್ 82 ವರ್ಷ ಹಳೆಯ ಬ್ರ್ಯಾಂಡ್‌ನ್ನು ಖರೀದಿಸಲು ಮುಂದಾಗಿದೆ. ಫ್ಯಾಷನ್‌, ಬ್ಯೂಟಿ, ಇಂಧನ ಮೊದಲಾದ ಕ್ಷೇತ್ರಗಳಲ್ಲಿ ಬಿಸಿನೆಸ್ ಹೊಂದಿರುವ ಮುಕೇಶ್ ಅಂಬಾನಿ ಈ ಬಾರಿ ಕ್ಯಾಂಡಿ ಉದ್ಯಮವನ್ನು ಆರಂಭಿಸಲು ಮುಂದಾಗಿದ್ದಾರೆ,

Latest Videos


ಮ್ಯಾಂಗೋ ಮೂಡ್, ಕಾಫಿ ಬ್ರೇಕ್, ಟುಟ್ಟಿ ಫ್ರೂಟಿ, ಪಾನ್ ಪಸಂದ್, ಚೋಕೋ ಕ್ರೀಮ್ ಮತ್ತು ಸುಪ್ರೀಮ್‌ನಂತಹ ಬ್ರ್ಯಾಂಡ್‌ಗಳನ್ನು ಹೊಂದಿರುವ ರಾವಲ್‌ಗಾಂವ್ ಶುಗರ್ ಫಾರ್ಮ್‌ನ್ನು ಖರೀದಿಸಿದೆ.

ರಾವಲ್‌ಗಾಂವ್ ಶುಗರ್ ಫಾರ್ಮ್‌ ತನ್ನ ಎಲ್ಲಾ ಟ್ರೇಡ್‌ಮಾರ್ಕ್‌ಗಳು, ಪಾಕವಿಧಾನಗಳು ಮತ್ತು ಎಲ್ಲಾಆಸ್ತಿ ಹಕ್ಕುಗಳನ್ನು ರಿಲಯನ್ಸ್ ಗ್ರಾಹಕರಿಗೆ ಮಾರಾಟ ಮಾಡಿದೆ.

ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್‌ನ ಅಂಗಸಂಸ್ಥೆಯಾದ ರಿಲಯನ್ಸ್ ಕನ್ಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್, ರಾವಲ್‌ಗಾಂವ್ ಶುಗರ್ ಫಾರ್ಮ್‌ನ ಐಕಾನಿಕ್ ಕ್ಯಾಂಡಿ ಬ್ರ್ಯಾಂಡ್‌ಗಳನ್ನು 27 ಕೋಟಿ ರೂಪಾಯಿಗಳ ಒಪ್ಪಂದದಲ್ಲಿ ಸ್ವಾಧೀನಪಡಿಸಿಕೊಂಡಿದೆ. 

ಮ್ಯಾಂಗೋ ಮೂಡ್, ಕಾಫಿ ಬ್ರೇಕ್, ಟುಟ್ಟಿ ಫ್ರೂಟಿ, ಪಾನ್ ಪಸಂದ್, ಚೋಕೋ ಕ್ರೀಮ್ ಮತ್ತು ಸುಪ್ರೀಮ್‌ನಂತಹ ಬ್ರ್ಯಾಂಡ್‌ಗಳನ್ನು ಹೊಂದಿರುವ ರಾವಲ್‌ಗಾಂವ್ ಶುಗರ್ ಫಾರ್ಮ್, ತನ್ನ ಟ್ರೇಡ್‌ಮಾರ್ಕ್‌ಗಳು, ಪಾಕವಿಧಾನಗಳು, ಎಲ್ಲಾ ಆಸ್ತಿ ಹಕ್ಕುಗಳನ್ನು ರಿಲಯನ್ಸ್ ಗ್ರಾಹಕರಿಗೆ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ

ಉದ್ದೇಶಿತ ವಹಿವಾಟು ಪೂರ್ಣಗೊಂಡ ನಂತರ ರಾವಲ್‌ಗಾಂವ್ ಆಸ್ತಿ, ಭೂಮಿ, ಸ್ಥಾವರ, ಕಟ್ಟಡ, ಉಪಕರಣಗಳು, ಯಂತ್ರೋಪಕರಣಗಳು ಇತ್ಯಾದಿಗಳಂತಹ ಎಲ್ಲಾ ಇತರ ಆಸ್ತಿಗಳನ್ನು ಅಂಬಾನಿ ಗ್ರೂಪ್‌ಗೆ ವರ್ಗಾಯಿಸಿದೆ.

ರಾವಲ್‌ಗಾಂವ್ ಶುಗರ್ ಪ್ರಕಾರ, ಈ ಉದ್ಯಮದಲ್ಲಿ ಸಂಘಟಿತ ಮತ್ತು ಅಸಂಘಟಿತ ಉದ್ಯಮಿಗಳ ಹೆಚ್ಚ:ದಿಂದಾಗಿ ಕಂಪನಿಯು ಮಾರುಕಟ್ಟೆ ಪಾಲನ್ನು ಕಳೆದುಕೊಂಡಿರುವುದರಿಂದ ವ್ಯಾಪಾರವನ್ನು ನಿರ್ವಹಿಸುವುದು ಇತ್ತೀಚಿಗೆ ಕಷ್ಟವಾಗಿದೆ. ಹೀಗಾಗಿ ಅಂಬಾನಿ ಗ್ರೂಪ್‌ಗೆ ಮಾರಾಟ ಮಾಡಿದೆ ಎಂದು ತಿಳಿದುಬಂದಿದೆ.

click me!