ಅಬ್ಬಬ್ಬಾ ..39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಗೋಲ್ಡನ್‌ ಕೇಕ್‌ ಹೇಗಿದೆ ನೋಡಿ!

Published : Mar 15, 2024, 09:16 AM ISTUpdated : Mar 15, 2024, 09:19 AM IST

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜಗತ್ತಿನ ಕೋಟ್ಯಾಧಿಪತಿ ದಂಪತಿಗಳಲ್ಲೊಬ್ಬರು. ದಂಪತಿ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಹೊಂದಿದ್ದಾರೆ. ಗ್ರ್ಯಾಂಡ್ ಪಾರ್ಟಿ, ಸಮಾರಂಭಗಳನ್ನು ಆಯೋಜಿಸುತ್ತಿರುತ್ತಾರೆ. ತಮ್ಮ 39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಕೇಕ್ ಎಲ್ಲರೂ ಹುಬ್ಬೇರಿಸುವಂತಿತ್ತು.

PREV
110
ಅಬ್ಬಬ್ಬಾ ..39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಗೋಲ್ಡನ್‌ ಕೇಕ್‌ ಹೇಗಿದೆ ನೋಡಿ!

ಬಿಲಿಯನೇರ್‌ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಜಗತ್ತಿನ ಕೋಟ್ಯಾಧಿಪತಿ ದಂಪತಿಗಳಲ್ಲೊಬ್ಬರು. ದಂಪತಿ ಲಕ್ಸುರಿಯಸ್ ಲೈಫ್‌ಸ್ಟೈಲ್‌ನ್ನು ಹೊಂದಿದ್ದಾರೆ. ಗ್ರ್ಯಾಂಡ್ ಪಾರ್ಟಿ, ಸಮಾರಂಭಗಳನ್ನು ಆಯೋಜಿಸುತ್ತಿರುತ್ತಾರೆ. ತಮ್ಮ 39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಕೇಕ್ ಎಲ್ಲರೂ ಹುಬ್ಬೇರಿಸುವಂತಿತ್ತು.

210

ಅಂಬಾನಿ ದಂಪತಿ ಹಲವಾರು ಕಾಸ್ಟ್ಲೀ ವಸ್ತುಗಳನ್ನು ಹೊಂದಿದ್ದಾರೆ. ಮುಕೇಶ್ ಅಂಬಾನಿ ಬೆಲೆಬಾಳುವ ಕಾರು, ವಾಚ್ ಸಂಗ್ರಹವನ್ನು ಹೊಂದಿದ್ದಾರೆ. ನೀತಾ ಅಂಬಾನಿ ಕೋಟಿ ಕೋಟಿ ಬೆಲೆಯ ಸೀರೆ, ವಜ್ರದ ಆಭರಣಗಳನ್ನು ಹೊಂದಿದ್ದಾರೆ. ದಂಪತಿ ತಮ್ಮ ಮನೆಯ ಸಮಾರಂಭಗಳನ್ನು ಅತ್ಯಂತ ಅದ್ಧೂರಿಯಾಗಿ ಆಯೋಜಿಸುತ್ತಾರೆ. 
 

310

ಹಾಗೆಯೇ 39ನೇ ವಿವಾಹ ವಾರ್ಷಿಕೋತ್ಸವಕ್ಕೆ ಅಂಬಾನಿ ದಂಪತಿ ಕಟ್‌ ಮಾಡಿದ ಕೇಕ್ ಎಲ್ಲರೂ ಹುಬ್ಬೇರಿಸುವಂತಿತ್ತು. ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ತಮ್ಮ 39ನೇ ವಾರ್ಷಿಕೋತ್ಸವದಂದು 6 ಟಯರ್‌ನ ಅದ್ದೂರಿ ವಿನ್ಯಾಸದ ಕೇಕ್ ಅನ್ನು ಕತ್ತರಿಸಿದರು.

410

ಇದನ್ನು ನೀಲಿ ಮತ್ತು ಗೋಲ್ಡನ್ ವರ್ಣಗಳಲ್ಲಿ ಅದ್ದೂರಿಯಾಗಿ ವಿನ್ಯಾಸಗೊಳಿಸಲಾಗಿತ್ತು. ಕೇಕ್‌ನ ನಾಲ್ಕನೇ ಹಂತವನ್ನು ನೀತಾ ಮತ್ತು ಮುಕೇಶ್ ಅಂಬಾನಿ ಅವರ ಹೆಸರಿನ ಮೊದಲಕ್ಷರಗಳಿಂದ ಡೆಕೊರೇಟ್ ಮಾಡಲಾಗಿತ್ತು.

510

ಕೇಕ್ ಟಾಪರ್‌ನಲ್ಲಿ 'ಹ್ಯಾಪಿ ಆನಿವರ್ಸರಿ' ಎಂಬ ಟ್ಯಾಗ್‌ನೊಂದಿಗೆ ಇಬ್ಬರ ಹೆಸರೂ ಇತ್ತು. ಇಡೀ ಕೇಕ್‌ನ್ನು ಗುಲಾಬಿಗಳು, ಮಲ್ಲಿಗೆ ಮತ್ತು ಇತರ ಹಲವಾರು ಹೂವುಗಳ ಐಸಿಂಗ್‌ನಿಂದ ಅಲಂಕರಿಸಲಾಗಿತ್ತು.

610

ಡಿಸೈನರ್ ಕೇಕ್‌ಗಳ ಸಂಗ್ರಹವನ್ನು ಹೊಂದಿರುವ 'ಡೆಲಿಸಿಯೇ ಬೈ ಬಂಟಿ ಮಹಾಜನ್' ಈ ಕೇಕ್ನ್ನು‌ ವಿನ್ಯಾಸಗೊಳಿಸಿದ್ದರು. ಬಂಟಿ ಮಹಾಜನ್ ಅವರು ಅಂತರಾಷ್ಟ್ರೀಯವಾಗಿ ಬಳಸುವ ಉಪಕರಣಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ಈ ಬೃಹತ್‌ ಕೇಕ್‌ನ್ನು ರಚಿಸಿದ್ದರು.

710

ಸಾಮಾಜಿಕ ಜಾಲತಾಣದಲ್ಲಿ ಈ ಬೃಹತ್ ಕೇಕ್ ಫೋಟೋ ವೈರಲ್ ಆಗಿತ್ತು. ನೆಟ್ಟಿಗರು ಸೂಪರ್ಬ್‌, ಎಮೇಜಿಂಗ್‌, ಫೆಂಟಾಸ್ಟಿಕ್ ಎಂದೆಲ್ಲಾ ಹೊಗಳಿದ್ದರು.

810

ನೀತಾ ಅಂಬಾನಿ ಮತ್ತು ಮುಕೇಶ್ ಅಂಬಾನಿ ತಮ್ಮ 25ನೇ ವಾರ್ಷಿಕೋತ್ಸವದಂದು ಅದ್ಭುತವಾದ ಫೋಟೋವನ್ನು ಗಿಫ್ಟ್ ಪಡೆದಿದ್ದರು. ಚಿನ್ನದ ಹಸ್ತ ಮತ್ತು ಸುತ್ತಲೂ ದಂಪತಿಯ ಫೋಟೋಗಳಿದ್ದ ಫ್ರೇಮ್‌ನ್ನು ಉಡುಗೊರೆಯಾಗಿ ನೀಡಲಾಗಿತ್ತು. 

910

ಜೋಡಿಯ ಸ್ಮರಣೀಯ ಫೋಟೋಗಳ ಸರಣಿಯಿಂದ ತುಂಬಿದ ಬೃಹತ್ ಫ್ರೇಮ್ ಎಲ್ಲರ ಗಮನ ಸೆಳೆಯಿತು. ಇದಲ್ಲದೆ, ಚಿನ್ನದಲ್ಲಿ ಮಾಡಲಾದ ದಂಪತಿಗಳ ಕೈ ಎರಕಹೊಯ್ದ ಅಚ್ಚು ಅದ್ಭುತವಾಗಿತ್ತು. ಹೀಗೆ ಪ್ರತಿ ಆನಿವರ್ಸರಿಯನ್ನು ಅಂಬಾನಿ ದಂಪತಿ ಅತ್ಯಂತ ಅದ್ಧೂರಿಯಾಗಿ ಆಚರಿಸುತ್ತಾರೆ.

1010

ಇತ್ತೀಚಿಗೆ ಅಂಬಾನಿ ದಂಪತಿ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರಿ ವಡ್ಡಿಂಗ್ ಇವೆಂಟ್‌ನ್ನು ಸಹ ಅದ್ಧೂರಿಯಾಗಿ ಆಯೋಜಿಸಿದ್ದರು. ಈ ಕಾರ್ಯಕ್ರಮವೊಂದರಲ್ಲಿ ಮುಕೇಶ್ ಅಂಬಾನಿ ತಮ್ಮ ಜೀವನದಲ್ಲಿ ನೀತಾ ಅಂಬಾನಿಯ ಉಪಸ್ಥಿತಿಯನ್ನು ಹೊಗಳಿದರು. 

Read more Photos on
click me!

Recommended Stories