Dosa batter hacks: ದೋಸೆ ಹಿಟ್ಟು ಅತಿಯಾಗಿ ಹುಳಿ ಬಂದುಬಿಟ್ಟಿದ್ಯಾ? ತಿನ್ನೋಕೆ ಆಗ್ತಿಲ್ವಾ? ಹಾಗಂತ ಹಿಟ್ಟನ್ನು ಚೆಲ್ಲೋಕೆ ಹೋಗ್ಬೇಡಿ! ಅಡುಗೆ ಮನೆಯ ಕೆಲವೇ ಸಾಮಗ್ರಿಗಳನ್ನು ಬಳಸಿ, ಹುಳಿಯಾದ ಹಿಟ್ಟಿನಿಂದಲೂ ಹೋಟೆಲ್ ತರಹದ ಸಾಫ್ಟ್ ಮತ್ತು ಗರಿಗರಿ ದೋಸೆ ಮಾಡೋ ಸಿಂಪಲ್ ಟ್ರಿಕ್ಸ್ ಇಲ್ಲಿದೆ ನೋಡಿ..
3 ಅದ್ಭುತ ಕಿಚನ್ ಹ್ಯಾಕ್ಸ್ ಬೇಸಿಗೆಯಾಗಿರಬಹುದು ಅಥವಾ ಹೆಚ್ಚು ಸಮಯ/ದಿನ ಇಟ್ಟಾಗ ದೋಸೆ ಹಿಟ್ಟು ಅತಿಯಾಗಿ ಹುಳಿಯಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಹಿಟ್ಟನ್ನು ವ್ಯರ್ಥವಾಗಿ ಬಿಸಾಡುವ ಬದಲು, ಅದರ ಹುಳಿ ಅಂಶವನ್ನು ಸರಿದೂಗಿಸಿ ರುಚಿಕರವಾದ ದೋಸೆ ತಯಾರಿಸಲು ಇಲ್ಲಿದೆ 3 ಅದ್ಭುತ ಕಿಚನ್ ಹ್ಯಾಕ್ಸ್.
24
ಟ್ರಿಕ್ 1: ಕಾಯಿಸಿ ತಣಿಸಿದ ಹಾಲಿನ ಬಳಕೆ (ಕಡಿಮೆ ಹಿಟ್ಟಿದ್ದರೆ)
ಟ್ರಿಕ್ 1: ಕಾಯಿಸಿ ತಣಿಸಿದ ಹಾಲಿನ ಬಳಕೆ (ಕಡಿಮೆ ಹಿಟ್ಟಿದ್ದರೆ) ನಿಮ್ಮ ಬಳಿ ಇರುವ ಹುಳಿಯಾದ ಹಿಟ್ಟು ಕೇವಲ 250 ಗ್ರಾಂ ನಷ್ಟು (ಸ್ವಲ್ಪ ಪ್ರಮಾಣದಲ್ಲಿ) ಇದ್ದರೆ ಅದಕ್ಕೆ 1/4 ಲೋಟ ಕಾಯಿಸಿ ತಣಿಸಿದ ಹಾಲನ್ನು ನೇರವಾಗಿ ಸೇರಿಸಿ. ರುಚಿಗೆ ತಕ್ಕಷ್ಟು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕಲಸಿ, ತಕ್ಷಣವೇ ದೋಸೆ ಹೊಯ್ಯಬಹುದು. (ಹಾಲು ಹಿಟ್ಟಿನಲ್ಲಿರುವ ಹುಳಿ ಅಂಶವನ್ನು ತಕ್ಷಣ ಕಡಿಮೆ ಮಾಡುತ್ತದೆ).
ಟ್ರಿಕ್ 2: ಅವಲಕ್ಕಿ ಪೇಸ್ಟ್ ಬೆರೆಸುವುದು (ಅರ್ಧ ಕೆಜಿ ಹಿಟ್ಟಿಗೆ) ನಿಮ್ಮ ಬಳಿ ಸುಮಾರು 1/2 ಕೆಜಿ (500 ಗ್ರಾಂ) ಅತಿಯಾಗಿ ಹುಳಿಯಾದ ಹಿಟ್ಟಿದ್ದರೆ ಸುಮಾರು 200 ಗ್ರಾಂ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು, ಸ್ವಲ್ಪ ಹೊತ್ತು ನೆನೆಸಿಡಿ. ನಂತರ ನೆನೆಸಿದ ಅವಲಕ್ಕಿಗೆ ಸ್ವಲ್ಪ ಉಪ್ಪು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ (Smooth paste) ರುಬ್ಬಿಕೊಳ್ಳಿ. ಈ ಅವಲಕ್ಕಿ ಪೇಸ್ಟ್ ಅನ್ನು ಹುಳಿಯಾದ ದೋಸೆ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, 5 ನಿಮಿಷ ಬಿಟ್ಟು ದೋಸೆ ಮಾಡಿ. ದೋಸೆ ಸಾಫ್ಟ್ ಆಗಿ, ಹುಳಿ ಇಲ್ಲದೆ ರುಚಿಯಾಗಿ ಬರುತ್ತದೆ.
ಟ್ರಿಕ್ 3: ನೆನೆಸಿದ ರವೆ ಮತ್ತು ಸಕ್ಕರೆ (ಅವಲಕ್ಕಿ ಇಲ್ಲದಿದ್ದರೆ)
ಟ್ರಿಕ್ 3: ನೆನೆಸಿದ ರವೆ ಮತ್ತು ಸಕ್ಕರೆ (ಅವಲಕ್ಕಿ ಇಲ್ಲದಿದ್ದರೆ) ಅವಲಕ್ಕಿ ಬದಲಿಗೆ ರವೆಯನ್ನು ಕೂಡ ಬಳಸಬಹುದು (ಅರ್ಧ ಕೆಜಿ ಹಿಟ್ಟಿಗೆ). ಸುಮಾರು 200 ಗ್ರಾಂ ರವೆಯನ್ನು ಸ್ವಲ್ಪ ಹೊತ್ತು ನೀರಿನಲ್ಲಿ ನೆನೆಸಿಡಿ.
ಮಿಕ್ಸಿ ಜಾರ್‌ಗೆ ನೆನೆಸಿದ ರವೆ, ಸ್ವಲ್ಪ ಉಪ್ಪು ಮತ್ತು 1/2 ಚಮಚ ಸಕ್ಕರೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಈ ರವೆ ಪೇಸ್ಟ್ ಅನ್ನು ಹುಳಿ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಬೆರೆಸಿ ದೋಸೆ ಮಾಡಿ. ಸಕ್ಕರೆ ಮತ್ತು ರವೆ ಸೇರಿಸುವುದರಿಂದ ದೋಸೆ ಹುಳಿಯಾಗುವುದಿಲ್ಲ, ಜೊತೆಗೆ ಹೋಟೆಲ್ ಶೈಲಿಯ ಗರಿಗರಿ ಕೆಂಪು ಬಣ್ಣ ಬರುತ್ತದೆ!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.