ಉಳಿದ ಇಡ್ಲಿ ಮತ್ತು ದೋಸೆ ಹಿಟ್ಟಿನಿಂದ ರುಚಿಕರವಾದ ವಿಶೇಷ ತಿಂಡಿಗಳನ್ನು ತಯಾರಿಸಬಹುದು. ಹಿಟ್ಟಿಗೆ ತರಕಾರಿ ಮತ್ತು ಮಸಾಲೆಗಳನ್ನು ಸೇರಿಸುವ ಮೂಲಕ ಅದರ ಹುಳಿಯಂಶವನ್ನು ಕಡಿಮೆ ಮಾಡಿ ರುಚಿಯನ್ನು ಹೆಚ್ಚಿಸಬಹುದು.
ಇಡ್ಲಿ ಮತ್ತು ದೋಸೆ ಬ್ಯಾಟರ್‌ನಿಂದ ತಯಾರಿಸಬಹುದಾದ ವಿಶೇಷ ರೆಸಿಪಿ
ಕರ್ನಾಟಕದಲ್ಲಿ ಇಡ್ಲಿ-ದೋಸೆ ಇಲ್ಲಾಂದ್ರೆ ಬೆಳಗಿನ ತಿಂಡಿ ಪೂರ್ಣ ಅಂತನಿಸಲ್ಲ. ಆದ್ರೆ ಕೆಲವೊಮ್ಮೆ ಇಡ್ಲಿ ಮತ್ತು ದೋಸೆ ಮಾಡಲು ತಯಾರಿಸಿದ ಹಿಟ್ಟು ಹೆಚ್ಚು ಉಳಿಯುತ್ತದೆ. ಬೆಳಗ್ಗೆ ಮತ್ತು ಸಂಜೆ ಮತ್ತೆ ಇಡ್ಲಿ, ದೋಸೆ ಮಾಡಿದ್ರೆ ಮಕ್ಕಳು ಸೇರಿದಂತೆ ಮನೆಯಲ್ಲಿರೋ ಎಲ್ಲಾ ಸದಸ್ಯರು ಮೂಗು ಮುರಿಯುತ್ತಾರೆ. ಇಂದು ನಾವು ನಿಮಗೆ ಇಡ್ಲಿ ಮತ್ತು ದೋಸೆ ಬ್ಯಾಟರ್‌ನಿಂದ ತಯಾರಿಸಬಹುದಾದ ವಿಶೇಷ ರೆಸಿಪಿ ಬಗ್ಗೆ ಹೇಳುತ್ತಿದ್ದೇವೆ.
25
ಇಡ್ಲಿಹಿಟ್ಟು: ಪಡ್ಡು
ಇಡ್ಲಿ ಹಿಟ್ಟು ಹುಳಿ ಬಂದಿದ್ರೆ ಮಸಾಲೆ ಪಡ್ಡು ಮಾಡಬಹುದು. ಇಡ್ಲಿ ಬ್ಯಾಟರ್‌ಗೆ ನಿಮ್ಮಿಷ್ಟದ ತರಕಾರಿಗಳನ್ನು (ಕ್ಯಾರಟ್, ಸೌತೆಕಾಯಿ, ಟೊಮೆಟೋ, ಹಸಿಮೆಣಸಿನಕಾಯಿ, ಈರುಳ್ಳಿ) ಸಣ್ಣದಾಗಿ ಕತ್ತರಿಸಿಕೊಂಡು ಸೇರಿಸಿಕೊಳ್ಳಿ. ತರಕಾರಿ ಹೆಚ್ಚು ಸೇರಿಸಿಕೊಳ್ಳೋದರಿಂದ ಇಡ್ಲಿಹಿಟ್ಟಿನಲ್ಲಿರುವ ಹುಳಿಯಂಶ ಕಡಿಮೆಯಾಗುತ್ತದೆ.
35
ಇಡ್ಲಿಹಿಟ್ಟು: ಮಸಾಲೆ ವಡೆ
ಇಡ್ಲಿಹಿಟ್ಟಿಗೆ ನೆನೆಸಿದ ಕಡ್ಲೆಬೇಳೆಯನ್ನು ತರಿತರಿಯಾಗಿ ರುಬ್ಬಿಕೊಂಡು ಸೇರಿಸಿಕೊಳ್ಳಿ. ನಂತರ ಇದಕ್ಕೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕೋತಂಬರಿ ಸೊಪ್ಪು ಮತ್ತು ಕರಿಬೇವು ಸೇರಿಸಿಕೊಳ್ಳಬೇಕು. ಆ ಬಳಿಕ ಓಂಕಾಳು, ಜೀರಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಿ. ಈಗ ಹಿಟ್ಟಿನಿಂದ ಉಂಡೆಗಳನ್ನಾಗಿ ಮಾಡಿಕೊಂಡು ಅಂಗೈಯಲ್ಲಿ ತಟ್ಟಿಕೊಂಡು ಎಣ್ಣೆಯಲ್ಲಿ ಫ್ರೈ ಮಾಡಿಕೊಂಡ್ರೆ ಮಸಾಲೆ ವಡೆಯಲು ಸಿದ್ಧವಾಗುತ್ತದೆ.
ಇನ್ನು ದೋಸೆ ಹಿಟ್ಟನ್ನು ನುಣ್ಣಗೆ ರುಬ್ಬಿಕೊಳ್ಳಲಾಗಿರುತ್ತದೆ. ಈ ದೋಸೆ ಬ್ಯಾಟರ್‌ಗೆ ಒಂದಿಷ್ಠು ಮೈದಾ ಹಿಟ್ಟು, ಸಣ್ಣದಾಗಿ ಕತ್ತರಿಸಿಕೊಂಡಿರುವ ತೆಂಗಿನಕಾಯಿ, ಒಂದೆರಡು ಕಾಳುಮೆಣಸು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಳ್ಳಬೇಕು. ನಂತರ ಗೋಳಿಬಜೆ ಶೈಲಿಯಲ್ಲಿ ಎಣ್ಣೆಯಲ್ಲಿ ಫ್ರೈ ಮಾಡಿಕೊಂಡ್ರೆ ಸಖತ್ ಆಗಿರೋ ಬೋಂಡಾ ಸವಿಯಲು ರೆಡಿಯಾಗುತ್ತದೆ. ಬೇಕಿದ್ರೆ ಸಣ್ಣದಾಗಿ ಕತ್ತರಿಸಿಕೊಂಡಿರುವ ಕೋತಂಬರಿ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ಸಹ ಸೇರಿಸಿಕೊಳ್ಳಬಹುದು.
55
ದೋಸೆ ಹಿಟ್ಟು: ಉತ್ತಪ್ಪ ಅಥವಾ ಅಕ್ಕಿ ರೊಟ್ಟಿ
ದೋಸೆಹಿಟ್ಟು ಹೆಚ್ಚು ಹುಳಿಯಾಗಿದ್ರೆ ಅದಕ್ಕೆ ಒಂದು ಕಪ್‌ನಷ್ಟು ಒಣಅಕ್ಕಿ ಹಿಟ್ಟು ಸೇರಿಸಿಕೊಳ್ಳಿ. ನಂತರ ಇದಕ್ಕೆ ಸಣ್ಣದಾಗಿ ಕತ್ತರಿಸಿರುವ ಕ್ಯಾರಟ್, ಸೌತೆಕಾಯಿ, ಟೊಮೆಟೋ, ಹಸಿಮೆಣಸಿನಕಾಯಿ, ಈರುಳ್ಳಿ, ಕೋತಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿಕೊಂಡು ಉತ್ತಪ್ಪ ಮಾಡಿಕೊಳ್ಳಿ. ಅಕ್ಕಿಹಿಟ್ಟು ಹೆಚ್ಚು ಸೇರಿಸಿಕೊಂಡು ರೊಟ್ಟಿಯಂತೆ ತಟ್ಟಿಕೊಳ್ಳಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.