
ಮನೆಯಲ್ಲಿ ಸಾಮಾನ್ಯವಾಗಿ ಮಹಿಳೆಯರು ಹೆಚ್ಚಿನ ಸಮಯ ಕಳೆಯೋದು ಅಡುಗೆ ಕೋಣೆಯಲ್ಲಿ. ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ಎಂದು ಮನೆಯವರಿಗೆ ಬೇರೆ ಬೇರೆ ತರಹದ ಅಡುಗೆ ಮಾಡಿ ಬಳಸಬೇಕಾಗುತ್ತೆ. ಹಾಗಾಗಿ ಅಡುಗೆ ಮನೆಯಲ್ಲಿ ಕೆಲವೊಂದು ಟ್ರಿಕ್ಸ್ ಗೊತ್ತಿದ್ದರೆ, ಕೆಲಸ ಸುಲಭವಾಗುತ್ತೆ. ಅಡುಗೆ ಮನೆಯಲ್ಲಿ ಪಾತ್ರೆ ನಿರ್ವಹಿಸೋದರಿಂದ ಹಿಡಿದು ಅಡುಗೆಯವರೆಗೆ, ಪ್ರತಿಯೊಬ್ಬ ಮಹಿಳೆಯೂ ತಿಳಿದಿರಬೇಕಾದ ಅನೇಕ ಟಿಪ್ಸ್, ಟ್ರಿಕ್ಸ್ ಮತ್ತು ಹ್ಯಾಕ್ ಗಳಿವೆ. ಇಲ್ಲಿ ಕೆಲವು ಈಸಿ ಕಿಚನ್ ಹ್ಯಾಕ್ಸ್(Kitchen hacks) ಹೇಳಲಾಗಿದೆ. ಇವುಗಳನ್ನು ಫಾಲೋ ಮಾಡೋ ಮೂಲಕ ನಿಮ್ಮ ಕೆಲಸಗಳನ್ನು ಸುಲಭಗೊಳಿಸಿ.
ತೆಂಗಿನಕಾಯಿ ಮನೆಗೆ ತಂದಾಗ, ಅದರ ಸಿಪ್ಪೆ ಹೇಗೆ ಸುಲಿಯುತ್ತೀರಿ? ತೆಂಗಿನಕಾಯಿಯ ದೊಡ್ಡ ಸಮಸ್ಯೆಯೆಂದರೆ ಅದರ ಸಿಪ್ಪೆ ಸುಲಿಯುವುದು, ಯಾಕಂದ್ರೆ ಅದರ ಗಟ್ಟಿಯಾದ ಚಿಪ್ಪನ್ನು ತೆಗೆದು ಹಾಕೋದು ತುಂಬಾ ಕಷ್ಟ. ಹಾಗಾಗಿ ತೆಂಗಿನಕಾಯಿ ಸಿಪ್ಪೆ ಸುಲಿಯುವ ಸುಲಭ ವಿಧಾನ ಇಲ್ಲಿ ತಿಳಿಯೋಣ. ತುಂಬಾ ಕಷ್ಟಪಟ್ಟು ಕೆಲಸ ಮಾಡದೆ ಅಥವಾ ತೊಂದರೆಗೊಳಗಾಗದೆ ತೆಂಗಿನಕಾಯಿಯ ಸಿಪ್ಪೆಯನ್ನು ಹೇಗೆ ಸಿಪ್ಪೆ ಸುಲಿಯಬಹುದು ಎಂದು ತಿಳಿದರೆ, ತೆಂಗಿನಕಾಯಿ ಕೇವಲ 2 ನಿಮಿಷಗಳಲ್ಲಿ ಒಡೆಯಬಹುದು.
ಅದನ್ನು ಓವನ್ ನಲ್ಲಿ ಬಿಸಿ ಮಾಡಿ
ತೆಂಗಿನಕಾಯಿಯನ್ನು ಒಡೆಯಲು ಓವನ್ ಬಳಸಬಹುದು. ಇದಕ್ಕಾಗಿ, ಮೊದಲು ತೆಂಗಿನಕಾಯಿಯನ್ನು ಸ್ವಚ್ಛಗೊಳಿಸಿ. ನಂತರ ಓವನ್ ಅನ್ನು 40 ಡಿಗ್ರಿಗೆ ಪ್ರೀಹೀಟ್ ಮಾಡಿ. ನಂತರ, ತೆಂಗಿನಕಾಯಿಯನ್ನು ಓವನ್ ನಲ್ಲಿ ಇರಿಸಿ ಮತ್ತು ಸುಮಾರು 1 ನಿಮಿಷಗಳ ಕಾಲ ಬಿಡಿ. ನಂತರ, ಓವನ್ ಆಫ್ ಮಾಡಿ ಮತ್ತು ತೆಂಗಿನಕಾಯಿ ಸಿಪ್ಪೆಗಳನ್ನು ಸುಲಭವಾಗಿ ತೆಗೆಯಿರಿ.
ತೆಂಗಿನಕಾಯಿಯನ್ನು ರಾತ್ರಿಯಿಡೀ ಫ್ರಿಜ್ ನಲ್ಲಿಟ್ಟರೆ. ಆಗ ತೆಂಗಿನಕಾಯಿ ಹೆಪ್ಪುಗಟ್ಟುತ್ತೆ, ಅದನ್ನು ಹಗುರವಾಗಿ ಸುತ್ತಿಗೆಯಿಂದ ಹೊಡೆಯಿರಿ. ತೆಂಗಿನಕಾಯಿ ಸುಲಭವಾಗಿ ಒಡೆಯುವುದನ್ನು ನೀವು ಗಮನಿಸುತ್ತೀರಿ.
ತೆಂಗಿನಕಾಯಿಯನ್ನು ಗ್ಯಾಸ್ ಮೇಲೆ ಸುಮಾರು 2 ನಿಮಿಷ ಕಾಲ ಬೇಕ್ ಮಾಡಬೇಕು. ನಂತರ, ತೆಂಗಿನಕಾಯಿ ಸಿಪ್ಪೆಯನ್ನು ಚಾಕುವಿನ ಸಹಾಯದಿಂದ ತೆಗೆಯಿರಿ, ನಂತರ ಅದನ್ನು ಮೇಲಕ್ಕೆ ಚುಚ್ಚುವ ಮೂಲಕ ನೀರನ್ನು ತೆಗೆಯಿರಿ. ನೀರನ್ನು ತೆಗೆದಾದ ಮೇಲೆ ತೆಂಗಿನಕಾಯಿಯನ್ನು ಬಳಸಬಹುದು.
ಅಡುಗೆಮನೆಯಲ್ಲಿ ಅಡುಗೆ ಮಾಡೋವಾಗ ಎಕ್ಸಾಸ್ಟ್ ಫ್ಯಾನ್ ಗೆ ಕೊಳೆ ಅಂಟಿಕೊಳ್ಳುತ್ತದೆ. ಇದನ್ನು ಕ್ಲೀನ್ ಮಾಡೋದು ತುಂಬ ಕಷ್ಟ. ಆದರೆ ಕೇವಲ 1 ವಸ್ತುವಿನ ಸಹಾಯದಿಂದ, ಆಯಿಲ್ ಮತ್ತು ಜಿಗುಟಾದ ಕೊಳೆಯನ್ನು ತೆಗೆದುಹಾಕಬಹುದು.
ಫ್ಯಾನ್ ಸ್ವಚ್ಛಗೊಳಿಸಲು ಅಡುಗೆ ಸೋಡಾ ಮತ್ತು ನಿಂಬೆ ರಸ ಬಳಸಬಹುದು. ಇದು ಬ್ಲೇಡ್ ಗಳನ್ನು ಸ್ವಚ್ಛಗೊಳಿಸುತ್ತೆ, ಇದರಿಂದ ಫ್ಯಾನ್ ಸಹ ಚೆನ್ನಾಗಿ ಕೆಲಸ ಮಾಡುತ್ತೆ .
ಏನು ಮಾಡಬೇಕು?
ಅದನ್ನು ಬಳಸಲು ಒಂದು ಬಟ್ಟಲನ್ನು ತೆಗೆದುಕೊಳ್ಳಿ. ನಂತರ ಅದಕ್ಕೆ ಬಿಸಿ ನೀರನ್ನು ಸೇರಿಸಿ ಮತ್ತು 1 ಟೀಸ್ಪೂನ್ ನಿಂಬೆ ರಸ, 1 ಟೀಸ್ಪೂನ್ ಅಡುಗೆ ಸೋಡಾ ಸೇರಿಸಿ.
ಈಗ ಫ್ಯಾನ್ ಮೆಶ್ ಮತ್ತು ಬ್ಲೇಡ್ ಅದರಲ್ಲಿ ಇರಿಸಿ ಮತ್ತು ಅದರಲ್ಲಿ ಕೆಲವು ನಿಮಿಷಗಳ ಕಾಲ ಬಿಡಿ. ನಂತರ ಬೌಲ್ ನಿಂದ ತೆಗೆದು ಬಟ್ಟೆಯಿಂದ ಸ್ವಚ್ಛಗೊಳಿಸಿ.
ಅಲ್ಲದೆ, ಫ್ಯಾನ್ ನ ಸುತ್ತಲಿನ ಜಾಗವನ್ನು ಕೈಯಿಂದ ಸ್ವಚ್ಛಗೊಳಿಸಿ.
ಜಾಮ್ ಆಗಿರುವ ಎಕ್ಸಾಸ್ಟ್ ಫ್ಯಾನ್ ಸ್ವಚ್ಛಗೊಳಿಸಲು ನೀವು ಎನೊ ಮತ್ತು ನಿಂಬೆ ಬಳಸಬಹುದು. ಇದು ನಿಮ್ಮ ಫ್ಯಾನ್ ನ ಬ್ಲೇಡ್ ಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತೆ.
ಏನು ಮಾಡಬೇಕು?
ಇದಕ್ಕಾಗಿ, ಒಂದು ಬೌಲ್ ನಲ್ಲಿ ಬಿಸಿ ನೀರು ತೆಗೆದುಕೊಳ್ಳಿ. ನಂತರ, ಬ್ಲೇಡ್ ಅದರಲ್ಲಿ ಹಾಕಿ ಮತ್ತು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಬಿಡಿ. 15 ನಿಮಿಷಗಳ ನಂತರ, ಫ್ಯಾನ್ ಬ್ಲೇಡ್ ಸಂಪೂರ್ಣವಾಗಿ ಸ್ವಚ್ಛವಾಗಿರೋದನ್ನು ನೋಡಬಹುದು.ಇದರ ನಂತರವೂ, ಬ್ಲೇಡ್ ಮೇಲೆ ಎಣ್ಣೆ ಇದ್ದರೆ, ಅದನ್ನು ಜಾಗರೂಕತೆಯಿಂದ ಸ್ವಚ್ಛಗೊಳಿಸಲು ಚಾಕು ಬಳಸಿ.
ಎಕ್ಸಾಸ್ಟ್ ಫ್ಯಾನ್ ನಲ್ಲಿ ಧೂಳು ಸಂಗ್ರಹವಾಗಿದ್ದರೆ, ಅದನ್ನು ನಿಂಬೆ ಮತ್ತು ಉಪ್ಪಿನ ಸಹಾಯದಿಂದ ಸ್ವಚ್ಛಗೊಳಿಸಬಹುದು.
ಏನು ಮಾಡಬೇಕು?
ಒಂದು ಬೌಲ್ ನಲ್ಲಿ ಅರ್ಧ ಟೀಚಮಚ ಉಪ್ಪು ಮತ್ತು ಒಂದು ನಿಂಬೆ ರಸ ಹಾಕಿ. ನಂತರ ಅದಕ್ಕೆ ಬಿಸಿ ನೀರು ಸೇರಿಸಿ ಮತ್ತು ಫ್ಯಾನ್ ಬ್ಲೇಡ್ ಹಾಕಿ.
ಬ್ಲೇಡ್ ಅನ್ನು 10 ನಿಮಿಷಗಳ ಕಾಲ ಹೀಗೆ ಬಿಡಿ, ಇದರಿಂದ ಅದರ ಮೇಲಿರುವ ಎಲ್ಲಾ ಕೊಳೆ ಸ್ವಚ್ಛಗೊಳ್ಳುತ್ತೆ. ನಂತರ, ಬಟ್ಟೆಯಿಂದ ಸ್ವಚ್ಛಗೊಳಿಸಿ.
ಎಲ್ಲಾ ತರಕಾರಿ ಸಿಪ್ಪೆಯನ್ನು100% ಕಸದ ಬುಟ್ಟಿಗೆ ಎಸೆಯುತ್ತೀರಿ. ಆದರೆ ಸೋರೆಕಾಯಿ ಸಿಪ್ಪೆ ಹೇಗೆ ಬಳಸಬೇಕೆಂದು ಇಲ್ಲಿ ಓದಿ ತಿಳಿಯಿರಿ. ಸೋರೆಕಾಯಿ ಸಿಪ್ಪೆಯಿಂದ ರುಚಿಕರವಾದ ಪಲ್ಯ, ಪಕೋಡ(Pakoda) ಮತ್ತು ಚಟ್ನಿ ತಯಾರಿಸಬಹುದು. ಹಾಗಾಗಿ ಇನ್ನು ಮುಂದೆ ಸೋರೆಕಾಯಿ ಸಿಪ್ಪೆ ಎಂದಿಗೂ ಎಸೆಯಬೇಡಿ.
ಗ್ರೇವಿಯನ್ನು ದಪ್ಪಗೊಳಿಸಲು ಈರುಳ್ಳಿ ಬದಲಿಗೆ ಏನನ್ನು ಹಾಕಬಹುದು, ಇದರಿಂದ ರುಚಿಯೂ ಬರುತ್ತೆ ಮತ್ತು ಟೇಸ್ಟ್ ಹದಗೆಡೋದಿಲ್ಲ.
ಗ್ರೇವಿಯನ್ನು ಮೊಸರು ಮತ್ತು ತಾಜಾ ಕ್ರೀಮ್ ನೊಂದಿಗೆ ದಪ್ಪಗೊಳಿಸಬಹುದು
ಮೊಸರು ಮತ್ತು ಕೆನೆ ಗ್ರೇವಿಯನ್ನು ದಪ್ಪಗೊಳಿಸುವುದಲ್ಲದೆ, ಅದಕ್ಕೆ ಉತ್ತಮ ರುಚಿ ತರುತ್ತೆ. ನೀವು ಮಾಡಬೇಕಾಗಿರುವುದು 3 ಟೀಸ್ಪೂನ್ ಮೊಸರು ಮತ್ತು 2 ಟೀಸ್ಪೂನ್ ತಾಜಾ ಕ್ರೀಮ್ ಮಿಕ್ಸ್ ಮಾಡಿ ಮತ್ತು ಚೆನ್ನಾಗಿ ಬೀಟ್ ಮಾಡಿ. ಗ್ಯಾಸ್ ಅನ್ನು ಕಡಿಮೆ ಉರಿಯಲ್ಲಿ ಇರಿಸಿ ಮತ್ತು ನಿಧಾನವಾಗಿ ಮೊಸರು ಮತ್ತು ಕೆನೆ ಸೇರಿಸಿ ಮತ್ತು 2-3 ನಿಮಿಷಗಳ ಕಾಲ ಚೆನ್ನಾಗಿ ಬೇಯಿಸಿ.
ಈರುಳ್ಳಿ ಇಲ್ಲದೆ ಗ್ರೇವಿಯನ್ನು ದಪ್ಪಗೊಳಿಸಲು, ಮೊದಲು ಬಾಣಲೆಯಲ್ಲಿ ಟೊಮೆಟೊ ಬೇಯಿಸಿದ ನಂತರ ಗೋಡಂಬಿ ಪೇಸ್ಟ್ ಸೇರಿಸಿ. ಗ್ರೇವಿ ರುಚಿ ಹೆಚ್ಚಿಸಲು, ಮೊದಲು ಗೋಡಂಬಿಯನ್ನು ಸ್ವಲ್ಪ ತುಪ್ಪದಲ್ಲಿ ಹುರಿದು ನಂತರ ಅದರ ಪೇಸ್ಟ್ ತಯಾರಿಸಿ ಗ್ರೇವಿಯಲ್ಲಿ ಹಾಕಿ. ಇದರಿಂದ ಗ್ರೇವಿ ದಪ್ಪ ಆಗೋದ್ರ ಜೊತೆ ಟೇಸ್ಟಿ ಕೂಡ ಆಗುತ್ತೆ.
ಕಡಲೆಕಾಯಿಯೊಂದಿಗೆ ಗ್ರೇವಿ ದಪ್ಪಗೊಳಿಸಿ
ಗ್ರೇವಿಯನ್ನು ದಪ್ಪಗೊಳಿಸಲು 2 ಟೀಸ್ಪೂನ್ ಹಿಟ್ಟನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಸ್ವಲ್ಪ ನೀರು ಹಾಕಿ ಪೇಸ್ಟ್ ತಯಾರಿಸಿ. ಸಿಪ್ಪೆ ಸುಲಿದ ಹಸಿ ಕಡಲೆಕಾಯಿಯನ್ನು ಒಣಗಿಸಿ ಮತ್ತು ಪೇಸ್ಟ್ ತಯಾರಿಸಿ. ಈಗ ಕಡಲೆಕಾಯಿಗೆ ಹಿಟ್ಟಿನ ಪೇಸ್ಟ್ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ. ಈಗ ನೀವು ಯಾವ ಗ್ರೇವಿ ತಯಾರಿಸಲು ಬಯಸುತ್ತೀರೋ, ನಿಧಾನವಾಗಿ ಅದಕ್ಕೆ ಸೇರಿಸಿ ಮತ್ತು ಚೆನ್ನಾಗಿ ಬೇಯಿಸಿ. ಇದು ನಿಮ್ಮ ಗ್ರೇವಿಯನ್ನು ದಪ್ಪವಾಗಿಸುತ್ತೆ.
ಮಳೆಗಾಲದಲ್ಲಿ, ಅಕ್ಕಿ, ರವೆಯಂತಹ ವಸ್ತುಗಳಲ್ಲಿ ಸಣ್ಣ ಕೀಟಗಳು ಕಂಡುಬರುತ್ತವೆ. ಅಡುಗೆಮನೆಯಲ್ಲಿ ಹೆಚ್ಚಿನ ತೇವಾಂಶದ ಕಾರಣ, ಕೀಟಗಳು ವಸ್ತುವಿನ ಮೇಲೆ ಕಂಡುಬರುತ್ತವೆ. ಅವುಗಳನ್ನು ತೆಗೆದುಹಾಕಲು ನೀವೇನು ಮಾಡಬೇಕು ನೋಡಿ,
ಲವಂಗ (Clove)ವನ್ನು ರವೆಯಲ್ಲಿ ಹಾಕಿ. ಇದು ಕೀಟಗಳು ಬಹಳ ಬೇಗನೆ ಓಡಿಹೋಗಲು ಕಾರಣವಾಗುತ್ತೆ. ದಾಲ್ಚಿನ್ನಿಯ ಕಡ್ಡಿ ಸಹ ಇಟ್ಟುಕೊಳ್ಳಬಹುದು, ಆದರೆ ರವೆಯಲ್ಲಿ ದಾಲ್ಚಿನ್ನಿ ವಾಸನೆಯ ಬರಬಹುದು. ರವೆಯಿಂದ ಬಿಳಿ ಹುಳುಗಳನ್ನು ತೆಗೆದು ಹಾಕಲು ದೊಡ್ಡ ಏಲಕ್ಕಿಯನ್ನು ಸಹ ಬಳಸಬಹುದು. ಸೋಂಪು ಅಥವಾ ದೊಡ್ಡ ಏಲಕ್ಕಿ ಇಡೋದರಿಂದ ಕೀಟಗಳು ಬರೋದಿಲ್ಲ.
ಬೇ ಎಲೆ (Bay leaves) ಕಚ್ಚಾ ಅಕ್ಕಿ ಮತ್ತು ಕಡಲೆ ಹಿಟ್ಟು ಎರಡಕ್ಕೂ ಹೆಚ್ಚು ಉಪಯುಕ್ತ. ಎರಡು ಅಥವಾ ನಾಲ್ಕು ಬೇ ಲೀವ್ ಹಾಕೋದ್ರಿಂದ, ಕೀಟಗಳು ಓಡಿಹೋಗುತ್ತವೆ ಮತ್ತು ಹೊಸ ಕೀಟಗಳು ಬರೋದಿಲ್ಲ. ಕಡಲೆ ಹಿಟ್ಟಿನಲ್ಲಿ ಕೀಟಗಳ ಸಮಸ್ಯೆ ಇದ್ದರೆ, ಹತ್ತಿ ಬಟ್ಟೆಯಲ್ಲಿ ಸ್ವಲ್ಪ ಲವಂಗ ಮತ್ತು ಸ್ವಲ್ಪ ಕರಿಮೆಣಸನ್ನು ಕಟ್ಟಿ ಅದರಲ್ಲಿ ಹಾಕಿ. ಕೀಟಗಳು ಓಡಿಹೋಗಬಹುದು.
ನಿಂಬೆ ರಸ ಮತ್ತು ಅಡುಗೆ ಸೋಡಾ
ಕಿಚನ್ ಸಿಂಕ್ ಅನ್ಬ್ಲಾಕ್ ಮಾಡಲು ಒಂದು ಕಪ್ ಬಿಸಿ ನೀರಿಗೆ 1-2 ಟೀಸ್ಪೂನ್ ಅಡುಗೆ ಸೋಡಾ ಮತ್ತು ನಿಂಬೆ ರಸವನ್ನು ಮಿಶ್ರಣ ಮಾಡಿ. ಈ ಮಿಶ್ರಣವನ್ನು ಕೆಲವು ನಿಮಿಷಗಳ ಕಾಲ ಸಿಂಕ್ ನಲ್ಲಿ ಇರಲು ಬಿಡಿ. ನಂತರ ಅದನ್ನು ಶುದ್ಧ ನೀರಿನಿಂದ ತೊಳೆದು, ಸ್ವಚ್ಛವಾದ ಬಟ್ಟೆಯಿಂದ ಸ್ವಚ್ಛಗೊಳಿಸಿ.
ನಿಂಬೆ ರಸ ಮತ್ತು ಎನೊ ಸಹಾಯದಿಂದ ನೀವು ಕಿಚನ್ ಸಿಂಕ್ ಅನ್ನು ಸಹ ಸ್ವಚ್ಛಗೊಳಿಸಬಹುದು. ಇದು ಸಿಂಕ್ ಸ್ವಚ್ಛಗೊಳಿಸೋದು ಮಾತ್ರವಲ್ಲದೆ ಅದರಲ್ಲಿ ಸಂಗ್ರಹವಾದ ಕೊಳೆಯನ್ನು ಸಹ ಸ್ವಚ್ಛಗೊಳಿಸುತ್ತೆ .
ಒಂದು ಬೌಲ್ ನಲ್ಲಿ ನಿಂಬೆ ರಸ, ಇನೊವನ್ನು ಸೇರಿಸಿ.
ಸುಮಾರು 15 ನಿಮಿಷಗಳ ಕಾಲ ಹಾಗೆ ಬಿಡಿ.
ನಂತರ ಸಿಂಕ್ ಸುತ್ತಲೂ ನಿಂಬೆ ಮತ್ತು ಎನೊ ಮಿಶ್ರಣವನ್ನು ಸೇರಿಸಿ.
ಈಗ ಅದನ್ನು ಸ್ಪಾಂಜ್ ನಿಂದ ಉಜ್ಜಿ ಮತ್ತು ಸ್ವಚ್ಛವಾದ ನೀರಿನಿಂದ ತೊಳೆಯಿರಿ.
ಪ್ರತಿದಿನ ಸಿಂಕ್ ಅನ್ನು ಈ ರೀತಿ ಸ್ವಚ್ಛಗೊಳಿಸಿದರೆ, ಸಿಂಕ್ ಎಂದಿಗೂ ಬ್ಲಾಕ್ ಆಗೋಲ್ಲ .
ನೀವು ಬೇಗ ಅಡುಗೆ ಮಾಡಲು ಬಯಸೋದಾದ್ರೆ, ಅದಕ್ಕಾಗಿ ನೀವು ಕೆಲವು ತಂತ್ರಗಳನ್ನು ತಿಳಿದಿರಬೇಕು. ಪ್ರೆಶರ್ ಕುಕ್ಕರ್ ಸಹಾಯದಿಂದ ನೀವು ತ್ವರಿತವಾಗಿ ಅಡುಗೆ ಮಾಡಲು ಸಾಧ್ಯ. ಪ್ರೆಶರ್ ಕುಕ್ಕರ್‌ಗಳನ್ನು ನಮ್ಮೆಲ್ಲರ ಮನೆಗಳಲ್ಲಿ ಬಳಸಲಾಗುತ್ತೆ ಮತ್ತು ಅದರಲ್ಲಿ ಅಕ್ಕಿ, ಬೇಳೆ ಅಥವಾ ಇತರ ಯಾವುದೇ ತರಕಾರಿಯನ್ನು ಬೇಯಿಸೋದು ಸಹ ಸುಲಭ.
ಗ್ಯಾಸ್ ಸಿಲಿಂಡರ್ ಗಳು ಎಷ್ಟು ದುಬಾರಿಯಾಗಿವೆಯೆಂದರೆ ನಾವು ಅದನ್ನು ತುಂಬಾ ಜಾಗರೂಕತೆಯಿಂದ ಬಳಸಬೇಕು. ಹಾಗಾಗಿ ಓವೆನ್ ಅನ್ನು ಹೆಚ್ಚು ಉಪಯೋಗಿಸೋದು, ತರಕಾರಿಯನ್ನು ಮೊದಲೇ ಬೇಯಿಸಿ ನಂತರ ಅಡುಗೆ ಮಾಡೋದು, ಅಡುಗೆ ಮಾಡೋವಾಗ ಮುಚ್ಚಿ ಬೇಯಿಸೋದು, ತವಾ ಯೂಸ್ ಮಾಡೋದು, ತರಕಾರಿಯನ್ನು ರೂಮ್ ಟೆಂಪರೇಚರ್ ಗೆ ತಂದ ನಂತ್ರ ಅಡುಗೆಗೆ ಉಪಯೋಗಿಸೋದು, ಪ್ರೆಶರ್ ಕುಕ್ಕರ್ ಹೆಚ್ಚು ಉಪಯೋಗಿಸೋದು - ಈ ಅಡುಗೆ ಹ್ಯಾಕ್ ಗಳಿಂದ ಎಲ್ಪಿಜಿ ಗ್ಯಾಸ್ ಉಳಿಸಿ, ಸಿಲಿಂಡರ್ ಒಂದು ತಿಂಗಳವರೆಗೆ ಉಳಿಯುವಂತೆ ಮಾಡಬಹುದು.