Curd Tips: ಒಂದೊಂದು ಕಡೆ ಒಂದೊಂದು ರೀತಿಯ ಪದ್ಧತಿ ಇರುತ್ತವೆ. ಇದರ ಹಿಂದೆ ಒಂದಿಷ್ಟು ವೈಜ್ಞಾನಿಕ ವಿಷಯಗಳೂ ಅಡಗಿದ್ದರೂ ಕೂಡ, ಕೆಲವೊಮ್ಮೆ ಗೊತ್ತಾಗಲ್ಲ. ಹಾಲು ಹೆಪ್ಪು ಹಾಕುವಾಗ, ಮೊಸರು ಗಟ್ಟಿಯಾಗಬೇಕು ಎಂದು ಬಯಸ್ತೀವಿ. ಈಗ ಮೊಸರು ಗಟ್ಟಿ ಆಗಲು ಬಾಳೆ ಎಲೆ ಚೂರು ಸಹಾಯ ಮಾಡುತ್ತೆ ಅಂದ್ರೆ ನಂಬ್ತೀರಾ?
ಶಿರಸಿ ಮೂಲದ ರವಿಚಂದ್ರ ಹೆಗಡೆ ಅವರು ಸೋಶಿಯಲ್ ಮೀಡಿಯಾದಲ್ಲಿ ಜನ್ನೆ ಮೊಸರಿನ ಬಗ್ಗೆ ವಿಶೇಷವಾದ ಪೋಸ್ಟ್ ಹಂಚಿಕೊಂಡಿದ್ದಾರೆ.
ರವಿಚಂದ್ರ ಹೆಗಡೆ ಏನು ಹೇಳಿದ್ರು?
"ಜನ್ನೆ ಮೊಸರು"!!.. ಬಾಳೆಎಲೆಯ ಚಿಕ್ಕ ಚೂರು ಒಂದನ್ನು ಹಾಲು ಹೆಪ್ಪು ಹಾಕುವ ಸಮಯದಲ್ಲಿ ಹೆಚ್ಚುವರಿಯಾಗಿ ಉಪಯೋಗಿಸಿದರೆ ಮಾರನೆಯ ದಿನ ಅತ್ಯುತ್ತಮ ರುಚಿಯ ಗಟ್ಟಿ ಮೊಸರು ದೊರಕುತ್ತದೆ.!
24
ಒಂದು ದಿನ ಮೊಸರು ಕಡೆಯೋದಿಲ್ಲ
ಹಾಗೆ ಮನೆಯಲ್ಲೇ ಆಕಳು ಇದ್ದು ಹಾಲನ್ನು ಕರೆಯುವವರು ವಾರದಲ್ಲಿ ಒಂದು ದಿನ ಅಷ್ಟೂ ಮೊಸರನ್ನು ದೇವರಿಗೆ ನೈವೇದ್ಯ ಮಾಡಿ ಹಾಗೆ ಉಪಯೋಗಿಸುತ್ತಾರೆ. ಅದೊಂದು ದಿನ ಮೊಸರನ್ನು ಕಡೆದು ಮಜ್ಜಿಗೆ ಮಾಡುವುದಿಲ್ಲ. ಇದಕ್ಕೆ ನಾವು "ಜನ್ನೇ ಬಿಡುವುದು" ಎಂದು ಕರೆಯುತ್ತೇವೆ. ಈ ರೀತಿಯ ಸಂಪೂರ್ಣ ಮೊಸರು ಉಪಯೋಗಿಸುವ ದಿನದಲ್ಲಂತೂ ಈ ಬಾಳೆ ಎಲೆಯ ಚಿಕ್ಕ ಚೂರನ್ನ ಬಳಸಿ ಅತ್ಯುತ್ತಮ ರುಚಿಯ ಗಟ್ಟಿಯ ಮೊಸರನ್ನು ಮಾಡಿಕೊಂಡಿರುತ್ತೇವೆ ಎಂದು ರವಿಚಂದ್ರ ಹೆಗಡೆ ಹೇಳುತ್ತಾರೆ.
34
ಎಲ್ಲ ಕಡೆ ಈ ಪದ್ಧತಿ ಇಲ್ಲ!
ಈ ಸಂಪ್ರದಾಯ ಇರುವ ಮನೆಯವರು ಪ್ರತಿ ಶನಿವಾರ ಅಥವಾ ಸೋಮವಾರ ದಿನದಂದು ಈ ಜನ್ನೇಮೊಸರು ಮಾಡುತ್ತಾರೆ.! ಈ ಸಂಪ್ರದಾಯ ಎಲ್ಲೆಲ್ಲಿ ಚಾಲ್ತಿ ಇದೆಯೋ ಗೊತ್ತಿಲ್ಲ, ಮಲೆನಾಡಿನಲ್ಲಿ ಬಹಳ ಮುಂಚಿನಿಂದಲೂ ಇದೊಂದು ಪದ್ಧತಿ ನಡೆದುಕೊಂಡು ಬರುತ್ತಿದೆ ಎಂದು ರವಿಚಂದ್ರ ಹೆಗಡೆ ಹೇಳಿದ್ದಾರೆ.
ಹಾಲು ಹೆಪ್ಪು ಹಾಕುವಾಗ ಬಾಳೆ ಎಲೆಯ ಸಣ್ಣ ಚೂರನ್ನು ಅದಕ್ಕೆ ಹಾಕುವುದರಿಂದ ಗಟ್ಟಿ ಮತ್ತು ರುಚಿಕರವಾದ ಮೊಸರು ಸಿಗುವುದು. ಇದು ಹಾಲನ್ನು ಚೆನ್ನಾಗಿ ಹೆಪ್ಪುಗಟ್ಟಿಸಲು ಮತ್ತು ಮೊಸರಿಗೆ ವಿಶಿಷ್ಟ ಸುವಾಸನೆ ನೀಡುವುದು, ಬಾಳೆ ಎಲೆಯಲ್ಲಿನ ಅಂಶಗಳು ಹಾಲನ್ನು ಗಟ್ಟಿಯಾಗಿಸಲು ಸಹಾಯ ಮಾಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.