ಸರಿಯಾದ ಪ್ರಮಾಣದಲ್ಲಿ ಪದಾರ್ಥಗಳನ್ನು ಬಳಸಿಕೊಂಡು ಹಿಟ್ಟು ತಯಾರಿಸಿದರೂ ಕೆಲವೊಮ್ಮೆ ಇಡ್ಲಿ ಗಟ್ಟಿಯಾಗುತ್ತದೆ. ಇಡ್ಲಿಯ ಮೃದುತ್ವವು ಕೇವಲ ಹಿಟ್ಟನ್ನಷ್ಟೇ ಅಲ್ಲ, ನಾವು ಬಳಸುವ ಪಾತ್ರೆಯ ಪ್ಲೇಟ್‌ಗಳನ್ನು ಜೋಡಿಸುವ ವಿಧಾನವನ್ನೂ ಅವಲಂಬಿಸಿರುತ್ತದೆ.
ಕೆಲವೊಮ್ಮೆ ಕ್ರಮಬದ್ಧ, ಸರಿಯಾದ ಪ್ರಮಾಣದಲ್ಲಿ ಎಲ್ಲಾ ಪದಾರ್ಥ ಸೇರಿಸಿಕೊಂಡು ಮಾಡಿದ್ರೂ ಕೆಲವೊಮ್ಮೆ ಇಡ್ಲಿ ಗಟ್ಟಿಯಾಗುತ್ತದೆ. ಇಡ್ಲಿ ಬ್ಯಾಟರ್ ಸರಿಯಾಗಿ ಮಾಡಿಕೊಂಡ್ರೂ ಮಲ್ಲಿಗೆಯಂತೆ ಸಾಫ್ಟ್ ಆಗಲ್ಲ. ಇದಕ್ಕೆ ನಾವು ಮಾಡುವ ತಪ್ಪೇ ಕಾರಣವಾಗಿರುತ್ತದೆ.
25
ಇಡ್ಲಿಯ ಮೃದುತ್ವ
ಇಡ್ಲಿ ಹಿಟ್ಟು ಮಾಡಿಕೊಳ್ಳೋದು ಎಷ್ಟು ಮುಖ್ಯವೋ? ಮಾಡುವ ವಿಧಾನವೂ ಸಹ ಅಷ್ಟೇ ಮುಖ್ಯವಾಗುತ್ತದೆ. ಇದರ ಜೊತೆಯಲ್ಲಿ ಯಾವ ತರಹದ ಪಾತ್ರೆ ಬಳಸುತ್ತೇವೆ ಎಂಬುದರ ಮೇಲೆಯೂ ಇಡ್ಲಿಯ ಮೃದುತ್ವ ನಿರ್ಧಾರವಾಗುತ್ತದೆ.
35
ಇಡ್ಲಿ ಪಾತ್ರೆ
ಸಾಮಾನ್ಯವಾಗಿ ಇಡ್ಲಿ ಪಾತ್ರೆಯಲ್ಲಿ ನಾಲ್ಕರಿಂದ ಐದು ಪ್ಲೇಟ್‌ಗಳಿರುತ್ತವೆ. ಈ ಪ್ಲೇಟ್ ಅಂಚಿನಲ್ಲಿ ನಿಮಗೆ ಸಣ್ಣ ರಂಧ್ರಗಳಿರುತ್ತವೆ. ಈ ರಂಧ್ರಗಳನ್ನು ಸರಿಯಾಗಿ ಜೋಡಿಸಿಕೊಂಡು ಪ್ಲೇಟ್‌ಗಳನ್ನು ಒಂದರ ಮೇಲೊಂದರಂತೆ ಜೋಡಿಸಿಕೊಳ್ಳಬೇಕು. ಯಾವ ರೀತಿ ಜೋಡಣೆ ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.
ಪ್ಲೇಟ್‌ನಲ್ಲಿ ಇಡ್ಲಿಹಿಟ್ಟು ಹಾಕಿಕೊಳ್ಳಿ. ಪ್ಲೇಟ್‌ನಲ್ಲಿರುವ ರಂಧ್ರಗಳು ಒಂದರ ಮೇಲೆ ಬರದಂತೆ ನೋಡಿಕೊಳ್ಳಬೇಕು. ಈ ರಂಧ್ರದ ಮೂಲಕವೇ ಕೆಳಗಿನ ಹಬೆ ಮೇಲಿನ ಪ್ಲೇಟ್‌ನವರೆಗೆ ಬರುತ್ತದೆ. ಇಡ್ಲಿಹಿಟ್ಟಿನ ಮೇಲೆ ರಂಧ್ರ ಬರುವಂತೆ ಸೆಟ್ ಮಾಡಿಕೊಳ್ಳಬೇಕು.
ಈ ರೀತಿಯಾಗಿ ಕ್ರಮಬದ್ಧವಾಗಿ ಪ್ಲೇಟ್ ಜೋಡಣೆ ಮಾಡಿಕೊಂಡ್ರೆ ಇಡ್ಲಿ ಮೃದುವಾಗುತ್ತದೆ. ಹಾಗೆಯೇ ಇಡ್ಲಿ ಪ್ಲೇಟ್‌ಗಳಿಗೂ ಅಂಟಿಕೊಳ್ಳಲ್ಲ. ಕಡಿಮೆ ಉರಿಯಲ್ಲಿಯೇ ಇಡ್ಲಿಯನ್ನು ಬೇಯಿಸಿಕೊಳ್ಳಬೇಕು. ಫ್ಲೇಮ್ ಹೆಚ್ಚು ಮಾಡಿದ್ರೆ ಇಡ್ಲಿ ಹಸಿಬಿಸಿಯಾಗುತ್ತದೆ. ಇಡ್ಲಿ ಪ್ಲೇಟ್ ಹೇಗೆ ಸೆಟ್ ಮಾಡಬೇಕು ಎಂಬುದನ್ನು ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.