ಒಂದು ಚಿಟಿಕೆ ಇದನ್ನು ಬೆರೆಸಿ ನೋಡಿ.. ರಾತ್ರಿಯೆಲ್ಲಾ ಕಾಯಬೇಕಿಲ್ಲ, 1-2 ಗಂಟೆಯಲ್ಲೇ ದೋಸೆ-ಇಡ್ಲಿ ಹಿಟ್ಟು ರೆಡಿ

Published : Aug 22, 2026, 04:13 PM IST

Dosa batter fermentation hacks: ದೋಸೆ ಹಿಟ್ಟು ಹುಳಿ ಬರಲು ಇನ್ನು ಗಂಟೆಗಟ್ಟಲೆ ಕಾಯಬೇಕಿಲ್ಲ! ಬೇಗನೆ ಹುಳಿ ಬರಿಸಲು ಇಲ್ಲಿವೆ ಅದ್ಭುತ ಕಿಚನ್ ಟಿಪ್ಸ್. ಅವಸರದಲ್ಲಿರುವವರಿಗೆ ಈ ಸಿಂಪಲ್ ಟ್ರಿಕ್ಸ್ ವರದಾನವಾಗಲಿದೆ.

PREV
16
ಬೇಗನೆ ದೋಸೆ ಬೇಕೆಂದಾಗ...

ಬೇಗನೆ ದೋಸೆ ಬೇಕೆಂದಾಗ…
ನಮ್ಮ ದಕ್ಷಿಣ ಭಾರತದಲ್ಲಿ ಇಡ್ಲಿ ಮತ್ತು ದೋಸೆ ಎಂದರೆ ಎಲ್ಲರಿಗೂ ಇಷ್ಟವಾದ ಉಪಾಹಾರ. ಆದರೆ ಇವುಗಳನ್ನು ಮಾಡಲು ಅಕ್ಕಿ-ಬೇಳೆಯನ್ನು ನೆನೆಸಿ, ಹಿಟ್ಟು ರುಬ್ಬಿ, ಅದು ಹುಳಿ ಬರಲು ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಇಂದಿನ ಅವಸರದ ಜೀವನದಲ್ಲಿ ಇಷ್ಟೊಂದು ಸಮಯ ಕಾಯುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಅಂತಹವರಿಗಾಗಿ ದೋಸೆ ಹಿಟ್ಟನ್ನು ಬೇಗನೆ ಸಿದ್ಧಪಡಿಸಲು ಕೆಲವು ಸುಲಭ ಉಪಾಯಗಳು ಇಲ್ಲಿವೆ.

ಸಾಮಾನ್ಯವಾಗಿ ದೋಸೆ ಹಿಟ್ಟು ರುಬ್ಬಿದ ನಂತರ 6-7 ಗಂಟೆಗಳ ಕಾಲ ಇಟ್ಟರೆ ಅದು ನೈಸರ್ಗಿಕವಾಗಿ ಹುಳಿ ಬರುತ್ತದೆ. ಆದರೆ ನಿಮಗೆ ತುರ್ತಾಗಿ ದೋಸೆ ಬೇಕೆಂದಾಗ ಈ ಕೆಳಗಿನ ಟ್ರಿಕ್ಸ್ ಬಳಸಬಹುದು…

26
ಬೆಚ್ಚಗಿನ ವಾತಾವರಣ

ಬೆಚ್ಚಗಿನ ವಾತಾವರಣ
ದೋಸೆ ಹಿಟ್ಟು ಬೇಗನೆ ಹುದುಗಲು (Ferment) ಶಾಖದ ಅಗತ್ಯವಿರುತ್ತದೆ. ನೀವು ಹಿಟ್ಟು ರುಬ್ಬಿದ ನಂತರ ಆ ಪಾತ್ರೆಯನ್ನು ಗ್ಯಾಸ್ ಸ್ಟವ್ ಪಕ್ಕದಲ್ಲಿ ಅಥವಾ ಮೈಕ್ರೋವೇವ್ ಓವನ್ ಒಳಗಡೆ ಇಡಿ. (ಓವನ್ ಆನ್ ಮಾಡುವ ಅಗತ್ಯವಿಲ್ಲ, ಅದರ ಒಳಗಿನ ಮುಚ್ಚಿದ ವಾತಾವರಣವೇ ಸಾಕು). ಇದರಿಂದ ಹಿಟ್ಟು ಕೆಲವೇ ಸಮಯದಲ್ಲಿ ಹುಳಿ ಬರುತ್ತದೆ.

ನೀವು ಹಾಲನ್ನು ಕಾಯಿಸುತ್ತಿರುವಾಗ ಅಥವಾ ಏನಾದರೂ ಅಡುಗೆ ಮಾಡುತ್ತಿರುವಾಗ ಅದರ ಪಕ್ಕದಲ್ಲಿ ಹಿಟ್ಟಿನ ಪಾತ್ರೆಯನ್ನು ಇಡಿ. ಗ್ಯಾಸ್ ಸ್ಟವ್ ಸುತ್ತಮುತ್ತಲಿನ ವಾತಾವರಣವು ಬೆಚ್ಚಗಿರುತ್ತದೆ. ಈ ಶಾಖವು ಹಿಟ್ಟಿನ ಪಾತ್ರೆಗೆ ತಗುಲಿದಾಗ, ಬ್ಯಾಕ್ಟೀರಿಯಾಗಳು ಚಟುವಟಿಕೆಯಿಂದ ಕೆಲಸ ಮಾಡಿ ಹಿಟ್ಟನ್ನು ವೇಗವಾಗಿ ಹುಳಿ ಬರಿಸುತ್ತವೆ.

36
ಪ್ರೆಶರ್ ಕುಕ್ಕರ್ ಟ್ರಿಕ್

ಪ್ರೆಶರ್ ಕುಕ್ಕರ್ ಟ್ರಿಕ್
ಹಿಟ್ಟಿಗೆ ಸ್ವಲ್ಪ ಉಪ್ಪು ಸೇರಿಸಿ ಒಂದು ಸ್ಟೀಲ್ ಪಾತ್ರೆಯಲ್ಲಿ ಹಾಕಿಡಿ. ಪ್ರೆಶರ್ ಕುಕ್ಕರ್ ಅನ್ನು ಸ್ವಲ್ಪ ಸಮಯ ಬಿಸಿ ಮಾಡಿ ನಂತರ ಸ್ಟವ್ ಆರಿಸಿ. ಈಗ ಹಿಟ್ಟಿನ ಪಾತ್ರೆಯನ್ನು ಕುಕ್ಕರ್ ಒಳಗಿಟ್ಟು ಮುಚ್ಚಳ ಮುಚ್ಚಿ. ಕುಕ್ಕರ್ ಒಳಗಿನ ಶಾಖಕ್ಕೆ ಹಿಟ್ಟು ಬಹಳ ಬೇಗನೆ ಉಬ್ಬಿ ಬರುತ್ತದೆ.

ಕುಕ್ಕರ್ ತುಂಬಾ ಬಿಸಿ ಮಾಡಬೇಡಿ. ನಿಮ್ಮ ಕೈನಿಂದ ಕುಕ್ಕರ್ ಮುಟ್ಟಿದಾಗ ಅದು ಬೆಚ್ಚಗೆ ಇರಬೇಕೇ ಹೊರತು ಸುಡುವಷ್ಟು ಬಿಸಿ ಇರಬಾರದು. ತುಂಬಾ ಬಿಸಿಯಾದರೆ ಹಿಟ್ಟಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ಸತ್ತುಹೋಗಿ ಹಿಟ್ಟು ಕೆಟ್ಟುಹೋಗಬಹುದು.

46
ಸರಿಯಾದ ಪಾತ್ರೆಯ ಆಯ್ಕೆ

ಸರಿಯಾದ ಪಾತ್ರೆಯ ಆಯ್ಕೆ
ಹಿಟ್ಟು ಬೇಗನೆ ಹುಳಿ ಬರಲು ಸ್ಟೇನ್‌ಲೆಸ್ ಸ್ಟೀಲ್ ಅಥವಾ ಮಣ್ಣಿನ ಪಾತ್ರೆಗಳನ್ನು ಬಳಸುವುದು ಉತ್ತಮ. ಇವು ಸರಿಯಾದ ತಾಪಮಾನವನ್ನು ದೀರ್ಘಕಾಲದವರೆಗೆ ಕಾಯ್ದುಕೊಳ್ಳಲು ಸಹಾಯ ಮಾಡುತ್ತವೆ.

56
ಮೊಸರು ಮತ್ತು ಸಕ್ಕರೆಯ ಬಳಕೆ

ಮೊಸರು ಮತ್ತು ಸಕ್ಕರೆಯ ಬಳಕೆ
ಹಿಟ್ಟು ರುಬ್ಬಿದ ನಂತರ ಅದಕ್ಕೆ ಸ್ವಲ್ಪ ಮೊಸರು ಮತ್ತು ಒಂದು ಚಿಟಿಕೆ ಸಕ್ಕರೆ ಸೇರಿಸಿ ಚೆನ್ನಾಗಿ ಕಲಸಿ. ಕೆಲವರು ಸ್ವಲ್ಪ ನಿಂಬೆ ರಸ ಅಥವಾ ಕಲ್ಲುಪ್ಪನ್ನು ಸಹ ಬಳಸುತ್ತಾರೆ. ನಂತರ ಇದನ್ನು ಬೆಚ್ಚಗಿನ ಜಾಗದಲ್ಲಿಟ್ಟರೆ ಹಿಟ್ಟು ಬೇಗ ರೆಡಿಯಾಗುತ್ತದೆ.

66
ಅವಸರವಿದ್ದಾಗ ಮಾತ್ರ ಬಳಸಿ

ಗಮನಿಸಿ: ಈ ಟಿಪ್ಸ್‌ಗಳನ್ನು ನಿಮಗೆ ತುಂಬಾ ಅವಸರವಿದ್ದಾಗ ಮಾತ್ರ ಬಳಸಿ. ದೋಸೆ ರುಚಿಯಾಗಿರಲು ಮತ್ತು ಆರೋಗ್ಯದ ದೃಷ್ಟಿಯಿಂದ (ಜೀರ್ಣಕ್ರಿಯೆಗೆ) ಹಿಟ್ಟು ನೈಸರ್ಗಿಕವಾಗಿ 6 ರಿಂದ 8 ಗಂಟೆಗಳ ಕಾಲ ಹುಳಿ ಬರುವುದೇ ಅತ್ಯುತ್ತಮ ವಿಧಾನ. ಬೆಳಿಗ್ಗೆ ಎದ್ದ ತಕ್ಷಣ ನೀವು ಈ ಕೆಲಸ ಮಾಡಿದರೆ, ಸ್ನಾನ ಮಾಡಿ ಪೂಜೆ ಮುಗಿಸಿ ಬರುವಷ್ಟರಲ್ಲಿ ಹಿಟ್ಟು ದೋಸೆ ಹಾಕಲು ರೆಡಿಯಾಗಿರುತ್ತದೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories