Mallige Idli Secrets: ಬೇಯಿಸಿರುವ ಇಡ್ಲಿಯನ್ನು ಕುಕ್ಕರ್‌ನಿಂದ ತೆಗೆಯುವ ವಿಧಾನಗಳು

Published : Aug 27, 2026, 12:52 PM IST

ಮೃದುವಾದ ಇಡ್ಲಿ ಮಾಡಲು ಹಿಟ್ಟು ರುಬ್ಬಿಕೊಳ್ಳೋದರ ಜೊತೆ ಮಾಡುವಾಗ ಕೆಲವೊಂದು ಸಲಹೆಗಳನ್ನು ಪಾಲನೆ ಮಾಡಬೇಕಾಗುತ್ತದೆ. ಕುಕ್ಕರ್‌ನಿಂದ ಇಡ್ಲಿ ಹೇಗೆ ತೆಗೆಯಬೇಕು ಎಂಬುದರ ವಿವರವಾದ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.

PREV
15
ಮಲ್ಲಿಗೆಯಂತಹ ಇಡ್ಲಿ

ಮಲ್ಲಿಗೆಯಂತಹ ಇಡ್ಲಿ ಮಾಡೋದು ಸಹ ಒಂದು ಕಲೆಯಾಗಿದೆ. ಮೃದುವಾದ ಇಡ್ಲಿ ಮಾಡೋದು ಹೇಗೆ ಅಂತ ಕೇಳಿದ್ರೆ ಬಹುತೇಕರು ಹಿಟ್ಟು ರುಬ್ಬಿಕೊಳ್ಳುವ ವಿಧಾನದ ಬಗ್ಗೆಯೇ ಹೇಳುತ್ತಾರೆ. ಆದ್ರೆ ಕುಕ್ಕರ್‌ನಿಂದಲೇ ಬೇಯಿಸಿರುವ ಇಡ್ಲಿಯನ್ನು ತೆಗೆಯೋದು ಸಹ ಪ್ರಮುಖವಾಗುತ್ತದೆ. ಬೇಯಿಸಿರುವ ಇಡ್ಲಿಯನ್ನು ಕುಕ್ಕರ್‌ನಿಂದ ಹೇಗೆ ತೆಗೆಯಬೇಕು ಎಂದು ನೋಡೋಣ ಬನ್ನಿ.

25
ಕುಕ್ಕರ್ ಇಳಿಸಿಕೊಳ್ಳುತ್ತಿದ್ದಂತೆ ಮುಚ್ಚಳ ತೆಗೆಯಬಾರದು

ಇಡ್ಲಿ ಹಿಟ್ಟನ್ನು ಪಾತ್ರೆಗೆ ಹಾಕಿಕೊಳ್ಳುತ್ತಿದ್ದಂತೆ ಕಡಿಮೆ ಉರಿಯಲ್ಲಿಯೇ 5 ರಿಂದ 10 ನಿಮಿಷ ಬೇಯಿಸಿಕೊಳ್ಳಬೇಕು. ನಂತರ ಕುಕ್ಕರ್‌ನ್ನು ಒಲೆಯಿಂದ ಇಳಿಸಿಕೊಂಡು ಪಕ್ಕದಲ್ಲಿಯೇ ಇಟ್ಟುಕೊಳ್ಳಿ. ಕುಕ್ಕರ್ ಇಳಿಸಿಕೊಳ್ಳುತ್ತಿದ್ದಂತೆ ಮುಚ್ಚಳ ತೆಗೆಯಬಾರದು. ಕನಿಷ್ಠ ಮೂರು ನಿಮಿಷಗಳಾದ್ರೂ ಮುಚ್ಚಳ ತೆಗೆಯಬಾರದು. ಈ ರೀತಿ ಮಾಡೋದರಿಂದ ಒಳಗಿನ ಹಬೆಯಲ್ಲಿಯೇ ಇಡ್ಲಿ ಮತ್ತಷ್ಟು ಬೇಯುತ್ತದೆ.

35
ಪರ್ಫೆಕ್ಟ್ ಶೇಪ್ ಇಡ್ಲಿ

ಒಲೆಯಿಂದ ಇಳಿಸಿದ ಕೂಡಲೇ ಕುಕ್ಕರ್ ಮುಚ್ಚಳ ತೆಗೆದು ಇಡ್ಲಿ ತೆಗೆಯಲು ಹೋದ್ರೆ, ಹಿಟ್ಟು ಪ್ಲೇಟ್‌ಗೆ ಅಂಟಿಕೊಳ್ಳುತ್ತದೆ. ಇದರಿಂದ ಪ್ರತಿಬಾರಿ ಇಡ್ಲಿ ಹಿಟ್ಟು ಹಾಕಿಕೊಳ್ಳುವಾಗ ಪದೇ ಪದೇ ಪ್ಲೇಟ್ ಕ್ಲೀನ್ ಮಾಡಿಕೊಳ್ಳಬೇಕಾಗುತ್ತದೆ. ಇದರಿಂದ ಹೆಚ್ಚು ಸಮಯ ವ್ಯಯವಾಗುತ್ತದೆ. ಹಬೆಯಲ್ಲಿ ಇಡ್ಲಿ ಬೆಂದಾಗ ತಟ್ಟೆಗೆ ಅಂಟಿಕೊಳ್ಳದೇ ಮೇಲೆ ಬರುತ್ತದೆ. ಇದರಿಂದ ನಿಮ್ಮ ಇಡ್ಲಿಗೆ ಪರ್ಫೆಕ್ಟ್ ಶೇಪ್ ಸಿಗುತ್ತದೆ.

45
ಒದ್ದೆ ಬಟ್ಟೆ ಬಳಕೆ ಸಲಹೆ

ಇನ್ನು ಇಡ್ಲಿ ಹಿಟ್ಟು ಪಾತ್ರೆಗೆ ಹಾಕಿಕೊಳ್ಳುವ ಮುನ್ನ ಬಟ್ಟೆ ಬಳಕೆ ಮಾಡಬಹುದು. ಇಡ್ಲಿ ಸೆಟ್‌ ಮೇಲೆ ಒದ್ದೆಯಾಗಿರೋ ತೆಳುವಾದ ಕಾಟನ್ ಬಟ್ಟೆ ಹರಡಿಕೊಳ್ಳಬೇಕು. ನಂತರ ಅಚ್ಚುಗಳ ಮೇಲೆ ಹಿಟ್ಟನ್ನು ಸುರಿದುಕೊಳ್ಳಬೇಕು. ಹೀಗೆ ಮಾಡೋದರಿಂದ ಇಡ್ಲಿ ಪಾತ್ರೆಗೆ ಅಂಟಿಕೊಳ್ಳದೇ ಚೆಂದವಾಗಿ ಮೇಲೆ ಬರುತ್ತದೆ. ತಟ್ಟೆ ಮೇಲಿಂದ ಬಟ್ಟೆ ತೆಗೆದ್ರೆ ಸಾಕು ಇಡ್ಲಿ ಕೈಗೆ ಸಿಗುತ್ತದೆ.

55
ತಣ್ಣೀರು ಚುಮುಕಿಸಿ ಇಡ್ಲಿ ತೆಗೆಯಿರಿ

ದೊಡ್ಡ ಪ್ರಮಾಣದಲ್ಲಿ ಇಡ್ಲಿಗಳನ್ನು ಮಾಡುತ್ತಿದ್ದರೆ ಈ ಬಟ್ಟೆ ಐಡಿಯಾ ನಿಮ್ಮ ಕೆಲಸವನ್ನು ಹೆಚ್ಚು ಸುಲಭವನ್ನಾಗಿ ಮಾಡುತ್ತದೆ. ಕೆಲವರು ಕುಕ್ಕರ್‌ನಿಂದ ಪಾತ್ರೆಗಳನ್ನು ಹೊರಗೆ ತೆಗೆಯುತ್ತಿದ್ದಂತೆ ತಣ್ಣೀರು ಚುಮುಕಿಸಿ ಇಡ್ಲಿಗಳನ್ನು ತೆಗೆಯುತ್ತಾರೆ. ಯಾವುದೇ ವಿಧದ ಇಡ್ಲಿ ಮಾಡಿದ್ರೂ ಈ ಸರಳ ವಿಧಾನಗಳನ್ನು ಪಾಲನೆ ಮಾಡೋದು ಉತ್ತಮ ಎಂದು ಅಡುಗೆತಜ್ಞರು ಸಲಹೆ ನೀಡುತ್ತಾರೆ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories