ಬೆಣ್ಣೆಯಂತಹ ಮೃದುವಾದ ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅಂತಹ ಇಡ್ಲಿಗಳನ್ನು ಮಾಡಲು ನೀವು ಪಾಲಿಸಬೇಕಾದ ಕೆಲವು ಟಿಪ್ಸ್‌ಗಳು ಇಲ್ಲಿವೆ.
ಉದ್ದಿನ ಬೇಳೆಯನ್ನು ಎರಡರಿಂದ ಮೂರು ಗಂಟೆಗಳ ಕಾಲ ನೆನೆಹಾಕಬೇಕು. ಅದಕ್ಕಿಂತ ಹೆಚ್ಚು ಹೊತ್ತು ನೆನೆಸಿದರೆ ಹಿಟ್ಟು ಹುಳಿಯಾಗಿ ಇಡ್ಲಿ ಗಟ್ಟಿಯಾಗುವ ಸಾಧ್ಯತೆ ಇರುತ್ತದೆ.
ಇಡ್ಲಿ ಮಾಡಲು ಅಕ್ಕಿಯನ್ನು ಮೂರರಿಂದ ನಾಲ್ಕು ಗಂಟೆಗಳ ಕಾಲ ನೆನೆಸಿದರೆ ಸಾಕು. ಅದಕ್ಕಿಂತ ಹೆಚ್ಚು ಕಾಲ ನೆನೆಹಾಕಬಾರದು.
ಅಕ್ಕಿ ರುಬ್ಬುವಾಗ, ನೀರಿನಲ್ಲಿ ನೆನೆಸಿದ ಮೆಂತ್ಯ ಮತ್ತು ಸ್ವಲ್ಪ ಅನ್ನವನ್ನು ಸೇರಿಸಿ ರುಬ್ಬಿದರೆ ಇಡ್ಲಿಗಳು ಇನ್ನಷ್ಟು ಮೃದುವಾಗಿ ಬರುತ್ತವೆ.
ಇಡ್ಲಿ ಹಿಟ್ಟು ಮೃದುವಾಗಿರಲು ನೆನೆಸಿದ ಅವಲಕ್ಕಿಯನ್ನು ಸಹ ಸೇರಿಸಿ ರುಬ್ಬಿಕೊಳ್ಳಬಹುದು. ಇದರಿಂದ ಇಡ್ಲಿಗಳು ತುಂಬಾ ಮೃದುವಾಗಿ ಬರುತ್ತವೆ.
ಇಡ್ಲಿ ಹಿಟ್ಟನ್ನು ಗ್ರೈಂಡರ್‌ನಲ್ಲಿ ರುಬ್ಬುವಾಗ ತಣ್ಣೀರು ಬಳಸುವುದರಿಂದ ಹಿಟ್ಟು ನಯವಾಗಿ ಬರುತ್ತದೆ. ಇದರಿಂದ ಇಡ್ಲಿಗಳು ಮೃದುವಾಗಿರುತ್ತವೆ.
Banned Indian Foods: ವಿದೇಶಗಳಲ್ಲಿ ಬ್ಯಾನ್ ಆದ ಭಾರತೀಯ ಆಹಾರಗಳ ಪಟ್ಟಿ
ಈ ಪದಾರ್ಥ ಸೇರಿಸಿ ಒಗ್ಗರಣೆ ಹಾಕಿ.. ಮುಖ ಮಾತ್ರವಲ್ಲ ಗೋಡೆಗೂ ಎಣ್ಣೆ ಸಿಡಿಯಲ್ಲ
ತಿಂಡಿಯಿಂದ ಸ್ವೀಟ್‌ವರೆಗೆ, ಅತ್ಯಂತ ರುಚಿ ಹಾಗೂ ಪೋಷಕಾಂಶದ ಅವಕಾಡೋ ರೆಸಿಪಿ
ಚಿಕನ್ ರೆಸಿಪಿ ಮಾಡುವಾಗ ಮೊಸರು ಮಿಕ್ಸ್ ಮಾಡೋದು ಯಾಕೆ ಗೊತ್ತಾ?