ಸದ್ಯ ಟೊಮೆಟೊ ಬೆಲೆ ಗಗನಮುಖಿಯಾಗಿದೆ. ಜನರು ಟೊಮೆಟೋ ಖರೀದಿಸಲು ಹಿಂದೇಟು ಹಾಕುವಂತಾಗಿದೆ. ಟೊಮೆಟೋ ಬೆಲೆ ಹೆಚ್ಚಳದಿಂದಾಗಿ, ಬದಲಿಯಾಗಿ ನಿಂಬೆ, ಹುಣಸೇಹುಳಿಯನ್ನು ಬಳಸಲಾಗುತ್ತಿದೆ. ಆದರೆ ನಿಜವಾಗಿಯೂ ಹೇಳುವುದಾದರೆ ಭಾರತೀಯ ಅಡುಗೆ ಮನೆ ಟೊಮೆಟೋ ಇಲ್ಲದೆ ಅಪೂರ್ಣ.
ಟೊಮೆಟೋ ಸೇವನೆಯಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನವಿದೆ. ಆದರೆ ಟೊಮೇಟೊಗಳನ್ನು ಅತಿಯಾಗಿ ತಿನ್ನುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು ಎಂದು ಹಲವರು ಹೇಳುತ್ತಾರೆ. ಇದು ನಿಜಾನ?
ಟೊಮೆಟೊಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಟೊಮೆಟೊವನ್ನು ನಿಯಮಿತವಾಗಿ ಸೇವಿಸುವುದರಿಂದ ಮೂತ್ರಪಿಂಡದ ಕಲ್ಲುಗಳು ಉಂಟಾಗಬಹುದು ಎಂದು ಹಲವರು ನಂಬುತ್ತಾರೆ. ಹಾಗಾಗಿಯೇ ಈ ಭಯದಿಂದ ಎಷ್ಟೋ ಜನ ಟೊಮೇಟೊವನ್ನು ಸೇವಿಸುವುದಿಲ್ಲ. ಆದರೆ ಟೊಮ್ಯಾಟೊ ನಿಜವಾಗಿಯೂ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗುತ್ತದೆಯೇ? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆಂದು ತಿಳಿಯೋಣ.
ಟೊಮೇಟೊ ತಿಂದರೆ ಕಿಡ್ನಿಯಲ್ಲಿ ಕಲ್ಲು ಉಂಟಾಗುತ್ತದೆ ಎಂಬ ವಾದದಲ್ಲಿ ಸತ್ಯಾಂಶವಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಟೊಮೆಟೊ ಸೇವನೆಯಿಂದ ಕಿಡ್ನಿಯಲ್ಲಿ ಕಲ್ಲುಗಳಾಗುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ. ಆದರೆ ಈಗಾಗ್ಲೇ ಮೂತ್ರಪಿಂಡದಲ್ಲಿ ಕಲ್ಲು ಸಮಸ್ಯೆ ಇರುವವರು ಹೆಚ್ಚುವರಿ ಟೊಮೆಟೋ ತಿಂದರೆ ಕಿಡ್ನಿ ಸ್ಟೋನ್ ಸಮಸ್ಯೆ ಹೆಚ್ಚಬಹುದು ಎಂದು ತಜ್ಞರು ತಿಳಿಸಿದ್ದಾರೆ.
ಟೊಮೆಟೊದಲ್ಲಿರುವ ಆಕ್ಸಲೇಟ್ ಮೂತ್ರಪಿಂಡದ ಕಲ್ಲುಗಳಿಗೆ ಕಾರಣವಾಗಬಹುದು. ಈಗಾಗಲೇ ಮೂತ್ರಪಿಂಡದ ಕಲ್ಲುಗಳ ಸಮಸ್ಯೆ ಇದ್ದರೆ, ಟೊಮೆಟೊದಲ್ಲಿರುವ ಆಕ್ಸಲೇಟ್ ಮತ್ತೆ ಕಲ್ಲುಗಳನ್ನು ರೂಪಿಸಲು ಕಾರಣವಾಗಬಹುದು. ಹಾಗಾಗಿ ಕಿಡ್ನಿ ಸ್ಟೋನ್ ಇರುವವರು ಹೆಚ್ಚು ಟೊಮೆಟೊ ತಿನ್ನಬಾರದು ಎಂದು ಸೂಚಿಸಲಾಗುತ್ತದೆ. ಆದರೆ ಟೊಮೆಟೊಗಳನ್ನು ಸಂಪೂರ್ಣವಾಗಿ ತ್ಯಜಿಸುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
ಟೊಮೇಟೋ ತಿಂದರೆ ಆರೋಗ್ಯಕ್ಕೆ ಹಾನಿಯಿಲ್ಲ. ಆದರೆ ಕೆಲವು ವಿಷಯಗಳನ್ನು ತಿಳಿದುಕೊಳ್ಳುವುದು ಮುಖ್ಯ. ಅಸಿಡಿಟಿ ಇರುವವರು ಟೊಮೆಟೊ ತಿಂದರೆ ಹೊಟ್ಟೆ ಉರಿಯಂತಹ ಸಮಸ್ಯೆಗಳು ಬರುತ್ತವೆ. ಅದಕ್ಕಾಗಿಯೇ ಅಸಿಡಿಟಿ ಇರುವವರು ಟೊಮೆಟೊ ತಿನ್ನುವುದನ್ನು ಕಡಿಮೆ ಮಾಡಬೇಕು.
ಲವು ಜನರು ಟೊಮೆಟೊದ ಅಲರ್ಜಿಯನ್ನು ಹೊಂದಿರುತ್ತಾರೆ. ಆದರೆ ಇದು ಬಹಳ ಅಪರೂಪ. ಇಂಥವರು ಟೊಮೆಟೋ ತಿನ್ನುವುದನ್ನು ತಪ್ಪಿಸಬೇಕು. ಟೊಮ್ಯಾಟೋಸ್ ಕೆಲವು ಔಷಧಿಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡುತ್ತದೆ.
ರಕ್ತ ಹೆಪ್ಪುಗಟ್ಟುವಿಕೆ ಔಷಧಿಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಇದು ಕೂಡ ಟೊಮೇಟೊದಿಂದ ಉಂಟಾಗುವ ಸಮಸ್ಯೆ. ಆದರೆ ಇದೆಲ್ಲವೂ ನೀವು ಟೊಮೆಟೊಗಳನ್ನು ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದು ಅರ್ಥವಲ್ಲ. ಟೊಮ್ಯಾಟೊ ಹೆಚ್ಚಿನ ಜನರಿಗೆ ಯಾವುದೇ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.