Chicken Skin Health Benefits: ಅನೇಕ ಜನರಿಗೆ ಭಾನುವಾರ ಚಿಕನ್ ಇಲ್ಲದೆ ಊಟ ಅಪೂರ್ಣ. ರುಚಿಕರವಾದ ಚಿಕನ್ ತುಂಡನ್ನು ಆನಂದಿಸುವ ನಮಗೆ ಅದರ ಮೇಲಿನ ಚರ್ಮದ ಬಗ್ಗೆ ಯಾವಾಗಲೂ ದೊಡ್ಡ ಸಂದೇಹವಿರುತ್ತದೆ. ಕೆಲವರು ಇದು ಅದ್ಭುತ ರುಚಿ ಕೊಡುತ್ತದೆ ಎಂದರೆ, ಮತ್ತೆ ಕೆಲವರು ಆರೋಗ್ಯಕ್ಕೆ ಹಾನಿಕಾರಕ ಅಂತಾರೆ.
ಮಾಂಸಾಹಾರಿ ಪ್ರಿಯರಿಗೆ ಕೋಳಿ ಮಾಂಸ ಅಂದ್ರೆ ಜೀವ. ಭಾನುವಾರ ಬಂತೆಂದರೆ ಸಾಕು ಒಂದು ತುಂಡು ಕೋಳಿ ಮಾಂಸಕ್ಕೆ ಜಗಳ ಶುರುವಾಗುತ್ತದೆ. ಆದರೆ ಕೋಳಿ ಮಾಂಸ ಬೇಯಿಸುವ ಮೊದಲು ಹಲವರಿಗೆ ಇರುವ ದೊಡ್ಡ ಅನುಮಾನವೆಂದರೆ "ನಾನು ಕೋಳಿ ಮಾಂಸದ ಸ್ಕಿನ್ (ಚರ್ಮ) ತೆಗೆಯಬೇಕೇ ಅಥವಾ ಬೇಡವೇ?" ಎಂಬುದು. ಅನೇಕ ಜನರು ಸ್ಕಿನ್ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ. ಅದಕ್ಕಾಗಿಯೇ ಅವರು ಹೆಚ್ಚಾಗಿ ಸ್ಕಿನ್ ಲೆಸ್ ಕೋಳಿ ಮಾಂಸವನ್ನು ತಿನ್ನುತ್ತಾರೆ. ಇತರರು ರುಚಿಗಾಗಿ ಅದನ್ನು ಬಯಸುತ್ತಾರೆ. ಹಾಗಾದ್ರೆ ಈಗ ರಿಯಾಲಿಟಿ ಏನೆಂದು ನೋಡೋಣ.
26
ಕೋಳಿ ಚರ್ಮ ಅಥವಾ ಸ್ಕಿನ್‌ನಲ್ಲಿ ಏನಿದೆ?
ಪೌಷ್ಟಿಕತಜ್ಞರ ವಿಶ್ಲೇಷಣೆಯ ಪ್ರಕಾರ, ಕೋಳಿ ಸ್ಕಿನ್ ಮೂರನೇ ಎರಡರಷ್ಟು ಕೊಬ್ಬನ್ನು ಹೊಂದಿರುತ್ತದೆ. ಆದರೆ ಆಶ್ಚರ್ಯಕರ ಸಂಗತಿಯೆಂದರೆ ಆ ಕೊಬ್ಬಿನಲ್ಲಿ ಹೆಚ್ಚಿನವು ಅಪರ್ಯಾಪ್ತ ಕೊಬ್ಬು. ಇದು ಹೃದಯಕ್ಕೆ ಒಳ್ಳೆಯದಾದ ಒಮೆಗಾ-6 ನಂತಹ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ರಕ್ತದ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.
36
ಕ್ಯಾಲೊರಿ ಎಣಿಸುವುದು ಹೇಗೆ?
ನೀವು ತೂಕ ಹೆಚ್ಚಿಸಿಕೊಳ್ಳಲು ಬಯಸದಿದ್ದರೆ ಕೋಳಿ ಸ್ಕಿನ್ ಬಗ್ಗೆ ಜಾಗರೂಕರಾಗಿರಬೇಕು. ಚರ್ಮರಹಿತ ಕೋಳಿ (170 ಗ್ರಾಂ): ಕೇವಲ 280 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಚರ್ಮವಿರುವ ಕೋಳಿ (170 ಗ್ರಾಂ): ಸುಮಾರು 380 ಕ್ಯಾಲೊರಿಗಳನ್ನು ಹೊಂದಿರುತ್ತದೆ. ಅಂದರೆ ಚರ್ಮವಿರುವ ಕೋಳಿ ದೇಹಕ್ಕೆ ಸುಮಾರು 100 ಹೆಚ್ಚುವರಿ ಕ್ಯಾಲೊರಿಗಳನ್ನು ಸೇರಿಸುತ್ತದೆ.
ಸ್ಕಿನ್ ಸಹಿತ ಕೋಳಿ ಮಾಂಸವನ್ನು ಬೇಯಿಸುವುದರಿಂದ ಹೆಚ್ಚಿನ ಪ್ರಯೋಜನವಿದೆ. ಅಡುಗೆ ಮಾಡುವಾಗ, ಚರ್ಮದಲ್ಲಿರುವ ನೈಸರ್ಗಿಕ ಎಣ್ಣೆ ಮಾಂಸವನ್ನು ಭೇದಿಸುತ್ತದೆ. ಇದರಿಂದಾಗಿ ಚಿಕನ್ ಮೃದುವಾಗುತ್ತದೆ ಮತ್ತು ಗಟ್ಟಿಯಾಗಿರುವುದಿಲ್ಲ. ಸ್ಕಿನ್ ಸಮೇತ ಕೋಳಿ ಮಾಂಸವನ್ನು ಬೇಯಿಸುವುದು ಮತ್ತು ತಿನ್ನುವಾಗ ತೆಗೆದುಹಾಕುವುದು ಉತ್ತಮ ಮಾರ್ಗವಾಗಿದೆ. ಇದು ರುಚಿಯನ್ನು ಹೆಚ್ಚಿಸುತ್ತದೆ. ಅನಗತ್ಯ ಕೊಬ್ಬು ಕೂಡ ದೇಹವನ್ನು ಪ್ರವೇಶಿಸುವುದಿಲ್ಲ.
56
ಇವರೆಲ್ಲಾ ಸ್ಕಿನ್ ತಿನ್ನಬಾರದು
ಕೋಳಿ ಚರ್ಮವು ಆರೋಗ್ಯಕ್ಕೆ ಸ್ವಲ್ಪ ಮಟ್ಟಿಗೆ ಪ್ರಯೋಜನಕಾರಿಯಾಗಿದ್ದರೂ, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಅದನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ.
ತೂಕ ಇಳಿಸಿಕೊಳ್ಳಲು ಬಯಸುವವರು: ಹೆಚ್ಚುವರಿ ಕ್ಯಾಲೋರಿ ತೂಕ ಹೆಚ್ಚಾಗಲು ಕಾರಣವಾಗಬಹುದು. ಹೃದಯ ಕಾಯಿಲೆ ಇರುವ ಜನರು: ರಕ್ತ ಹೆಪ್ಪುಗಟ್ಟುವ ಅಪಾಯದಲ್ಲಿರುವ ಜನರು ಚರ್ಮವನ್ನು ಬಳಸುವುದನ್ನು ತಪ್ಪಿಸಬೇಕು. ಮಧುಮೇಹ: ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಕಡಿಮೆ ಕೊಬ್ಬಿನ ಪ್ರೋಟೀನ್ ಸೇವಿಸಿ. ಅಧಿಕ ಕೊಲೆಸ್ಟ್ರಾಲ್: ಈಗಾಗಲೇ ಅಧಿಕ ಕೊಲೆಸ್ಟ್ರಾಲ್ ಮಟ್ಟವನ್ನು ಹೊಂದಿರುವ ಜನರು ಚರ್ಮರಹಿತ ಕೋಳಿ ಮಾಂಸವನ್ನು ತಿನ್ನುವುದು ಉತ್ತಮ.
66
ಈಗ ನೀವು ನಿರ್ಧರಿಸಿ
ಜಿಮ್‌ಗೆ ಹೋಗುವವರು ಮತ್ತು ಸ್ನಾಯುಗಳನ್ನು ಬೆಳೆಸಲು ಬಯಸುವವರು ಕೋಳಿ ಮಾಂಸವನ್ನು ತಿನ್ನುವುದರಿಂದ ಹೆಚ್ಚಿನ ಪ್ರೋಟೀನ್ ಪಡೆಯಬಹುದು. ಒಟ್ಟಾರೆಯಾಗಿ ಯಾವುದೇ ಆಹಾರವನ್ನು ಮಿತವಾಗಿ ಸೇವಿಸಿದರೆ ಆರೋಗ್ಯಕರವಾಗಿರುತ್ತದೆ. ಆದರೆ ನಿಮ್ಮ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿ ಅದನ್ನು ಚರ್ಮ ಸಮೇತ ತಿನ್ನಬೇಕೆ ಅಥವಾ ಬೇಡವೇ ಎಂದು ನೀವು ನಿರ್ಧರಿಸಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.