ಮಿಕ್ಸರ್ ಗ್ರೈಂಡರ್‌ನಲ್ಲಿ ಹಿಟ್ಟು ರುಬ್ಬುವಾಗ ಶಾಖಕ್ಕೆ ಹಿಟ್ಟು ಬೇಗನೆ ಬಿಸಿಯಾಗುತ್ತದೆ. ಹಿಟ್ಟು ಬಿಸಿಯಾದಾಗ, ಅದರಲ್ಲಿರುವ ನೈಸರ್ಗಿಕ ಬ್ಯಾಕ್ಟೀರಿಯಾಗಳು ನಾಶವಾಗಬಹುದು. ಐಸ್ ಕ್ಯೂಬ್ ಹಾಕುವುದರಿಂದ ಹಿಟ್ಟು ತಂಪಾಗುವುದು. ಮಿಕ್ಸಿ ಜಾರ್ ಕೂಡ ಅಷ್ಟು ಬಿಸಿಯಾಗುವುದಿಲ್ಲ.
25
ಹಿಟ್ಟು ತಂಪಾಗಿರಬೇಕು
ಹಿಟ್ಟು ತಂಪಾದರೆ ಉದ್ದಿನಬೇಳೆ ಚೆನ್ನಾಗಿ ಉಬ್ಬುತ್ತದೆ (Fluffy). ಆಗ ಇಡ್ಲಿಗಳು ಮಲ್ಲಿಗೆಯಂತೆ ಮೃದುವಾಗಿ ಬರುತ್ತವೆ
35
ಹಿಟ್ಟು ಬೇಗ ಹುಳಿ ಬರಲ್ಲ
ಹಿಟ್ಟು ಬಿಸಿಯಾದಾಗ ಅದರ ರುಚಿ ಬದಲಾಗುತ್ತದೆ, ಬೇಗ ಹುಳಿ ಬರಬಹುದು. ಐಸ್ ಕ್ಯೂಬ್ ಬಳಸುವುದರಿಂದ ಹಿಟ್ಟಿನ ಅಸಲಿ ರುಚಿ, ಬಿಳಿ ಬಣ್ಣ ಹಾಗೆಯೇ ಇರುತ್ತದೆ
ಹಿಟ್ಟು ರುಬ್ಬುವಾಗಲೇ ಬಿಸಿಯಾದರೆ, ಅದು ಹುದುಗಲು ಆರಂಭ ಆಗುತ್ತದೆ. ಆಗ ಹಿಟ್ಟು ಸರಿಯಾಗಿ ಉಬ್ಬುವುದಿಲ್ಲ. ಐಸ್ ಕ್ಯೂಬ್ ಹಾಕಿದಾಗ, ಹಿಟ್ಟು ನಿಧಾನವಾಗಿ ಹುದುಗುತ್ತದೆ.
55
ಬೇಗ ನುಣ್ಣಗೆ ಆಗುತ್ತದೆ
ತಣ್ಣನೆ ನೀರು ಹಾಕಿದಾಗ ಅಕ್ಕಿ, ಬೇಳೆಗಳು ಬೇಗನೆ ನುಣ್ಣಗೆ ಆಗುತ್ತವೆ. ಐಸ್ ಕ್ಯೂಬ್‌ಗಳು ನೀರಿನಂಶ ಕೊಟ್ಟು, ಹಿಟ್ಟಿನ ಸಾಂದ್ರತೆಯನ್ನು ಕಾಪಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.